ಆ. 11 ರಂದು ಸಮಕಾಲೀನ ಕನ್ನಡ ಸಣ್ಣ ಕಥೆಗಳ ಕುರಿತು ಹೀಗೊಂದು ಸಾಹಿತ್ಯ ಸಮಾಗಮ

0
76

ಕಲಬುರಗಿ: ನಗರದ ಜಿಲ್ಲಾವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ರವಿವಾರ ಬೆಳಿಗ್ಗೆ 10.30ಕ್ಕೆ ಕನ್ನಡ ಸಣ್ಣ ಕತೆಗಳ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವಿದೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್ ನಿರಗುಡಿ ತಿಳಿಸಿದ್ದಾರೆ.

Contact Your\'s Advertisement; 9902492681

ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಮ್ಮ ಭಾಗದ  ಸಾಹಿತಿಗಳ ಸಮಾವೇಶದಂತೆ ಜರುಗುವ ಈ ಕಾರ್ಯಕ್ರಮ ದಲ್ಲಿ ಸಮಕಾಲೀನ ಕನ್ನಡ‌ ಸಣ್ಣ ಕತೆಗಳು ಕುರಿತು ಸಂವಾದ ನಡೆಯಲಿದೆ.

ಅನೇಕ ಹಿರಿಯ ಲೇಖಕರು ಇದರಲ್ಲಿ‌ ಪಾಲ್ಗೊಳ್ಳುವರು. ಅವರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಬಾಳಾಸಾಹೇಬ ಲೋಕಾಪುರ, ಡಾ.ಅಪ್ಪಗೆರೆ ಸೋಮಶೇಖರ,ಡಾ.ಬಸವರಾಜ ಡೋಣೂರ, ಮಹಾಂತೇಶ ನವಲಕಲ್, ಜ್ಯೋತಿ ಕುಲಕರ್ಣಿ, ಡಾ.ಗಣೇಶ ಪವಾರ, ಸಂಧ್ಯಾ ಹೊನಗುಂಟಿಕರ್, ಮಹೇಂದ್ರ ಎಂ. ಇನ್ನೂ ಅನೇಕರು ಭಾಗವಹಿಸುವರು.

ಕಥಾ ಸಂವಾದ ಎಂಬ ಈ‌ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮ ವನ್ನು ನೀವು ಮಿಸ್ ಮಾಡಕೋಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here