ಹಳೆ ಪಿಂಚಣಿ ಯೋಜನೆ ಜಾರಿ ಹೋರಾಟದಲ್ಲಿ ಸುರಪುರ ತಾಲೂಕಿನ ನೂರಾರು ಶಿಕ್ಷಕರು ಭಾಗಿ

0
17

ಸುರಪುರ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ವತಿಯಿಂದ ಬೆಂಗಳೂರ ಫ್ರೀಡಂ ಪಾರ್ಕನಲ್ಲಿ ನಡೆಯುತ್ತಿರುವ ಹೋರಾಟ 73ದಿನಗಳಿಗೆ ಕಾಲಿಟಿದ್ದು ಬಿಜೆಪಿ ಮುಖಂಡ ಹಾಗೂ ಕೆವೈ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್‍ರವರು ಬೆಂಗಳೂರನ ಫ್ರೀಡಂ ಪಾರ್ಕಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಅನುದಾನಿತ ನೌಕರರ ನಡೆಸುತ್ತಿರುವ ಹೋರಾಟ ನ್ಯಾಯೋಚಿತವಾಗಿದ್ದು ಪಿಂಚಣಿ ಎನ್ನುವುದು ಸಂವಿಧಾನ ಬದ್ಧ ಹಕ್ಕಾಗಿದೆ ಅನೇಕ ವರ್ಷಗಳಿಂದ ಅನುದಾನ ರಹಿತವಾಗಿ ಯಾವುದೇ ವೇತನವಿಲ್ಲದೇ ದುಡಿದಿರುವ ಅನುದಾನಿತ ನೌಕರರು ಅನುದಾನಕ್ಕೆ ಒಳಪಟ್ಟ ನಂತರ ತಮ್ಮ ಸೇವಾವಧಿಯನ್ನು ಪೂರೈಸಿ ನಿವೃತ್ತಿಗೊಂಡ ನಂತರ ಕೊನೆಯ ತಿಂಗಳ ವೇತನವನ್ನು ಪಡೆದುಕೊಂಡು ಖಾಲಿ ಕೈಲಿ ಮನೆಗೆ ಹೋಗುವ ಪರಿಸ್ಥಿತಿ ಉದ್ಭವಿಸಿರುವುದು ನಿಜಕ್ಕೂ ಘೋರ ಅನ್ಯಾಯ ಇದರಿಂದ ನಿವೃತ್ತಿಯ ನಂತರ ಮುಪ್ಪಿನ ಕಾಲದಲ್ಲಿ ನೌಕರರಿಗೂ ಮಾತ್ರವಲ್ಲದೆ ಇವರನ್ನು ಅವಲಂಬಿಸಿರುವ ಕುಟುಂಬ ತುಂಬಾ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಅನುದಾನಿತ ನೌಕರರಿಗೆ ಜ್ಯೋತಿ ಆರೋಗ್ಯ ಸಂಜೀವಿನ ಕೂಡಾ ಅನ್ವಯಿಸದೇ ಇರುವುದು ತುಂಬಾ ಖೇದನೀಯ ಕೂಡಲೇ ಅನುದಾನಿತ ಸಂಸ್ಥೆಗಳ ನೌಕರರು ಇಟ್ಟಿರುವ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ನೌಕರರು ಕಳೆದ 73 ದಿನಗಳಿಂದ ಹೋರಾಟದ ಕುರಿತು ಸ್ಥಳೀಯ ಶಾಸಕ ನರಸಿಂಹನಾಯಕರವರ ಗಮನಕ್ಕೆ ತರುವುದಾಗಿ ಹಾಗೂ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ನಿಮ್ಮ ಪರ ಧ್ವನಿ ಎತ್ತಲು ನಿಮ್ಮ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರು ಹೋರಾಟವನ್ನು ಬೆಂಬಲಿಸಿ ದೇಣಿಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಹಾಗೂ ಯಾದಗಿರಿ ಹಾಗೂ ಬೀದರ ಜಿಲ್ಲೆಗಳ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here