ವಿಕಲಚೇತನ ಬಸ್‍ಪಾಸ್‍ಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

0
22

ಬೆಂಗಳೂರು: 2023ನೇ ಸಾಲಿನ ವಿಕಲಚೇತನರ ರಿಯಾಯಿತಿ ಬಸ್ ಪಾಸಿಗಾಗಿ ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ https://sevasindhuservices.karnataka.gov.in ಮೂಲಕ ಆನ್‍ಲೈನ್‍ನಲ್ಲಿ 26ನೇ ಡಿಸೆಂಬರ್ 2022 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ತಾವು ಆಯ್ಕೆ ಮಾಡಿಕೊಂಡ ಬಸ್‍ನಿಲ್ದಾಣಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ಪಾಸ್‍ಗಳನ್ನು ಪಡೆಯಬಹುದಾಗಿದೆ.

Contact Your\'s Advertisement; 9902492681

2023 ನೇ ಸಾಲಿನ ವಿಕಲಚೇತನರ ರಿಯಾಯಿತಿ ಪಾಸ್‍ಗಳನ್ನು ಡಿಸೆಂಬರ್ 26 ರಿಂದ ನೂತನ ಪಾಸುಗಳನ್ನು ವರ್ಷವಿಡೀ ವಿತರಣೆ ಮಾಡಲಾಗುವುದು. ಕಳೆದ ಸಾಲಿನ ವಿಕಲಚೇತನರ ಬಸ್‍ಪಾಸ್‍ಗಳನ್ನು 28ನೇ ಫೆಬ್ರವರಿ 2023 ರೊಳಗೆ ನವೀಕರಿಸಿಕೊಳ್ಳುವುದು. ರಿಯಾಯಿತಿ ಪಾಸಿನ ದರ ರೂ. 660/- ಗಳಾಗಿದ್ದು, ವಿಕಲಚೇತನರು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2022ನೇ ಸಾಲಿನಲ್ಲಿ ವಿತರಿಸಿ 31ನೇ ಡಿಸೆಂಬರ್ 2022ರ ವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‍ಗಳನ್ನು 28ನೇ ಫೆಬ್ರವರಿ 2023 ರವರೆಗೆ ಮಾನ್ಯ ಮಾಡಲಾಗುವುದು.

ನೂತನ ಪಾಸ್‍ಗಳನ್ನು ಕೆಂಪೇಗೌಡ ಬಸ್‍ನಿಲ್ದಾಣದಲ್ಲಿ ಮಾತ್ರ ವಿತರಣೆ ಮಾಡಲಾಗುವುದು. ಕಳೆದ ಸಾಲಿನ ಬಸ್‍ಪಾಸ್‍ಗಳನ್ನು ಕೆಂಪೇಗೌಡ ಬಸ್‍ನಿಲ್ದಾಣ, ಬನಶಂಕರಿ ಟಿಟಿಎಂಸಿ, ವಿಜಯನಗರ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಶಿವಾಜಿನಗರ ಬಸ್‍ನಿಲ್ದಾಣ, ಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಶಾಂತಿನಗರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ, ವೈಟ್‍ಫೀಲ್ಡ್ ಟಿಟಿಎಂಸಿ, ಕೃಷ್ಣರಾಜ ಮಾರುಕಟ್ಟೆ ಬಸ್‍ನಿಲ್ದಾಣ, ಹೊಸಕೋಟೆ ಬಸ್‍ನಿಲ್ದಾಣ, ಯಲಹಂಕ ಬಸ್‍ನಿಲ್ದಾಣಗಳಲ್ಲಿ ನವೀಕರಿಸಲಾಗುವುದೆಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here