ಕಲಬುರಗಿ: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಹಾಗೂ ಇನ್ಸಿಟ್ಯುಟ್ ಆಫ್ ವುಡ್ ಸೈನ್ಸ್ ಮತ್ತು ಟೆಕ್ನಾಲಜಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 28 ಮುಂಜಾಣೆ 9.30ಕ್ಕೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಶ್ರೀಗಂಧ ಮರ ಆಧಾರಿತ ಅರಣ್ಯ ಕೃಷಿ ಕುರಿತು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮರ ವಿಜ್ಞಾನ ವುಡ್ ಸೈನ್ಸ್ ಮತ್ತು ಟೆಕ್ನಾಲಜಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ಎನ್. ರವಿ, ಡಾ.ಬಿನ್.ಎನ್. ದೀವಾಕರ್, ಡಾ.ಎಂ. ವಿ. ದೋರೆ, ಡಾ. ಎಂ.ಮಮತಾ ರೈತರಿಗೆ ಮಾಹಿತಿ ನೀಡಲಿದ್ದಾರೆ.
ಆಸಕ್ತ ರೈತರು ನಗರದ ಆಳಂದ ರಸ್ತೆಯಲ್ಲಿ ಐಸಿಎಆರ್-ಕೃಷಿ ವಿಜ್ಞಾನಕೇಂದ್ರದಯೋಜನಾ ಸಹಾಯಕರಾದ ಸಾಗರ್‍ರವರ ದೂರವಾಣಿ (ದೂ.ಸಂ. 9611487488) ಮುಖಾಂತರ ಅಥವಾ ಖುದ್ದಾಗಿ ಸಂಪರ್ಕಿಸಬಹುದೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರದ ಡಾ. ರಾಜು ಜಿ. ತೆಗ್ಗಳ್ಳಿರವರು ತಿಳಿಸಿದ್ದಾರೆ.