ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲು ಭೀಮ್ ಆರ್ಮಿ ಆಗ್ರಹ

0
84

ಜೇವರ್ಗಿ: ಇಲ್ಲಿನ ಜೇವರ್ಗಿ ಬಸ್ ನಿಲ್ದಾಣದಿಂದ ಗುಡೂರ್ ಮಾರ್ಗವಾಗಿ ರಾಜವಾಳ ಗ್ರಾಮಕ್ಕೆ ಹೋಗುವ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಜೇವರ್ಗಿ ಘಟಕದ ಬಸ್ಸುಗಳು ಕೇವಲ ಆಟಕ್ಕೆ ಉಂಟು ಲೆಕ್ಕಕ್ಕಿಲ್ಲದಂತಾಗಿದೆ. ! ಇವುಗಳ ಸಂಚಾರ ಇದ್ದರೂ ಯಾವುದೇ ಪ್ರಯೋಜನಕ್ಕೆ ಬಾರದಂತೆ ಉಪಯೋಗ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಭೀಮ್ ಆರ್ಮಿ ತಾಲೂಕ ಸಮಿತಿ ಜೇವರ್ಗಿ ಆಕ್ರೋಶ ವ್ಯಕ್ತಪಡಿಸಿದೆ.

ಆದರ್ಶ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಗುಡೂರು ಗ್ರಾಮದ ವಿದ್ಯಾರ್ಥಿಗಳು ಹಾಗೂ ಜೇವರ್ಗಿಗೆ ಬರುವ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಬೆಳಗ್ಗೆ ಹಾಗೂ ಮಧ್ಯಾಹ್ನ ಸಮಯದಲ್ಲಿ ನಿತ್ಯ ಪರದಾಟ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಈ ಕುರಿತಂತೆ ಸಮಯಕ್ಕೆ ಸರಿಯಾಗಿ ಬಸ್ ಸಂಚಾರವನ್ನು ಆರಂಭಿಸಲು ಜೇವರ್ಗಿ ಘಟಕದ ಸಾರಿಗೆ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

Contact Your\'s Advertisement; 9902492681

ಗುಡೂರು ಎಸ.ಎ ಗ್ರಾಮದ ಮುಖ್ಯ ರಸ್ತೆಯಿಂದ ಗುಡೂರ ಗ್ರಾಮವು ಸುಮಾರು ಒಂದುವರೆ ಕಿಲೋಮೀಟರ್ ಅಂತರದಲ್ಲಿದ್ದು ಪ್ರತಿನಿತ್ಯ ವಿದ್ಯಾರ್ಥಿಗಳು ನಡೆದು ಹೋಗಿ ಬಂದು ಮಾಡಲು ಬಹಳ ತೊಂದರೆ ಆಗುತ್ತದೆ. ಈ ಕುರಿತಂತೆ ಬೆಳಗಿನ ಸಮಯಕ್ಕೆ ಶಾಲೆಗೆ ಬರಲು ಹಾಗೂ ಮಧ್ಯಾಹ್ನ ಮನೆಗಳಿಂದ ಶಾಲೆಗೆ ತೆರಳಲು ಶಾಲಾ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದ್ದು, ಅನೇಕ ಬಾರಿ ವಿದ್ಯಾರ್ಥಿಗಳು ಶಾಲೆಯ ತರಗತಿಗಳನ್ನು ತಪ್ಪಿಸಿಕೊಳ್ಳುವ ಭೀತಿಯಲ್ಲಿದ್ದು ಶಾಲೆಗೆ ಚಕ್ಕರ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸದರಿ ಗ್ರಾಮದ ಮುಖ್ಯ ರಸ್ತೆಯಿಂದ ಊರಿನವರಿಗೆ ಮಧ್ಯಾಹ್ನ ಊಟದ ಸಮಯದಲ್ಲಿ ಹಾಗೂ ಶಾಲಾ ದೀರ್ಘ ವಿರಾಮದ ನಂತರದಲ್ಲಿ ಸರಿಯಾದ ಸಮಯಕ್ಕೆ ಬಸ್ ಸಂಚಾರ ಸೇವೆಯನ್ನು ನೀಡಬೇಕು ಇಲ್ಲವೇ ಹೋರಾಟವನ್ನು ಆರಂಭಿಸಬೇಕಾಗುತ್ತದೆ ಎಂದು
ಬೀಮ ಆರ್ಮಿ ಭಾರತ ಏಕತಾ ಮಷೀನ್ ಕಾರ್ಯಕರ್ತರು ಸಾರಿಗೆ ಇಲಾಖೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.  ಒಂದು ವೇಳೆ ನಿರ್ಲಕ್ಷ ತೋರಿದಲ್ಲಿ ಸಂಘಟನೆ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಭೀಮ್ ಆರ್ಮಿ ಗೌರವ ಅಧ್ಯಕ್ಷರಾದ ಅಬ್ದುಲ್ ಗನಿ, ಪ್ರಧಾನ ಕಾರ್ಯದರ್ಶಿ ಕಿರಣ ದೊಡ್ಡಮನಿ ಗುಡೂರ್, ನಗರ ಘಟಕದ ಅಧ್ಯಕ್ಷರಾದ ಬಸವರಾಜ ಇಂಗಳಗಿ ಉಪಾಧ್ಯಕ್ಷರಾದ ವಿಶ್ವರಾಧ್ಯ ಜಿ.ಗೋಪಾಲ್ಕರ್ ಸಹಕಾರದರ್ಶಿ ಮರಿಯಪ್ಪ ಎಸ್ ಆಂದೋಲ ಸೇರಿದಂತೆ ಖಜಾಂಚಿಗಳಾದ ಬಾಬು ನಾಟಿಕಾರ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here