ಕಲಬುರಗಿ ಮನೂರ್ ಆಸ್ಪತ್ರಗೆ ರಾಷ್ಟ್ರೀಯ ಪ್ರಶಸ್ತಿ ಗರಿಮೆ

0
72

ಕಲಬುರಗಿ: ವರ್ಷದ ಅತ್ಯುತ್ತಮ ಆರೋಗ್ಯ ಸೇವೆ ಪ್ರಾರಂಬಕ್ಕಾಗಿ ಅತ್ಯಂತ ಶ್ರೇಷ್ಠ ಮತ್ತು ಪ್ರತಿಷ್ಠಿತ ” ಐಕಾನ್ ಆಫ್ ಏಷ್ಯಾ” ಪ್ರಶಸ್ತಿಯನ್ನು ಮನೂರ್ ಆಸ್ಪತ್ರೆಗೆ ಲಭ್ಯವಾಗಿದ್ದು, ಪ್ರಶಸ್ತಿ ಮಂಗಳವಾರ ಮನೂರ್ ಆಸ್ಪತ್ರೆಯ ನಿರ್ದೇಶಕ ಖ್ಯಾತ ವೈದ್ಯ ಡಾ. ಫಾರುಕ್ ಆಹ್ಮದ್ ಮನೂರ್ ಅವರಿಗೆ ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.

ಮನೂರ್ ಆಸ್ಪತ್ರೆ ಕಳೆದು 1 ವರ್ಷದಿಂದ ಬಡ ಜನರ ಸೇವೆಯಲ್ಲಿ ತೊಡಗಿರುವ ಜೊತೆಗೆ ಕೈಗೆ ಏಟಕುವ ದರದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದೆ. ಕಲಬುರಗಿ ನಗರದ ಸ್ಲಮ್ ಪ್ರದೇಶ ಬೀದರ್, ಯಾದಗಿರಿ ಜಿಲ್ಲೆಗಳ ಹಳ್ಳಿ ಹಳ್ಳಿಗಳಲ್ಲಿ 150 ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಿಕ ಬದ್ಧತೆಯನ್ನು ಕಾಪಾಡಿಕಂಡು ಸಾಕಷ್ಟು ಜನರಿಗೆ ಅನಕೂಲ ಮಾಡಿಕೊಟ್ಟಿದೆ.

Contact Your\'s Advertisement; 9902492681

ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಜನತೆ ದೂರದ (ಹೈದರಬಾದ್/ಸೋಲಾಪುರ) ನಂತ ಊರುಗಳಿಗೆ ಹೋಗಬೇಕಾಗಿತ್ತು, ಇವತ್ತಿನ ದಿನ ಆತ್ಯದುನಿಕ ಹಾಗೂ ನುರಿತ ವೈದ್ಯರ ತಂಡ ಮನೂರ್ ಆಸ್ಪತ್ರೆಯಲ್ಲಿ ಲಭ್ಯವಿದ್ದು ಈ ಪ್ರಶಸ್ತಿ ಸಾಕ್ಷಿಯಾಗಿದೆ ಎಂದು ಮನೂರ್ ಆಸ್ಪತ್ರೆಯ ನಿರ್ದೇಶಕ ಖ್ಯಾತ ವೈದ್ಯ ಡಾ. ಫಾರುಕ್ ಆಹ್ಮದ್ ಮನೂರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಜನತೆ ಹಾಗೂ ನಮ್ಮ ರೋಗಿಗಳು ನಮಗೆ ತೋರಿದ ನಂಬಿಕೆ ಪ್ರೀತಿ ಮತ್ತು ವಾತ್ಸಲ್ಯವನ್ನು ನಮಗೆ ಊಹಿಸಲಾಗದ ಮಟ್ಟದಲ್ಲಿ ನೀಡಿದ್ದಾರೆ. ನಮ್ಮ ಧೆಯ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ಹಾಗೂ ರೋಗಿಗಳ ಆರೋಗ್ಯ ರಕ್ಷಣೆ ಎಂದು ತಿಳಿಸಲು ಹೆಮ್ಮೆ ಅನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮವು ನವದೆಹಲಿಯ raddisons ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು. ಐಕಾನ್ ಆಫ್ ಏಷಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಉದಯವೀರ್ ಸಿಂಘ್ ಬಿಂದ್ರಾ  ಮನುರ್ ಆಸ್ಪತ್ರೆಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

ಮನೂರ್ ಆಸ್ಪತ್ರೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ರೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡಲು ನಮ್ಮ ಜೀವನವನ್ನೇ ಮುಡಿಪಾಗಟ್ಟಿದ್ದು, ಆರೋಗ್ಯ ಕ್ರಾಂತಿಯ ಭರವಸೆ ನೀಡುವಲ್ಲಿ ನಾವು ತೊಡಗಿದ್ದೇವೆ. ಇವತ್ತಿನ ಈ ಶ್ರೇಷ್ಠ ಮತ್ತು ಪ್ರತಿಷ್ಠಿತ ಐಕಾನ್ ಆಫ್ ಏಷ್ಯಾ ಪ್ರಶಸ್ತಿ ಕಲ್ಯಾಣ ಕರ್ನಾಟಕದ ಜನತೆಗೆ ಸಮರ್ಪಿಸುತ್ತಿದ್ದೇನೆ. -ಡಾ. ಫಾರೂಕ್ ಅಹ್ಮದ್ ಮನೂರ್, ನಿರ್ದೇಶಕರು ಮನೂರ್ ಆಸ್ಪತ್ರೆ. ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here