ಕಲಬುರಗಿ: ಇಂದಿನ ದಿನಮಾನಗಳಲ್ಲಿ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿ ಪಾಶ್ಚಿಮಾತ್ಯ ಸಂಗೀತದ ಪ್ರಭಾವದಿಂದ ನಶಿಸುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಲೆಯ ಆಗರ ಎನಿಸಿದೆ. ಕಲಾವಿದರು ಇಂದಿಗೂ ಅವರ ಅಂತರಾಳದಲ್ಲಿ ಕಲೆ ಮತ್ತು ಸಾಹಿತ್ಯ ಸಂಸ್ಕೃತಿ, ನೃತ್ಯ ಹಾಸುಹೊಕ್ಕಾಗಿದೆ ಎಂದು ಶಶಿಕಾಂತ ಪೂಜಾರಿ ಹತಗುಂದಾ ಹೇಳಿದರು.
ಕಲಬುರಗಿ ತಾಲೂಕಿನ ಹತಗುಂದಾದಲ್ಲಿರುವ ಶ್ರೀ ಈಶ್ವರಲಿಂಗ ದೇವಸ್ಥಾನ ಆವರಣದಲ್ಲಿ ಸಮತಾ ಜಾನಪದ ಸಂಗೀತ ಸಂಸ್ಥೆ ಸಾಗನೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಜಾನಪದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಹಿತ್ಯ ಸಂಸ್ಕೃತಿ ಕಲೆ ಗುರುತಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಇಂತಹ ಸಂಗೀತ ಕಾರ್ಯಕ್ರಮಗಳು ಅವಕಾಶ ಮಾಡಿಕೊಡುತ್ತಿರುವುದು ಸೂಕ್ತವಾದುದು ಎಂದರು.
ಮುಖ್ಯ ಅತಿಥಿಗಳಾಗಿ ಶಿವಲಿಂಗಯ್ಯ ಎಸ್. ಸಾಹು ಬಿರೇದಾರ, ನಾಗೀಂದ್ರಪ್ಪ ಅಲದಕ್, ಗುಂಡರಾಯ ಗಡೆದ, ಶ್ರೀಮಲ್ಲಪ್ಪ ಬಿರೇದಾರ, ಕಲಾವಿದರಾದ ಶರಣಯ್ಯಸ್ವಾಮಿ ಪಟ್ಟಣ, ಚಂದ್ರಲಾ ಕಲಾಡ, ಮಡಿವಾಳಪ್ಪ ಪಟ್ಟಣ, ರಾಜೇಂದ್ರ ಸುತಾರ, ರಾಣಪ್ಪ ನಿಗಸಿ, ಸಮತಾ ಜಾನಪದ ಸಂಗೀತ ಸಂಸ್ಥೆಯ ಅಧ್ಯಕ್ಷರಾದ ಮುತ್ತಣ್ಣ ಎ. ಶಹಾಬಾದ ಹಾಗೂ ಗ್ರಾಮದ ಹಿರಿಯರು ಹಾಗೂ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸುಗಮ ಸಂಗೀತ, ಜಾನಪದ ಗೀತೆ, ವಚನಗಾಯನ, ತತ್ವಪದ, ದಾಸವಾಣಿ, ತಬಲಾ ನಾಗಲಿಂಗಯ್ಯ ಸ್ಥಾವರಮಠ ಆಕಾಶವಾಣಿ ದೂರದರ್ಶನ ಕಲಾವಿದರು, ಮಲ್ಲಿನಾಥ ಭೋಪಾಲ ತೇಗನೂರ ಮತ್ತು ಹಾರ್ಮೋನಿಯಂ ಶಿವಶರಣಪ್ಪ ಮಾಡಿಯಾಳ ಆಕಾಶವಾಣಿ, ದೂರದರ್ಶನ ಕಲಾವಿದರು ಸಾತ ನೀಡಿದರು.