ಶಹಾಪುರ: ವಿವಿಧ ಬಗೆಯ ಸಾಹಿತ್ಯ ಪ್ರಕಾರದ ಉತ್ತಮ ಪುಸ್ತಕಗಳು ಓದುವುದರಿಂದ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯ ಜೊತೆಗೆ ಮನುಷ್ಯನ ಜ್ಞಾನ ಭಂಡಾರವು ಹೆಚ್ಚಿಸುತ್ತವೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಣ್ಣ ಆನೆಗುಂದಿ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಶಹಾಪುರದ ಶ್ರೀಮತಿ ಸುಮಿತ್ರಾ ಪಿ. ಸ್ಮಾರಕ ಪ್ರೌಢಶಾಲೆಯಲ್ಲಿ ಏರ್ಪಡಿಸಿರುವ ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕಗಳು ವ್ಯಕ್ತಿಯ ಸಾಧನೆಯ ಪ್ರತೀಕಗಳಾಗಿವೆ ಆದ್ದರಿಂದ ಶಿಕ್ಷಕರು ಮಕ್ಕಳಿಗೆ ವ್ಯಕ್ತಿತ್ವ ಬೆಳೆಸುವಂತಹ ಪುಸ್ತಕಗಳನ್ನು ಓದುವಂತೆ ಆಗಾಗ್ಗೆ ಸಲಹೆ ನೀಡಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಚಂದ್ರಕಾಂತ ಕರದಳ್ಳಿ ಹೇಳಿದರು. ಪುಸ್ತಕಗಳು ಮೌಲ್ಯಯುತ ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೆ ಸುಸಂಸ್ಕೃತ ಬದುಕಿಗೆ ಸ್ಫೂರ್ತಿ ದಾಯಕವಾಗಬಲ್ಲವು ಎಂದು ಕಥೆಗಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿದ್ಧರಾಮ ಹೊನ್ಕಲ್ ಹೇಳಿದರು.
ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆಯಲ್ಲಿ ಸುಮಾರು ೧೦ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ನಾಡಿನ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದಿ ಅದರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕುಮಾರ ಅರುಣ್ ೧೦ ನೇ ತರಗತಿ ವಿದ್ಯಾರ್ಥಿ. ಸಂಶೋಧಕ ಸಿದ್ದಣ್ಣ ಕುಂಭಾರ ರಚಿಸಿರುವ ಶಹಾಪುರದ ಪರಿಸರ ಶಾಸನಗಳು ಮತ್ತು ದೇವಾಲಯಗಳು ಕುರಿತು ಪುಸ್ತಕದ ಅಭಿಪ್ರಾಯ ಮಂಡಿಸಿ ಪ್ರಥಮ ಸ್ಥಾನ ಪಡೆದರೆ ಕುಮಾರಿ ಸವಿತಾ ೯ ನೇ ತರಗತಿ ವಿದ್ಯಾರ್ಥಿನಿ ಶ್ರೀ ಜೀವಿ ಶಾಸ್ತ್ರಿಯವರ ರಚಿಸಿರುವ ಬೇಂದ್ರೆಯವರ ಬದುಕಿನ ಸಾರಾಂಶ ಕುರಿತು ಅಭಿಪ್ರಾಯ ಮಂಡಿಸಿ ಜ್ಯೋತಿ ಸ್ಥಾನ ಪಡೆದಳು.ಕುಮಾರ ಅರುಣ್ ೮ ನೇ ತರಗತಿಯ ವಿದ್ಯಾರ್ಥಿ ಎಂ.ಪಿ. ಅಂಗಡಿಯವರು ರಚಿಸಿರುವ ಮಗ್ಗಿ ವಾಮನ ಹಾಡುಗಳು ಎಂಬ ಕೃತಿಯ ಬಗ್ಗೆ ಅಭಿಪ್ರಾಯ ಮಂಡಿಸಿ ತೃತೀಯ ಸ್ಥಾನ ಪಡೆದುಕೊಂಡರು.
ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿ ಪ್ರೋತ್ಸಾಹಿಸಿದರು. ಈ ಕಾರ್ಯಕ್ರಮದ ವೇದಿಕೆಯ ಮೇಲೆ ಖ್ಯಾತ ಸಾಹಿತಿಗಳು ಹಾಗೂ ಸಂಶೋಧಕರಾದ ಡಾ.ಮೊನಪ್ಪ ಶಿರವಾಳ, ಸಹಾಯಕ ಆಡಳಿತಾವಧಿಕಾರಿಗಳು ವಿಭಾಗೀಯ ಕಚೇರಿ ಈ.ಕ.ರ.ಸಾರಿಗೆ ಸಂಸ್ಥೆ ಯಾದಗಿರಿ,ಯಾದಗಿರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಸಿನ್ನೂರ್. ಪುರಸಭೆಯ ಮಾಜಿ ಅಧ್ಯಕ್ಷರಾದ ಸಣ್ಣ ನಿಂಗಣ್ಣ ನಾಯ್ಕೋಡಿ ,ಸಗರನಾಡು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರವೀಂದ್ರನಾಥ ಪತ್ತಾರ್,ಶ್ರೀಮತಿ ಶೈಲಜಾ ಪತ್ತಾರ ಹಾಗೂ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಗುರುಗಳಾದ ಶ್ರೀ ವೆಂಕಟೇಶರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು,ಶಿಕ್ಷಕಿ ಶ್ರೀಮತಿ ಈರಮ್ಮ ಉಪಾಸೆ ಪ್ರಾರ್ಥಿಸಿದರು, ರೇಣುಕಾ ನಿರೂಪಿಸಿದರು ವಂದಿಸಿದರು.