ಜಿಲ್ಲಾ ಸ್ಟೋನ್‍ಕ್ರಷರ್ ಇಂಡಸ್ಟ್ರೀಜ್ ಅಸೋಸಿಯೇಷನ್ ವತಿಯಿಂದ 28ಕ್ಕೆ ಬೆಳಗಾವಿ ಚಲೊ

0
36

ಈ ಬೇಡಿಕೆಗಳ ಈಡೇರಿಕೆಗೆ ರಾಜ್ಯಾದ್ಯಂತ ಕಳೆದ ಐದು ವರ್ಷಗಳಿಂದ ಒತ್ತಾಯಿಸುತ್ತ ಬರಲಾಗುತ್ತಿದ್ದು, ಡಿ. 22ರಿಂದ ಸ್ಟೋನ್ ಕ್ರಷರ್ ಇಂಡಸ್ಟ್ರೀಜ್ ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದೆ. ಸ್ಟೋನ್ ಕ್ರಷರ್ ಉದ್ಯಮ ಇಲ್ಲದಿದ್ದಲ್ಲಿ ಅಭಿವೃದ್ಧಿ ಅಸಾಧ್ಯ. ಈ ಉದ್ಯಮ ಇಂದು ಬಹಳ ಅಗತ್ಯವಾಗಿದ್ದು, ಸರ್ಕಾರ ಇದಕ್ಕೆ ಉತ್ತೇಜನ ನೀಡಬೇಕು. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸೋಮವಾರ ಮನವಿ ಸಲ್ಲಿಸಲಾಗುವುದು. -ನೀಲಕಂಠರಾವ ಎಸ್. ಮೂಲಗೆ, ಸ್ಟೋನ್ ಕ್ರಷರ್ ಇಂಡಸ್ಟ್ರೀಜ್ ಅಸೋಸಿಯೇಷನ್, ಜಿಲ್ಲಾಧ್ಯಕ್ಷ.

ಕಲಬುರಗಿ: ಕಂಟ್ರ್ಯಾಕ್ಟರ್ ಬಳಿ ಮತ್ತು ಸ್ಟೋನ್ ಮೇಜರ್‍ಮೆಂಟ್ ಮಾಡುವ ವೇಳೆ ಹೀಗೆ ಎರಡೂ ಕಡೆ ರಾಯಲ್ಟಿ ಪಡೆಯುತ್ತಿರುವುನ್ನು ವಿರೋಧಿಸಿ ಸರ್ಕಾರ ಕೂಡಲೇ ಈ ಪದ್ಧತಿಯನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿ ಡಿ. 28ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಜಿಲ್ಲೆಯಿಂದ 2000 ಜನ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಸ್ಟೋನ್ ಕ್ರಷರ್ ಇಂಡಸ್ಟ್ರೀಜ್ ಅಸೋಸಿಯೇಷನ್‍ನ ಜಿಲ್ಲಾಧ್ಯಕ್ಷ ನೀಲಕಂಠರಾವ ಎಸ್. ಮೂಲಗೆ ತಿಳಿಸಿದರು.

Contact Your\'s Advertisement; 9902492681

ಈ ಹಿಂದೆ ವಿಧಿಸಿದ 5 ಪಟ್ಟು ದಂಡವನ್ನು ವಿಲೇವಾರಿ ಮಾಡುವುದು, ಪಟ್ಟಾ ಸ್ಥಳದಲ್ಲಿ ಗಣಿ ಗುತ್ತಿಗೆ ಪಡೆಯುವುದಕ್ಕೆ ರಾಜಧನದಲ್ಲಿ ಮತ್ತು ಶುಲ್ಕಗಳಲ್ಲಿ ರಿಯಾಯಿತಿ ಕಲ್ಪಿಸುವುದು, ಗಣಿ ಗುತ್ತಿಗೆಗೆ ಈಗಾಗಲೇ ಅರ್ಜಿ ಸಲ್ಲಿಸಿ ಬಾಕಿ ಇರುವ ಅರ್ಜಿಗಳಿಗೆ ಮಂಜೂರಾತಿ ನೀಡುವುದು, ರಾಜಧನ ಸಂಗ್ರಹಣೆಗೆ ಸಮರ್ಪಕ ವಿಧಾನ ಅಳವಡಿಸುವುದು, ಬೃಹತ್ ಕಾಮಗಾರಿಗಳಿಗೆ ಗಣಿ ಗುತ್ತಿಗೆ ಮಂಜೂರಾತಿ ನೀಡುವ ಮತ್ತು ರಾಜಧನ, ಡಿಎಂಎಫ್, ಎಎಪಿಪಿ ತೆರಿಗೆ ಪಾವತಿಯನ್ನು ಸಮರ್ಪಕಗೊಳಿಸುವುದು ಸೇರಿದಂತೆ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರ್.ಜಿ. ಪಾಟೀಲ, ಮಲ್ಲಿನಾಥ ಹಾಗರಗಿ, ಅನ್ವರ್ ಗುತ್ತೇದಾರ, ಅಬ್ದುಲ್ ಶುಕುರ್ ಮಾಮು ಸೇಠ್, ವಿಕಾ ಪಾಟಕ್, ರಾಕೇಶ ಎಸ್. ಗುತ್ತೇದಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here