ಸುರಪುರ: ಕ್ಷಯ ರೋಗಿಗಳಲ್ಲಿ ಪ್ರೋಟಿನ್ ಕೊರತೆ ಇರುವ ಕಾರಣ ವಿತರಿಸಲಾಗುತ್ತಿದ್ದು ಸರಕಾರ ಹಮ್ಮಿಕೊಂಡಿರುವ ಕ್ಷಯ ರೋಗ ಸೋಲಿಸಿ ಕರ್ನಾಟಕ ಗೆಲ್ಲಿಸಿ ಅಭಿಯಾನ ಕೈಗೊಳ್ಳಲಾಗುತ್ತಿದ್ದು ಕ್ಷೇತ್ರದ ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ಕ್ಷಯ ರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ತುಂಬಾ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಹೇಳಿದರು.
ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ (ಎನ್‍ಟಿಇಪಿ) ಯೋಜನೆ ಅಡಿ ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆ ಹಾಗೂ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಸಹಯೋಗದಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿನ ಕ್ಷಯ ರೋಗಿಗಳಿಗೆ ಉಚಿತ ಪ್ರೋಟಿನ್ ಪೌಡರ್ ವಿತರಿಸಿ ಮಾತನಾಡಿ, ಯಾರಿಗಾದರೂ ಕ್ಷಯ ರೋಗದ ಪ್ರಾಥಮಿಕ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಔಷಧಿ ನಿಯಂತ್ರಕ ಪುಷ್ಪಪ್ರಿಯಾ, ಡಿಟಿಓ ಸಂಜಯಕುಮಾರ ರಾಯಚೂರಕರ್, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುಭಾಶ ಬೋಡಾ, ಕಾರ್ಯದರ್ಶಿ ಸುಧೀರ ಕೋಸಗಿ, ಅಶೋಕ ಜಂವ್ಹಾರ, ಗೌರಿಶಂಕರ, ಗುರುರಾಜ ದೇವರಗೋನಾಲ ಇತರರಿದ್ದರು.