ಹಾನಗಲ್ಲ ಕುಮಾರ ಶ್ರೀಗಳ ಜೀವನ ಸಂದೇಶ ನಮ್ಮೆಲ್ಲರಿಗೂ ಮಾದರಿ

0
66

ಸುರಪುರ:ಹಾನಗಲ್ಲ ಕುಮಾರಸ್ವಾಮಿಗಳ ಜೀವನ ಚರಿತ್ರೆಯುಳ್ಳ ವಿರಾಟಪುರ ವಿರಾಗಿ ಸಿನೆಮಾದ ಪ್ರಚಾರಾರ್ಥವಾಗಿ ನಡೆದ ಕುಮಾರೇಶ್ವರ ರಥಯಾತ್ರೆಗೆ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಅನೇಕ ಪೂಜ್ಯ ಶ್ರೀಗಳು ಹಾಗೂ ಮುಖಂಡರು ಭಾಗವಹಿಸಿ ಮೊದಲಿಗೆ ಬಸವೇಶ್ವರರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ನಂತರ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಲಬುರ್ಗಾ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ,ಹಾನಗಲ್ಲದ ಕುಮಾರಸ್ವಾಮಿಗಳು ಅಖಂಡ ವೀರಶೈವ ಪರಂಪರೆ ಉಳಿಸಿ ಬೆಳೆಸುವಲ್ಲಿ ಅವರು ನೀಡಿದ ಕೊಡುಗೆ ದೊಡ್ಡದಿದೆ ಎಂದರು.ಅವರಿಂದಲೇ ಶಿವಯೋಗ ಮಂದಿರ ಸ್ಥಾಪನೆ,ಶಾಸ್ತ್ರೀಯ ಸಂಗೀತ ಉಳಿಸಿದ ಕೀರ್ತಿಯೂ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ.ಅಲ್ಲದೆ ಶಿಕ್ಷಣ ಕ್ಷೇತ್ರದ ಕೊಡುಗೆ,ಸಂಗೀತ ಕ್ಷೇತ್ರದ ಕೊಡುಗೆ,ಪಂಚಾಕ್ಷರಿ ಗವಾಯಿಗಳು,ಪುಟ್ಟರಾಜ ಗವಾಯಿಗಳು ಎಲ್ಲರಿಗೂ ಕುಮಾರಸ್ವಾಮಿಗಳ ಕೊಡುಗೆ ಏನು ಎನ್ನುವುದನ್ನು ಜನಮಾನಸಕ್ಕೆ ತಿಳಿಸಲು ಜಡೆಯಶಾಂತಲಿಂಗೇಶ್ವರ ಸ್ವಾಮೀಜಿಯವರು ತಮ್ಮ ಜೋಳಿಗೆಯಿಂದ ಸಿನೆಮಾ ಮಾಡಲು 5 ಕೋಟಿ ರೂಪಾಯಿ ವ್ಯಯಿಸಿದ್ದಾರೆ.ಅಲ್ಲದೆ ಸಿನೆಮಾದ ನಿರ್ದೇಶಕರಾಗಿ ಬಿ.ಎಸ್.ಲಿಂಗದೇವರು ಅದ್ಭುತವಾಗಿ ಮಾಡಿದ್ದಾರೆ.ಇಂದು ಬರೀ ಪ್ರೀತಿ ಪ್ರೇಮ,ಹೊಡೆದಾಟ ಎನ್ನುವುದನ್ನು ಸಿನೆಮಾಗಳು ತೋರಿಸುವ ಸಂದರ್ಭದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಜೀವನ ಸಾಧನೆಯ ಕತಾಹಂದರದ ಸಿನೆಮಾವನ್ನು ಎಲ್ಲರು ನೋಡಬೇಕು ಎಂದರು.

Contact Your\'s Advertisement; 9902492681

ನಂತರ ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ,ಇಂದು ವೀರಶೈವ ಧರ್ಮ ಎನ್ನುವುದು ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂದರೆ ಅದಕ್ಕೆ ಹಾನಗಲ್ಲ ಕುಮಾರಸ್ವಾಮಿಗಳ ಶ್ರಮ ದೊಡ್ಡದು.ನನ್ನಂತ ಎಲ್ಲಾ ಸ್ವಾಮೀಜಿಗಳಿಗೆ ಇಂದು ನೆಲೆ ಇದೆ ಎಂದರೆ ಅದಕ್ಕೆ ಕುಮಾರಸ್ವಾಮಿಗಳ ಕೃಪೆಯೆ ಕಾರಣ ಎಂದರು.

ಮುಖಂಡ ಡಾ:ಸುರೇಶ ಸಜ್ಜನ್ ಮಾತನಾಡಿ,ಹಾನಗಲ್ಲ ಕುಮಾರಸ್ವಾಮೀಯವರ ಜೀವನ ಚರಿತ್ರೆ ನಮಗೆಲ್ಲರಿಗೂ ಮಾದರಿಯಾಗಿದೆ,ವಿರಾಟಪುರ ವಿರಾಗಿ ಕೇವಲ ಸಿನೆಮಾ ಎಂದು ನೋಡುವುದಲ್ಲ ಅದು ನಮ್ಮ ಮನೆಯಲ್ಲಿನ ಮಕ್ಕಳಿಗೆ ತೋರಿಸುವುದು ಮುಖ್ಯವಾಗಿದೆ.ಆದ್ದರಿಂದ ಜನೇವರಿ 13 ರಂದು ಸಿನೆಮಾ ಬಿಡುಗಡೆಯಾಗಲಿದ್ದು,ಅಂದು ಸುರಪುರ ದಿಂದ ಕಲಬುರ್ಗಿಗೆ ಈ ಸಿನೆಮಾ ನೋಡಲು ಬರುವ ಎಲ್ಲರಿಗೂ ತಾಲೂಕು ವೀರಶೈವ ಸಮಿತಿಯಿಂದ ವ್ಯವಸ್ಥೆ ಕಲ್ಪಿಸುವುದಾಗಿ ಘೋಷಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ನಿಷ್ಠಿ ಕಡ್ಲೆಪ್ಪನವರ ಮಠ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ,ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಲಕ್ಷ್ಮೀಪುರ ಬಿಜಾಸಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಶರಬಸಪ್ಪ ಸಾಲಿ,ಮುಖಂಡರಾದ ಜಿ.ಎಸ್.ಪಾಟೀಲ್, ಸೂಗುರೇಶ ವಾರದ,ಮಂಜುನಾಥ ಜಾಲಹಳ್ಳಿ ವೇದಿಕೆಯಲ್ಲಿದ್ದರು.ಪ್ರಕಾಶ ಅಂಗಡಿ ಕನ್ನೆಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು,ಇದೇ ಸಂದರ್ಭದಲ್ಲಿ ಸಿನೆಮಾದ ಕುರಿತು ಅನೇಕ ಪೂಜ್ಯರು ಹಾಗೂ ಸಿನೆಮಾ ರಂಗದ ಗಣ್ಯರು ವ್ಯಕ್ತಪಡಿಸಿರುವ ಅಭಿಪ್ರಾಯವುಳ್ಳ ಸಿನೆಮಾದ ಟ್ರೈಲರ್ ಪ್ರದರ್ಶಿಸಲಾಯಿತು.ತಾಲೂಕಿವ ವೀರಶೈವ ಲಿಂಗಾಯತ ಸಮುದಾಯದ ನೂರಾರು ಜನ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here