ವೈದ್ಯಕೀಯ ಕ್ಷೇತ್ರಕ್ಕೆ ಬುನಾದಿಯಾದ ತಾಂತ್ರಿಕ ಸಲಕರಣೆಗಳು: ಡಾ. ಅನುರಾಧಾ ಪಾಟೀಲ

0
73

ಕಲಬುರಗಿ: ವೈದ್ಯಕೀಯ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಹೊಸ ಆವಿಷ್ಕಾರಗಳನ್ನು ಸೃಷ್ಠಿಸಿ ಕ್ಲೀಷ್ಟಕರ ಸಮಸ್ಯಗಳಿಗೆ ಪರಿಹಾರ ತೋರುತ್ತಿರುವ ತಂತ್ರಜ್ಞಾನಿಗಳ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ ಇವರ ಸತತ ಸಂಶೋಧನಾ ಕಾರ್ಯಗಳಿಂದಾಗಿ ವೈದ್ಯರು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ನೀಡುವಲ್ಲಿ ಸಫಲಾರಗಿದ್ದಾರೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪಾ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಅನಾಟೇಮಿ ಡಿಪಾರ್ಟಮೆಂಟನ್ ಮುಖ್ಯಸ್ಥೆ ಡಾ. ಅನುರಾಧಾ ಪಾಟೀಲ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಅವರು ಇಂದಿಲ್ಲಿ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಕೈಗೊಂಡ ಹತ್ತು ದಿನಗಳ ವೈದ್ಯಕೀಯ ವಿದ್ಯಾರ್ಥಿಗಳ ಸಮುದಾಯ ಸೇವೆಗೆ ಚಾಲನೇ ನೀಡಿ ಮಾತನಾಡಿದರು.

Contact Your\'s Advertisement; 9902492681

ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಉಪ ಪ್ರಾಧ್ಯಾಪಕರಾದ ಅಶೋಕ ಪಾಟೀಲರು ಅವರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ, ರೋಗಿಗಳ ಮಾಹಿತಿ ಸಂಗ್ರಹ ಮತ್ತು ರೋಗ ನಿಯಂತ್ರಣ ಬಗ್ಗೆ ಮುಂಜಾಗ್ರತ ತಿಳುವಳಿಕೆ ನೀಡುವ ಗಣಕಯಂತ್ರಗಳ ಬಗೇಯನ್ನು ಸವಿಸ್ತಾರವಾಗಿ ತಿಳಿಸಿದರು. ಅದೇ ವಿಭಾಗದ ಸಿಸ್ಟಮ್ ಅನೆಲಿಸ್ಟ್ ಆದ ನಾಗೇಶ ಸಾಲಿಮಠ ಉಪನ್ಯಾಸ ನೀಡಿ ವೈದ್ಯಕೀಯ ಕ್ಷೇತ್ರದಲ್ಲಿ ಗಣಕಯಂತ್ರಗಳ ಉಪಯೋಗ ಹಾಗೂ ಉಪಲಬ್ದತೆಗಳ ಕುರಿತು ಉದಾಹರಣೆಗಳೊಂದಿಗೆ ವಿವರಿಸಿದರು.

ಈ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಸತೀಶ ಹಡಗಲಿಮಠ ಅವರು ಮಾತನಾಡಿ ವೈದ್ಯ ವಿದ್ಯಾರ್ಥಿಗಳು ಈ ಸಮುದಾಯ ಸೇವೆಯ ಪೂರ್ಣ ಉಪಯೋಗವನ್ನು ಪಡೆದುಕೊಳ್ಳಬೇಕೇಂದು ವಿದ್ಯಾರ್ಥಿಗಳಲ್ಲಿ ಅರಿಕೆ ಮಾಡಿಕೊಂಡರು.

ಈ ಸಮಾರಂಭಕ್ಕೆ ಅಧ್ಯಕ್ಷರಾಗಿ ಆಗಮಿಸಿದ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ, ಎಸ್. ಎಸ್. ಹೆಬ್ಬಾಳ ಮಾತನಾಡಿ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಇತಿಹಾದಲ್ಲಿ ಈ ತರಹದ ಸಮುದಾಯ ಸೇವೆ ಪ್ರಥಮವಾಗಿದ್ದು ಈ ಕಾರ್ಯಕ್ರಮದ ಮುಖಾಂತರ ವೈದ್ಯವಿದ್ಯಾರ್ಥಿಗಳಲ್ಲಿ ತಾಂತ್ರಿಕಜ್ಞಾನ ನೀಡುವ ಗುರಿಯನ್ನು ಹೊಂದಬೇಕು ಹಾಗೂ ಈ ತರಹದ ಕಾರ್ಯಕ್ರಮಗಳು ಪ್ರತಿವರುಷ ನಡೆಸಲಾಗುವುದು ಎಂದು ಹೇಳಿದರು.

ಹೈ.ಕ.ಶಿ. ಸಂಸ್ಥೆಯ ವಿಶೇಷ ಅಧಿಕಾರಿ ಡಾ. ಸಿ.ಸಿ.ಪಾಟೀಲ, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ, ವಿಭಾದ ಡಾ. ಭಾರತಿ ಹರಸೂರ, ಡಾ.ವಿಶ್ವನಾಥ ಬುರಕಪಳ್ಳಿ, ಉದಯ ಬಳಗಾರ, ನಿತಿನ ಕಟ್ಟಶೆಟ್ಟರ, ಗೌರಿ ಪಾಟೀಲ, ಶರಣಕುಮಾರ ಹುಲಿ, ಗುರಪ್ಪಾ ಕಲ್ಯಾಣಿ, ರಶ್ಮೀ ತಳ್ಳಳಿ, ಗಂಗಾ ಧರಕ, ಗೀತಾ ವಿ.ಜಿ., ಮಲ್ಲಿಕಾರ್ಜುನ ರೆಡ್ಡಿ, ಶ್ರೀಮತಿ ಕವಿತಾ ಕೆ., ಅಂಬಾರಾಯ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here