ದೇಶದ ಸಂಸ್ಕøತಿ, ಪರಂಪರೆ ಕಾಪಾಡುವುದು ಎಲ್ಲರ ಹೊಣೆ

0
67

ಕಲಬುರಗಿ: ಇಡೀ ವಿಶ್ವಕ್ಕೆ ಸಂಸ್ಕøತಿ, ದಿವ್ಯ ಪರಂಪರೆಯ ಮೂಲಕ ಗುರುವಾಗುವ ಶಕ್ತಿ ಹೊಂದಿರುವ ದೇಶ ನಮ್ಮದು. ನಮ್ಮತನವನ್ನು ಹೊಂದಿರುವ ನಮ್ಮ ದೇಶದ ಸಂಸ್ಕøತಿ, ಪರಂಪರೆ, ಕಲೆ, ಸಾಹಿತ್ಯವನ್ನು ಕಾಪಾಡಿಕೊಂಡು ಹೋಗುವುದು ಕೆಲವು ವ್ಯಕ್ತಿ, ಸಂಘ-ಸಂಸ್ಥೆಗಳ ಕೆಲಸವಾಗಿರದೆ, ಎಲ್ಲರ ಹೊಣೆಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಕನ್ನಡ ಭವನದಲ್ಲಿ ‘ರಂಗಾಂತರಂಗ ಸಾಂಸ್ಕøತಿಕ ಕಲಾ ಸಂಘ’ಮತ್ತು ‘ಕನ್ನಡ ಮತ್ತು ಸಂಸ್ಕøತಿ ಇಲಾಖೆ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏರ್ಪಡಿಲಾಗಿದ್ದ ‘ಅಂತರಂಗವೇ ಸಾಂಸ್ಕøತಿಕ ರಂಗ’ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ನಮ್ಮ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಭಾವಂತರನ್ನು ಗುರ್ತಿಸಿ, ಪ್ರೋತ್ಸಾಹಿಸುವ ಮೂಲಕ ಕಲೆ, ಸಂಸ್ಕøತಿ ಬೆಳೆಸಬೇಕು. ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಮಾನವ ಇಂದು ತನ್ನ ಜೀವನ ಸಾಗಿಸುತ್ತಿದ್ದು, ನೆಮ್ಮದಿ ಇಲ್ಲದಂತಾಗಿದೆ. ಸುಮಧುರವಾದ ಸಂಗೀತವನ್ನು ಆಲಿಸುವದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸಿಗೆ ನೆಮ್ಮದಿ ದೊರೆಯತ್ತದೆ. ರೋಗವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದ್ದು ಸಂಗೀತದ ಮಹತ್ವ ತೋರಿಸುತ್ತದೆ ಎಂದರು.

ಜಿಲ್ಲಾ ಯುವ ಸಂಘಗಳ ಒಕ್ಕೂಟ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಜೈಕರವೇ ಅಧ್ಯಕ್ಷ ಸಚಿನ್ ಫರತಾಬಾದ ಮಾತನಾಡುತ್ತಾ, ನಮ್ಮ ದೇಶ ಸಂಸ್ಕøತಿಯಲ್ಲಿ ನಮ್ಮತನವಿದೆ. ಅದನ್ನು ಮರೆತರೆ ನಮಗೆ ಉಳಿಗಾಲವಿಲ್ಲ. ವಿದೇಶಿ ಸಂಸ್ಕøತಿ, ಪರಂಪರೆ ಅನುಕರಣೆ ಬೇಡ. ನಮ್ಮ ದೇಶದ ಭವ್ಯ ಸಂಸ್ಕøತಿ, ಪರಪರೆ ಉಳಿಸಿ, ಬೆಳೆಸುವ ಕಾರ್ಯ ನಿರಂತರವಾಗಿ ಜರುಗಬೇಕಾಗಿದೆ. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಮಗ್ರತೆಯ ರಕ್ಷಣೆ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಹೋರಾಟ ಮನೋಭಾವ ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ನಗರದ ಜಗತ್ ಬಡಾವಣೆಯ ಭಜನಾ ಸಂಘ, ಅಕ್ಕಮಹಾದೇವಿ ಮಹಿಳಾ ಭಜನಾ ಸಂಘದವರಿಂದ ಭಜನೆ ಜರುಗಿತು. ವರ್ಷಿಣಿ ಪತ್ತಾರ ಅವರಿಂದ ಭರತನಾಟ್ಯ ಜರುಗಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ನಾಡಿದ ಮೋನಪ್ಪ ನಾಯ್ಕಲ್, ಸಿದ್ದು ಮಡಿವಾಳ, ನಾಗಪ್ಪ ಗೊಬ್ಬುರ, ಜಟ್ಟೆಪ್ಪ ಧನ್ನಿ ಮತ್ತು ಸಿದ್ದು ಗುತ್ತೇದಾರ ಅವರಿಗೆ ‘ಅಂತರಂಗವೇ ಸಾಂಸ್ಕøತಿಕ ರಂಗ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಯುವ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಇತ್ತಿಚಿಗೆ ನೇಮಕರಾದ ಡಾ.ಸುನೀಲಕುಮಾರ ಎಚ್.ವಂಟಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಮಹಮ್ಮದ್ ಸಿದ್ದಿಕಿ, ಯಲಿಷ್ ಸಿಂಹ್, ಲಕ್ಷ್ಮೀಕಾಂತ ಹೊಸಮನಿ, ಅಭಯಪ್ರಕಾಶ, ಮಲ್ಲಿಕಾರ್ಜುನ ಎಸ್.ಯಂಟಮನಿ, ಶಿವಯೋಗಪ್ಪ ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ರಾಜಕುಮಾರ ಬಟಗೇರಿ, ಬಸವರಾಜ ಎಸ್.ಪುರಾಣೆ, ಪ್ರೊ.ರಮೇಶ ಯಾಳಗಿ, ನಾಗಭೂಷಣ ಅಗಸ್ಥ್ಯತೀರ್ಥ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here