ಕಲಬುರಗಿ: ಕಾಶ್ಮೀರದಲ್ಲಿ ಸಿಪಿಐ(ಎಂ), ಸಿಪಿಐ ಪಕ್ಷದ ಮುಖಂಡ ಕಾಮ್ರೇಡ್ ಸೀತಾರಾಂ ಯೆಚುರಿ ಹಾಗೂ ಕಾಮ್ರೇಡ್. ಡಿ ರಾಜಾ. ರವರನ್ನುಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಇಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಸಮಿತಿಯಿಮದ ಜಗತ್ ಸರ್ಕಲ್ ಹತ್ತಿರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಿಪಿಐ(ಎಂ)ಪಕ್ಷದ ಜಿಲ್ಲಾ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ, ದೇಶದಲ್ಲಿ ಕಾಮ್ರೇಡ್ ಸೀತಾರಾಂ ಯೆಚುರಿ ಹಾಗೂ ಕಾಮ್ರೇಡ್. ಡಿ ರಾಜಾ. ಅವರಿಗೆ ಬಂಧಿಸಿ ದೇಶದಲ್ಲಿ ಅರಾಜಕತೆ ಹಾಗೂ ಪ್ರಜಾಪ್ರಭುತ್ವಕ್ಕೆ ಮುಗಿಸುವ ಹುನ್ನಾರ ಕೇಂದ್ರದ ಬಿಜೆಪಿ ಸರಕಾರ ನಡೆಸುತ್ತಿದೆ ಎಂದು ಆರೋಪಿದರು.
ಜಮ್ಮು ಕಾಶ್ಮೀರ ರಾಜ್ಯದಾದ್ಯಂತ. ಕರ್ಫಿಯು ಹೆರಿದ್ದನ್ನು. ಮತ್ತು ಪ್ರಿಂಟ್ ಮೀಡಿಯಾ ಎಲೆಕ್ಟ್ರಾನಿಕ್ ವಿಡಿಯೋ ಇಂಟರ್ನೆಟ್ ಸಂಪರ್ಕ ಮತ್ತು ಸಂವಹನ ಬಂದ್. ಕಡಿತಗೊಳಿಸಿರುವ ಕೇಂದ್ರದ ಕ್ರಮ ಖಂಡನಿಯವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪಾ ಮಮಶೇಟ್ಟಿ ಸೇರಿದಂತೆ ಮುಂತಾದ ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.