ಮದರ್ ತೆರೆಸಾ ಶಾಲೆಯ ಮಕ್ಕಳಿಗೆ ಪ್ರಥಮ ಬಹುಮಾನ

0
12

ಕಲಬುರಗಿ: ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನದ ಅಂಗವಾಗಿ ಡಿಸೇಂಬರ್ 22 ರಂದು ಗಣಿತ ಕಾರ್ಯಗಾರವನ್ನು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದರಲ್ಲಿ  ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸ್ವಾತಿ, ಅನನ್ಯಾ ಅವರು ಪಾಲಿಹೆದ್ರಾ   ಕಾರ್ಯಗಾರದಲ್ಲಿ ಭಾಗವಹಿಸಿ ಶಾಲೆಗೆ ಪ್ರಥಮ ಬಹುಮಾನ ಪಡೆದಿದ್ದಾರೆ.

Contact Your\'s Advertisement; 9902492681

ಈ ಗಣಿತ ಕಾರ್ಯಗಾರದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿ ಬಿ.ರಾಮಯ್ಯ ಇವರು ಮಕ್ಕಳು ಮಾಡಿದ ಗಣಿತ ಮಾಡಲ್‍ಗಳನ್ನು ನೋಡಿ ಮೂಕ ವಿಸ್ಮಿತರಾಗಿ ಮಕ್ಕಳಲ್ಲಿರುವ ಪ್ರತಿಭೆಗೆ ತುಂಬು ಮನಸ್ಸಿನಿಂದ ಪ್ರಶಂಶಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ಮಕ್ಕಳ ಈ ಸಾಧನೆಗೆ ಆಡಳಿತ ಮಂಡಳಿಯವರಾದ  ಬಸವರಾಜ ಭೀಮಳ್ಳಿ, ಶಾಸಕರು ಹಾಗೂ ಶಾಲೆಯ ಅಧ್ಯಕ್ಷರಾದ ಎಂ.ವಾಯ್. ಪಾಟೀಲ್, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳಾದ ಶಿವಪುತ್ರಪ್ಪ ಡೆಂಕಿ ಅವರು ಗಣಿತ ಜಿಲ್ಲಾ ವಿಜ್ಞಾನ ಕೇಂದ್ರ ಕಾರ್ಯಗಾರದಲ್ಲಿ ಭಾಗವಹಿಸಿ ವಿಜೆತರಾದ ಮಕ್ಕಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ನಾಗೇಂದ್ರ ಎಂ ಬಡಿಗೇರ್, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here