ಕಲಬುರಗಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರತಿ ವರ್ಷದಂತೆ 2023-24 ನೇ ಸಾಲಿಗೆ ಕ್ರೀಡಾ ಶಾಲೆ/ವಸತಿ ನಿಲಯಗಳಿಗೆ ಅಭ್ಯರ್ಥಿಗಳ ತಾಲ್ಲೂಕ ಮಟ್ಟದ ಆಯ್ಕೆ ಪ್ರಕ್ರಿಯನ್ನು ಇಲಾಖೆಯ ತರಬೇತುದಾರರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಕರಿಂದ ಈ ಕೆಳಕಂಡ ತಾಲ್ಲೂಕುಗಳಲ್ಲಿ ಆಯ್ಕೆ ಪ್ರಕ್ರಿಯ ನಡೆಸಲಾಗುವುದು.
ಆಳಂದ ತಾಲ್ಲೂಕಿನ ತಾಲ್ಲೂಕ ಕ್ರೀಡಾಂಗಣದಲ್ಲಿ, ಯಡ್ರಾಮಿ ತಾಲ್ಲೂಕಿನ ಕರ್ನಾಟಕ ಪ್ರಾಥಮಿಕ ಪಬ್ಲಿಕ ಶಾಲೆಯಲ್ಲಿ, ಶಹಬಾದ ತಾಲೂಕಿನ ಹೊನಗುಂಟಾ ಸರ್ಕಾರಿ ಪೌಢ ಶಾಲೆಯಲ್ಲಿ ದಿನಾಂಕ:26-12-2022 ರಂದು ಬೆಳಿಗ್ಗೆ 9 ಗಂಟೆಗೆ ಆಯ್ಕೆ ಪ್ರಕ್ರಿಯನ್ನು ನಡೆಸಲಾಗುವುದು.
ಅಫಜಲಪೂರ ತಾಲ್ಲೂಕಿನ ಸರಕಾರಿ ಜುನೀಯರ ಕಾಲೇಜನಲ್ಲಿ, ಜೇವರ್ಗಿ ತಾಲ್ಲೂಕಿನ ತಾಲ್ಲೂಕ ಕ್ರೀಡಾಂಗಣದಲ್ಲಿ, ಚಿತ್ತಾಪೂರು ತಾಲ್ಲೂಕಿನ ತಾಲ್ಲೂಕ ಕ್ರೀಡಾಗಂಣದಲ್ಲಿ ದಿನಾಂಕ:27-12-2022 ರಂದು ಬೆಳಿಗ್ಗೆ 9 ಗಂಟೆಗೆ ಆಯ್ಕೆ ಪ್ರಕ್ರಿಯನ್ನು ನಡೆಸಲಾಗುವುದು.
ಕಾಳಗಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ, ಸೇಡಂ ತಾಲ್ಲೂಕಿನ ತಾಲ್ಲೂಕ ಕ್ರೀಡಾಂಗಣದಲ್ಲಿ ದಿನಾಂಕ:28-12-2022 ರಂದು ಬೆಳಿಗ್ಗೆ 9 ಗಂಟೆಗೆ ಆಯ್ಕೆ ಪ್ರಕ್ರಿಯನ್ನು ನಡೆಸಲಾಗುವುದು.
ಚಿಂಚೋಳಿ ತಾಲ್ಲೂಕಿನ ತಾಲ್ಲೂಕ ಕ್ರೀಡಾಗಂಣದಲ್ಲಿ, ಕಮಲಾಪೂರ ತಾಲ್ಲೂಕಿನ ಮಾಹಾಗಾಂವ ಸರ್ಕಾರಿ ಪೌಢ ಶಾಲೆಯಲ್ಲಿ, ಕಲಬುರಗಿ ತಾಲ್ಲೂಕಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ದಿನಾಂಕ:29-12-2022 ರಂದು ಬೆಳಿಗ್ಗೆ 9 ಗಂಟೆಗೆ ಆಯ್ಕೆ ಪ್ರಕ್ರಿಯನ್ನು ನಡೆಸಲಾಗುವುದು.
ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ:02-01-2023 ರಂದು ಕಿರಿಯರ ವಿಭಾಗ ಹಾಗೂ 03-01-2023ರಂದು ಹಿರಿಯರ ವಿಭಾಗದ ಪ್ರಕ್ರಿಯೆಯನ್ನು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು.
4ನೇ ತರಗತಿಯಲ್ಲಿ ಓದುತ್ತಿರುವ ಕ್ರೀಡಾಪಟು 01-06-2012 ನಂತರ ಜನಿಸಿದ ಬಾಲಕ/ಬಾಲಕಿಯರು ಭಾಗವಹಿಸಬಹುದು, 7ನೇ ತರಗತಿಯಲ್ಲಿ ಓದುತ್ತಿರುವ ಕ್ರೀಡಾಪಟು 01-06-2009 ನಂತರ ಜನಿಸಿದ ಬಾಲಕ/ಬಾಲಕಿಯರು ಭಾಗವಹಿಸಬಹುದು, 10ನೇ ತರಗತಿಯಲ್ಲಿ ಓದುತ್ತಿರುವ ಕ್ರೀಡಾಪಟು 01-06-2005 ನಂತರ ಜನಿಸಿದ ಬಾಲಕ/ಬಾಲಕಿಯರು ಭಾಗವಹಿಸಬಹುದು.
ಕ್ರೀಡಾ ಶಾಲೆ/ ನಿಲಯಗಳಿಗೆ (4ನೇ ತರಗತಿ)ಗೆ ಅಥ್ಲೇಟಿಕ್ಸ್ ಮತ್ತು ಹಾಕಿ, (7ನೇ ತರಗತಿ)ಗೆ ಅಥ್ಲೇಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಫುಟ್‍ಬಾಲ್, ಕುಸ್ತಿ, ಜೂಡೋ, ಜಿಮ್ನಾಸ್ಟಿಕ್ಸ್, ಆರ್ಚರಿ, ಫೆನಸಿಂಣ್, (10ನೇ ತರಗತಿ)ಗೆ ಅಥ್ಲೇಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಫುಟ್‍ಬಾಲ್, ಕುಸ್ತಿ, ಜೂಡೋ, ಜಿಮ್ನಾಸ್ಟಿಕ್ಸ್, ಆರ್ಚರಿ, ಫೆನಸಿಂಣ್ ಕ್ರೀಡೆಗಳಲ್ಲಿ ಮಾತ್ರ ಆಯ್ಕೆಯನ್ನು ನಡೆಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಪರ್ಕಿಸಬಹುದು.