PM ಫಸಲ್ ಬಿಮಾ: 45,906 ರೈತರಿಗೆ 29.64 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ

0
66

ಕಲಬುರಗಿ: ಪ್ರಸಕ್ತ 2022ರ ಮುಂಗಾರು-ಹಂಗಾಮಿನ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಾಹೆಯಲ್ಲಿ ಅತಿವೃಷ್ಟಿಯಿಂದಾಗಿ ಹಾಳಾದ ಜಿಲ್ಲೆಯ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸ್ಥಳೀಯ ನಿರ್ದೀಷ್ಟ ವಿಕೋಪದಡಿ 45,906 ರೈತರಿಗೆ 29.64 ಕೋಟಿ ರೂ. ಬೆಳೆ ವಿಮೆ ಪರಿಹಾರ ವಿಮಾ ಸಂಸ್ಥೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಅತಿವೃಷ್ಢಿಯಿಂದ ಉದ್ದು, ಹತ್ತಿ, ಹೆಸರು, ಶೇಂಗಾ, ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ತೊಗರಿ, ಸೋಯಾಬಿನ್, ಸೂರ್ಯಕಾಂತಿ ಹಾಗೂ ಟೊಮಾಟೋ ಬೆಳೆಗಳು ಹಾಳಾಗಿ 1,18,924 ರೈತರು ದೂರು ಸಲ್ಲಿಸಿದ್ದು, ಈ ಪೈಕಿ ಮೊದಲ ಹಂತದಲ್ಲಿ 45,906 ರೈತರಿಗೆ 29.64 ಕೋಟಿ ರೂ. ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಲಾಗಿದೆ.

Contact Your\'s Advertisement; 9902492681

ತಾಲೂಕುವಾರು ನೋಡುವುದಾದರೆ ಅಫಜಲಪುರ ತಾಲೂಕಿನ 3,473 ರೈತರಿಗೆ 2.87 ಕೋಟಿ ರೂ., ಆಳಂದ ತಾಲೂಕಿನ 12,599 ರೈತರಿಗೆ 8.15 ಕೋಟಿ ರೂ., ಚಿಂಚೋಳಿ ತಾಲೂಕಿನ 8,231 ರೈತರಿಗೆ 3.38 ಕೋಟಿ ರೂ., ಚಿತ್ತಾಪುರ ತಾಲೂಕಿನ 2,387 ರೈತರಿಗೆ 1.67 ಕೋಟಿ ರೂ., ಜೇವರ್ಗಿ ತಾಲೂಕಿನ 642 ರೈತರಿಗೆ 0.77 ಕೋಟಿ ರೂ., ಕಲಬುರಗಿ ತಾಲೂಕಿನ 4,019 ರೈತರಿಗೆ 3.17 ಕೋಟಿ ರೂ., ಕಾಳಗಿ ತಾಲೂಕಿನ 5,072 ರೈತರಿಗೆ 2.43 ಕೋಟಿ ರೂ., ಕಮಲಾಪೂರ ತಾಲೂಕಿನ 2,549 ರೈತರಿಗೆ 1.53 ಕೋಟಿ ರೂ., ಸೇಡಂ ತಾಲೂಕಿನ 6,275 ರೈತರಿಗೆ 4.90 ಕೋಟಿ ರೂ., ಶಹಾಬಾದ ತಾಲೂಕಿನ 424 ರೈತರಿಗೆ 0.36 ಕೋಟಿ ರೂ. ಹಾಗೂ ಯಡ್ರಾಮಿ ತಾಲೂಕಿನ 235 ರೈತರಿಗೆ 0.36 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ಪ್ರಮುಖವಾಗಿ 40,596 ರೈತರ ತೊಗರಿ ಬೆಳೆ ಹಾನಿಗೆ 27.31 ಕೋಟಿ ರೂ., 2,684 ರೈತರ ಹೆಸರು ಬೆಳೆ ಹಾನಿಗೆ 1.05 ಕೋಟಿ ರೂ., 2,280 ರೈತರ ಉದ್ದು ಬೆಳೆ ಹಾನಿಗೆ 1.02 ಕೋಟಿ ರೂ. ಬಿಡುಗಡೆಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here