ಕಲಬುರಗಿ: ಚಳಿಗಾಲ ಕೊನೆಹಂತ ಬೇಸಿಗೆ ಆರಂಭದಿಂದ ಕಲ್ಲಂಗಡಿ ಕೃಷಿ ಆರಂಭವಾಗುತ್ತಿದ್ದು, ರೈತರು ಹೊಲ ಸಿದ್ದತೆ ಕಾಲದಲ್ಲಿ ನೆಟೆರೋಗ ಬಾರದಂತೆ ಇಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.
ಭೂಮಿ ಸಿದ್ದತೆ ವೇಳೆ ಹೆಂಟೆಗಳನ್ನು ಪುಡಿಮಾಡಿ ಪ್ರತಿ ಎಕರೆಗೆ ಎರೆಹುಳು ಗೊಬ್ಬರ 200 ಕಿ. U್ಫ್ರಂ ಹಾಗೂ ಟ್ರೈಕೋಡ್ರರ್ಮ 2 ಕಿ. ಗ್ರಾಂ ಮಿಶ್ರಣಮಾಡಿ ಮಡಿಗಳಲ್ಲಿ ಎರಚಬೇಕು. ಎಲ್ಲಾ ಸಸಿಗಳಿಗೆ ನೀರು ಉಣುಸುವಂತೆ ಡ್ರಿಪ್ ವ್ಯವಸ್ಥೆ ಮಾಡಬೇಕುಯ. ನೀರಾವರಿ ಅಸ್ತವ್ಯವಸ್ಥಗೊಂಡಲ್ಲಿ ಗಿಡಗಳಿಗೆ ನೀರು ಸಿಗದೆ ಗಿಡ ಸೊರಗುತ್ತದೆ.
ಬೋರವೆಲ್, ಬಾವಿ ನೀರಿನಲ್ಲಿ ಉಪ್ಪಿನ ಅಂಶ ಹಾಗೂ ಮಣ್ಣಿನಲ್ಲಿರುವ ಪೋಷಕಾಂಶ ಪರೀಕ್ಷೆ ಮಾಡಿ ಯೋಗ್ಯ ಸಮಗ್ರ ಪೋಷಕಾಂಶ ಒದಗಿಸುವುದು. ನೆಟೆ ರೋಗ್ ಕಂಡ ತಕ್ಷಣ ಗಿಡಗಳಿಗೆ ಟ್ರೈಕೋಡರ್ಮ 5 ಗ್ರಾಂ. ಅಥವಾ ಕಾರ್ಬನ್ ಡೈಜಂ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬುಡ, ಕಾಂಡ ಸಸಿ ನೆನೆಯುವಂತೆ ಸಿಂಪಡಿಸಬೇಕುÉಂದು ವಿಜ್ಞಾನಿ ಡಾ. ಜಹೀರ್ ಅಹೆಮದ್ ತಿಳಿಸಿದರು.
ಎಲ್ಲಾ ಸಸಿಗಳಿಗೆ ನೀರು ಉಣುಸುವಂತೆ ಡ್ರಿಪ್ ವ್ಯವಸ್ಥೆ ಮಾಡಬೇಕು, ಪ್ಲಾಸ್ಟಿಕ್ ಹೊದಿಕೆ ಬಳಸಿ ಕಲ್ಲಂಗಡಿ ಕೃಷಿ ಕೈಗೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಕೆ.ವಿ.ಕೆ ಮುಖ್ಯಸ್ಥರಾದಡಾ. ರಾಜು ಜಿ. ತೆಗ್ಗೆಳ್ಳಿ, ತೋಟಗಾರಿಕೆ ವಿಜ್ಞಾನಿ ಡಾ. ವಾ¸ದೇವ್ ನಾಯಕ ತಿಳಿಸಿದರು.