ಸುರಪುರ: ವಿಶ್ವ ಬೌದ್ಧ ಧಮ್ಮ ಧ್ವಜ ದಿನಾಚರಣೆ

0
14

ಸುರಪುರ: ವಿಶ್ವ ಬೌದ್ಧ ಧಮ್ಮ ಧ್ವಜೋತ್ಸವ ದಿನದ ಅಂಗವಾಗಿ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ 138 ನೇ ವಿಶ್ವ ಬೌದ್ಧ ಧಮ್ಮ ಧ್ವಜದ ದಿನವನ್ನು ದ್ವಜಾರೋಹಣ ಮಾಡಿ ಆಚರಿಸಲಾಯಿತು.ಬುದ್ದ ವಿಹಾರದ ವಿಶಾಲವಾದ ಬಂಡೆಯ ಮೇಲಿರುವ ಧಮ್ಮ ದ್ವಜದ ಕಟ್ಟೆಯ ಮೇಲೆ ಗೋಲ್ಡನ್ ಕೇವ್ ಬುದ್ದ ವಿಹಾರ ಟ್ರಸ್ಟಿನ ಅದ್ಯಕ್ಷ ವೆಂಕಟೇಶ ಹೊಸಮನಿಯವರು ಬೌದ್ಧ ದ್ವಜಾರೋಹಣವನ್ನು ನೆರವೆರಿಸಿದರು.

ಕಾರ್ಯಾಕ್ರಮದಲ್ಲಿ ಉಪಾಸಕ ರಾಹುಲ್ ಹುಲಿಮನಿಯವರು ಮಾತನಾಡಿ, ಬ್ರಿಟಿಷರ ಕಾಲಘಟ್ಟದ ಬ್ರೀಟಿಷ ಅಧಿಕಾರಿಯಾದ ಸ್ಠೀಲೆ ಓಲೊಕಾಟ್, ಮತ್ತು ಜೆ.ಆರ್ ಡಿಸಿಲ್ವಾ ರವರು ಮೋಟ್ಟ ಮೋದಲಿಗೆ ಶ್ರಿಲಂಕಾದ ಕ್ಯಾಂಡಿಯಲ್ಲಿ ವಿಶ್ವದ 28 ಬುದ್ದಿಸ್ಟ್ ದೇಶಗಳ ಹಿರಿಯ ಬಂತೆಜಿಗಳನ್ನು ಆವ್ಹಾನ ಮಾಡಿ ಅನಗಾರಿಕ ಧಮ್ಮಪಾಲ, ಪ್ರಭಾವಣಿ, ಶ್ರೀಲಂಕಾದಲ್ಲಿ ಬಂತೇಜಿಯಾಗಿ ದೀಕ್ಷೆ ಪಡೆಯುವ ಕಾರ್ಯಾಕ್ರಮಕ್ಕೆ ಎಲ್ಲ 60 ದೇಶಗಳ ಬೌದ್ಧ ಪ್ರತಿನಿಧಿಗಳನ್ನು ಕರೆಸಿ ಎಲ್ಲರು ಒಪ್ಪುವಂತೆ ಬೌದ್ಧ ಧರ್ಮದ ಏಕೈಕ ಒಂದೆ ದ್ವಜವಿರುವಂತೆ ನಿರ್ದರಿಸಿ 1885 ರಲ್ಲಿ ನೀಲಿ,ಅರಿಶಿಣ,ಕೆಂಪು,ಬಿಳಿ,ಕೆಸರಿ ಪಂಚಶೀಲ ಮಹತ್ವ ಬಣ್ಣಗಳ ದ್ವಜವನ್ನು ಅನಾವರಣಮಾಡಿದ ದಿನವನ್ನು ವಿಶ್ವ ಬೌದ್ಧ ಧಮ್ಮ ದ್ವಜದ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕಾಆರ್ಯಕ್ರಮದಲ್ಲಿ ಉಪಾದ್ಯಕ್ಷರಾದ ನಾಗಣ್ಣ ಕಲ್ಲದೆವನಹಳ್ಳಿ, ಭಿಮರಾಯ ಸಿಂದಗೇರಿ, ಸದಸ್ಯರಾದ, ,ಮಾಳಪ್ಪ ಕಿರದಳ್ಳಿ , ಮತ್ತು ಬೌದ್ಧ ಅನುಯಾಯಿಗಳಾದ ಮರೆಪ್ಪ ತೇಲಕರ್, ಶಂಕರ ಹೊಸಮನಿ, ಮಂಜು ಹೊಸಮನಿ, ಎಮ್.ಡಿ.ಗೌಸ್, ಪರುಶುರಾಮ ಗೋವಾ, ನಾಗರಾಜ್ ಬೇವಿನಾಳ, ಚಂದಪ್ಪ ಪಂಚಮ ಅವಿನಾಶ ಹೊಸಮನಿ ಮಾನಪ್ಪ ಚಂದ್ಲಾಪೂರ, ಗಜ ಬೇವಿನಾಳ, ಹಣಮಂತ ಕೊಡ್ಲಿ ,ಇತರರು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here