ರಾಯಚೂರು: ಇಂದು ಮಾನ್ವಿ ತಾಲ್ಲೂಕಿನ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಸ್ಥಳಾಂತರ ವಿರೋಧಿಸಿ ತಾಲ್ಲೂಕು ಪಂಚಾಯತ್ ಮುಂದೆ ಹೈದರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಅನಿರ್ದಿಷ್ಟಾವಧಿ ಅವಧಿ ಧರಣಿ ನಡೆಸಿದರು.
ಮಾನ್ವಿ ತಾಲ್ಲೂಕಿನ ನೂತನ ವಸತಿ ನಿಲಯ ನಗರದಿಂದ ಸುಮಾರು 6 ರಿಂದ 8 ಕಿಲೋಮೀಟರ್ ದೂರವಿದ್ದು, ಸುಮಾರು 200 ವಿದ್ಯಾರ್ಥಿಗಳಿಗೆ ಏಳು ಕೋಣೆಗಳು ಮತ್ತು ಕೇವಲ ಮೂರು ಶೌಚಾಲಯಗಳು ಮಾತ್ರ ಇವೆ ಇಂತಹ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳನ್ನು ದನಕರುಗಳಂತೆ ಇಡಲಾಗುತ್ತಿದೆ ಎಂದು ನ್ಯಾಯವಾದಿ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಮಲ್ಲೇಶ್ ಮಾಚನೂರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ನೂತನ ವಸತಿ ನಿಲಯ ನಗರದ ಹೊರವಲಯದ ಕಾಡು ಪ್ರದೇಶದಲ್ಲಿ ಇದ್ದು ವಿದ್ಯಾರ್ಥಿಗಳಿಗೆ ಸಂಕಷ್ಟಕೆ ಸಿಲುಕಿದ್ದಾರೆ ಎಂದು ತಿಳಸಿದರು. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಅಧಿಕಾರಿ ಸ್ಪಂದಿಸದೆ ಇರುವುದರಿಂದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟಾಡುತಿದ್ದಾರೆಂದು ಪ್ರತಿಭಟನೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಪರಶುರಾಮ ಆರೋಲಿ ವಿದ್ಯಾರ್ಥಿ ಏಲಿಯಾಸ್, ರಮೇಶ್ , ಸಿದ್ದಾರ್ಥ್ ಸೇರಿದಂತೆ ಮುಂತಾದ ವಿದ್ಯಾರ್ಥಿಗಳು ಧರಣಿಯಲ್ಲಿ ಇದ್ದರು.