ವಿದ್ಯಾರ್ಥಿಗಳಿಗೆ ನಗುವೆ ಭೂಷಣ: ಡಾ. ಯಂಡಮೂರಿ ವೀರೇಂದ್ರನಾಥ್

0
60

ಕಲಬುರಗಿ: ವಿದ್ಯಾರ್ಥಿಗಳು ಯಾವುದೇ ಕೆಲಸ ಮಾಡುತ್ತಿದ್ದರೂ ಆ ಕೆಲಸದಲ್ಲಿ ಉತ್ಸಾಹದ ನಗು ಹೊಂದಿರಬೇಕು ಹೊರತು ಹತಾಶೆಯ ನಗುವಲ್ಲ. ಯಶಸ್ಸು ಎಂಬುದು ಉತ್ಸಾಹ ನಗುವಿನಲ್ಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ನಗುವೆ ಭೂಷಣ. ಅದು ನಿಮ್ಮನ್ನು ಉನ್ನತ್ತ ಶ್ರೇಣಿಗೆ ತಲುಪಿಸಬಲ್ಲದು ಎಂದು ಖ್ಯಾತ ಕಾದಂಬರಿಕಾರ ಮತ್ತು ಚಲನಚಿತ್ರ ನಿರ್ದೇಶಕರಾದ ಡಾ. ಯಂಡಮೂರಿ ವೀರೇಂದ್ರನಾಥ್ ಹೇಳಿದರು.

ನಗರದ ಶರಣಬಸವ ವಿವಿಯ ಶತಮಾನೋತ್ಸವ ಸಭಾಂಗಣದಲ್ಲ್ಲಿ ಶುಕ್ರವಾರ ಆಯೋಜಿಸಿದ್ದ ಇಂಡಕ್ಷನ್ (ದೀಕ್ಷಾರಂಭ-೨೦೧೯) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ದಿನಾಲು ಮಲಗುವ ಮುಂಚೆ ಕನಿಷ್ಠ ಮೂವತ್ತು ನಿಮಿಷ ಓದಬೇಕು. ನಂತರ ಮರುದಿನ ಬೆಳಗ್ಗೆ ಮನನ ಮಾಡಿಕೊಳ್ಳಬೇಕು ಇದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಹೆತ್ತವರ ಜೊತೆ ಸಂತೋಷದಿಂದ ಬಾಳಬೇಕು. ಅವರನ್ನು ಪ್ರೀತಿ ಗೌರವದಿಂದ ಕಾಣಬೇಕು ಇದರಿಂದ ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವವೂ ಗೌರವಿಸಲ್ಪಡುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ವ್ಯಕ್ತಿತ್ವ ವಿಕಾಸದಲ್ಲಿ ಮಾನಸಿಕ ಬೆಳವಣಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಮನಸ್ಸು ವ್ಯಕ್ತಿತ್ವದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಮಾನಸಿಕವಾಗಿ ಸದೃಢವಾಗಬೇಕು. ಯಶಸ್ಸು ಎಂಬುವದು ಸುಲಭವಾಗಿ ಸಿಗುವಂತಹದಲ್ಲ. ನಿಮ್ಮ ಕೆಲಸದ ಮೇಲೆ ನಿಮಗೆ ಅತೀಯಾದ ನಂಬಿಕೆ ವಿಶ್ವಾಸ ಇದ್ದಾಗ ಮಾತ್ರ ಯಶಸ್ಸಿನ ಹಾದಿಯಲ್ಲಿ ನೀವೂ ಸುಲಭವಾಗಿ ಸಾಗಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಡಾ. ಯಂಡಮೂರಿ ವೀರೇಂದ್ರನಾಥ್ ಅವರ ಸಾಹಿತ್ಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ನಾನು ಬಾಲ್ಯದಲ್ಲಿಯೇ ಅವರ ಕಾದಂಬರಿ, ಸಾಹಿತ್ಯ ಓದಿ ಅವರ ಪ್ರಭಾವಕ್ಕೆ ಒಳಗಾಗಿದ್ದೇನೆ. ವಿದ್ಯಾರ್ಥಿಗಳು ಕೂಡಾ ಅವರು ಬರೆದ ಕಾದಂಬರಿ, ಸಾಹಿತ್ಯ ಓದುವ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್ ಲಕ್ಷ್ಮಿ ಮಾಕಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here