ಸುರಪುರ: ಉತ್ತರ ಕರ್ನಾಟಕ ಜೀವನಾಡಿ ಕೃಷ್ಣೆಯು ಈ ಬಾರಿ ಮುನಿಸಿಕೊಂಡು ಅಪಾಯ ಮಟ್ಟ ಮೀರಿ ಹರುಯುತ್ತಿರುವುದರಿಂದ ಬೇಳಗಾವಿ, ಬಾಗಲಕೂಟ, ವಿಜಯಪುರ, ಯಾದಗಿರ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತಗೊಂಡಿರುವುದರಿಂದ ಜನರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಜನರು ಸಂತ್ರಸ್ಥ ಜನರಿಗೆ ಸಹಾಯ ಹಸ್ತ ನೀಡಬೇಕು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳ ಸಹಾಯ ಧನದ ಚೆಕ್ ನೀಡಿ ಮಾತನಾಡಿ,ಮಹರಾಷ್ಟ್ರಾದಲ್ಲಿ ಕುಂಭದ್ರೋಣ ಮಳೆಯಿಂದಾಗಿ ನಮ್ಮ ಕೃಷ್ಣಾ ನದಿ ಈ ಬಾರಿ ಪ್ರವಾಹ ಎದುರಾಗಿದೆ ಸಾವಿರಾರು ಎಕರೆ ರೈತರ ಜಮೀನುಗಳು ನೀರಿನಲ್ಲಿ ಮೂಳುಗಡೆಯಾವೆ ಇತಂಹ ಪರಿಸ್ಥಿಯಲ್ಲಿ ನಾವೆಲ್ಲರು ನೊಂದವರ ಕೈಹಿಡಿಯಬೇಕು,ಅವರಿಗೆ ನಮ್ಮ ಕೈಲಾದಷ್ಟು ಸಹಾಯಮಾಡಬೇಕು,ಹೀಗಾಗಿ ನಾನು ನನ್ನ ವೈಯಕ್ತಿಕವಾಗಿ ಒಂದು ಲಕ್ಷರೂಪಾಯಿಯನ್ನು ಚಕ್‌ಮುಖಾಂತರವಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿ.ಎಮ್.ಹಳ್ಳಿಕೋಟೆ, ಕೃಷ್ಣಾ ಮುದ್ನೂರ ಇದ್ದರು