ಕಲಬುರಗಿ: ವಿದ್ಯಾರ್ಥಿನಿಯರು ಬೇರೆ ಬೇರೆ ಆಸೆಗಳಿಗೆ ಪ್ರೀತಿ ತೋರದೆ ಓದುವುದು ಮತ್ತು ಬರೆಯುವುದಕ್ಕೆ ಪ್ರೀತಿ ತೋರಿಸಬೇಕೆಂದು ಕಲಬುರಗಿ ಜಿಲ್ಲಾ ಅಪರಾಧ ವಿಭಾಗದ ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಶ್ರೀಮತಿ ಯಶೋಧಾ ಕಟಕೆಯವರು ಸಲಹೆ ನೀಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡ ಸ್ಕೂಲ್ ಕ್ಯಾಬ್ ಸೆಪ್ಟಿ ಸಮಿತಿ ಮತ್ತು ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಗಳಿಸುವುದಕ್ಕೆ, ಸಾಧನೆ ಮಾಡುವುದಕ್ಕೆ ಕನಸ್ಸು ಕಾಣುವ ಬಡತನವಿಲ್ಲ. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಮನಸ್ಸಿಟ್ಟು ಓದಿದರೆ, ಮುಂದೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ. ವಿದ್ಯೆಯು ಹಣಕ್ಕಿಂತ ಮುಖ್ಯವಾಗಿದೆ, ಕಲಿತ ವಿದ್ಯೆ ಯಾರೂ ಕಸಿದುಕೊಳ್ಳಲಾರರು. ಸಮಯವನ್ನು ವ್ಯರ್ಥ ಮಾಡದೆ ಗುರಿ ಸಾಧಿಸುವ ಹಪಾಹಪಿತನ ಇರಬೇಕು. ಸಾಧನೆ ಮಾಡಿ ಸಾಧಕರ ಸಾಲಿನಲ್ಲಿ ನಾನು ಇರಬೇಕು ಮತ್ತು ಜಿಲ್ಲೆಗೆ, ಹೆತ್ತವರಿಗೆ, ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರೊ. ಶಾಂತಲಾ ನಿಷ್ಠಿ ಮಾತನಾಡಿದರು. ಪ್ರೊ. ಸಾವಿತ್ರಿ ಜಂಬಲದಿನ್ನಿ, ಡಾ.ಸೀಮಾ ಪಾಟೀಲ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಡಾ.ಸಿದ್ದಮ್ಮ ಗುಡೇದ್, ಡಾ.ಇಂದಿರಾ ಶೆಟಕಾರ, ಡಾ. ಪುಟ್ಟಮಣಿ ದೇವಿದಾಸ, ಈರಣ್ಣ ಸ್ವಾದಿ, ಸಿದ್ದು ಪಾಟೀಲ, ಕೃಪಾಸಾಗರ ಗೊಬ್ಬುರ, ದೀಶಾ ಮೆಹತಾ, ಅನಿತಾ ಗೊಬ್ಬುರ, ಪದ್ಮಜ ಹೆಚ್. ವಿದ್ಯಾ ರೇಶ್ಮಿ, ಅನುಸೂಯ ಬಡಿಗೇರ, ಪ್ರಭಾವತಿ, ವಿನೋದ ಹಲಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಪರುತಯ್ಯ ಹಿರೇಮಠ ಮತ್ತು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರೊ. ಜಾನಕಿ ಹೊಸೂರ ಪ್ರಾಸ್ತಾವಿಕ ಮಾತನಾಡಿದರು, ಕು. ಐಶ್ವರ್ಯ ವಿ.ಸಿ. ಸ್ವಾಗತಿಸಿದರು. ಕು.ಶಿಲ್ಪ ಟಿ.ಬಿ. ವಂದಿಸಿದರು. ಕು. ಭಾಗ್ಯಶ್ರೀ ಆರ್. ನಿರೂಪಿಸಿದರು. ಪ್ರೊ. ರೇವಯ್ಯ ವಸ್ತ್ರದಮಠ ಮತ್ತು ಸಂಗಡಿಗರು ಪ್ರಾರ್ಥಿಸಿದರು.