ಸುರಪುರ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಕಲೆ ಸಾಹಿತ್ಯ ಮತ್ತು ಸಂಗೀತದ ಆಸಕ್ತಿ ಮೂಡಿಸುವುದು ಅವಶ್ಯವಾಗಿದೆ.ಇದರಿಂದ ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಬೆಳೆದು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದು ಮಾಜಿ ಸಚಿವ ಹಾಗು ಸ್ಕೌಟ್ಸ್ ಮತ್ತಯ ಗೈಡ್ಸ್ ಯಾದಗಿರಿ ಜಿಲ್ಲಾ ಸಮಿತಿ ಅಧ್ಯಕ್ಷ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸುರಪುರ ತಾಲ್ಲುಕು ಸಮಿತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ,ಸಂಗೀತ ಮತ್ತು ಕಲೆಗೆ ಯಾವುದೆ ವಯಸ್ಸಿನ ಮತ್ತು ಜಾತಿ ಧರ್ಮಗಳ ಹಂಗಿಲ್ಲ.ಸಂಗೀತ ಮತ್ತು ಸಾಹಿತ್ಯವನ್ನು ರೂಢಿಸಿಕೊಂಡ ಮಕ್ಕಳು ಆಟ ಪಾಠಗಳಲ್ಲೂ ಹೆಚ್ಚಿನ ಶ್ರದ್ಧೆ ಹೊಂದಲಿದ್ದಾರೆ.ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಕಲೆ,ಸಂಗೀತ ಮತ್ತು ನೃತ್ಯ ಹಾಗು ಸಾಹಿತ್ಯದ ಅಭಿರುಚಿ ಮೂಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಜಯಲಲಿತ ಪಾಟೀಲ ಮಾತನಾಡಿ,ಈ ರೀತಿಯ ಗೀತಗಾಯನ ಸ್ಪರ್ಧೆಗಳು ಮಕ್ಕಳಲ್ಲಿ ಕೌಶಲ್ಯಾಭೀವೃಧ್ಧಿ ಮುಡಿಸಲಿದೆ,ಜೊತೆಗೆ ಮಕ್ಕಳಲ್ಲಿ ಕಲೆ ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಮೂಡಲಿದೆ.ಆ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯ ಶ್ಲಾಘನಿಯವಾಗಿದೆ ಎಂದರು.
ವೇದಿಕೆ ಮೇಲೆ ಶಿಕ್ಷಣ ಪ್ರೇಮಿ ಬಸವರಾಜ ಜಮದ್ರಖಾನಿ,ಅಜೀಂ ಪ್ರೇಮಜಿ ಪೌಂಡೇಶನ್ನಿನ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಇದ್ದರು.ಗೀತ ಗಾಯನ ಸ್ಪರ್ಧೆಯ ನಿರ್ಣಾಯಕರಾಗಿ ನರಸಿಂಹ ಕುಲಕರ್ಣಿ ಬಾಡಿಯಾಳ, ಶ್ರೀಪಾದ ಗಡ್ಡದ ಭಾಗವಹಿಸಿದ್ದರು.ತಾಲ್ಲುಕಿನ ವಿವಿಧ ಶಾಲೆಗಳ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಸ್ಪರ್ಧೆಯಲ್ಲಿ ಪ್ರೇರಣಾ ಪ್ರೌಢಶಾಲೆ ಮಕ್ಕಳು ಪ್ರಥಮ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲ್ದಾಳ ಗ್ರಾಮದ ಮಕ್ಕಳು ದ್ವಿತೀಯ ಹಾಗು ಶ್ರೀಮತಿ ರಾಣಿ ಜಾನಕಿದೇವಿ ಪ್ರೌಢಶಾಲೆ ಹಾಗು ಡಾ:ಬಿ.ಆರ್.ಅಂಬೇಡ್ಕರ ಪ್ರೌಢಶಾಲೆ ಮಕ್ಕಳು ದ್ವಿತೀಯ ಸ್ಥಾನ ಪಡೆದರು.ಗೀತಾರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಶಿಕ್ಷಕ ರಾಜಶೇಖರ ದೇಸಾಯಿ ನಿರೂಪಸಿ ವಂದಿಸಿದರು.