ಗದಗ: ಜಿಲ್ಲೆಯ ಅಣ್ಣಿಗೆರೆಯ ಹೂಗಾರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮತ್ತೆ ಕಲ್ಯಾಣದ ನಿಮಿತ್ಯ ಸಾಹಿತಿ, ಬರಹಗಾರರಾದ ವಿಶ್ವರಾಧ್ಯ ಸತ್ಯಂಪೇಟೆ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶರಣರ ವಿಚಾರಗಳು ವಿದ್ಯಾರ್ಥಿಗಳು ಕುತುಹಲದಿಂದ ಆಲಿಸಿ, ನಂತರ ಸಂವಾದ ಕಾರ್ಯಕ್ರಮದಲ್ಲಿ ಸುಮಾರು ಮೂರು ಗಂಟೆಗೆ ಅಧಿಕವಾಗಿ ಸತ್ಯಂಪೇಟೆ ಅವರೊಂದಿಗೆ ಪ್ರಶ್ನೊತ್ತರ ಜರುಗಿತು.
ವಿದ್ಯಾರ್ಥಿಗಳಿಗೆ ಮತ್ತೆ ಕಲ್ಯಾಣದ ಮಹತ್ವವನ್ನು ತಿಳಿಸಿ, ವಿಶೇಷ ಉಪನ್ಯಾಸವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಹಿರಿಯರಾದ ಎಸ್. ಎಸ್. ಹರ್ಲಾಪುರ, ನೂರಾರು ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು.