ಇಂದಿನ ಜಾಗತಿಕ ತಲ್ಲಣಗಳಿಗೆ ಅಂದಿನ ಶರಣರ ವಚನಗಳಲ್ಲಿ ಸೂಕ್ತ ಪರಿಹಾರ: ಪ್ರಮಿಳಾ ಎಂ.ಕೆ

0
127

ಕಲಬುರಗಿ: ಜಗತ್ತನ್ನು ಬಾಧಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಶರಣರು ಹೇಳಿದ ಅರಿವು, ಕಾಯಕ, ದಾಸೋಹ ಸೂತ್ರಗಳು ಸೂಕ್ತ ಮತ್ತು ಶಾಶ್ವತ ಪರಿಹಾರ ನೀಡಬಲ್ಲವು ಎಂದು ಜೆಸ್ಕಾಂ ಪ್ರಧಾನ ವ್ಯವಸ್ಥಾಕಿ ಪ್ರಮೀಳಾ ಎಂ.ಕೆ ಅಭಿಪ್ರಾಯಪಟ್ಟರು.

ಇಂದು ನಗರದ ಪಿಲ್ಲೂ ಹೋಮಿ ಇರಾನಿ ಡಿಗ್ರಿ ಕಾಲೇಜಿನಲ್ಲಿ  ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಇಂದು ಹಮ್ಮಿಕೊಂಡ ಶರಣರಾದ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪ ಬಾಲಪಗೋಳ್ ಸ್ಮರಣಾರ್ಥ ಆಯೋಜಿಸಿದ ಸಮತತ್ವ ಬಿತ್ತ ಬನ್ನಿ ಸರ್ವೋದಯಕ್ಕಾಗಿ. ಮನ ಬೆಸೆದು ಮಾಡೋದಿದೆ ಮಾನವೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ಕಾಯಕದ ಘನತೆಯನ್ನು ಸಾರಿ ಹೇಳಿದ್ದು, ವಚನಗಳನ್ನು ಪಚನ ಮಾಡಿಕೊಂಡು ಆಚರಣೆಗೆ ತರಬೇಕು ಎಂದರು.

Contact Your\'s Advertisement; 9902492681

ಕಲುಷಿತಗೊಂಡಿರುವ ಇಂದಿನ ಸಮಾಜಕ್ಕೆ ವಚನ ಸಾಹಿತ್ಯದಲ್ಲಿರುವ ಉತ್ತರವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು. ಮಾನವ ಕಲ್ಯಾಣಕ್ಕೆ ‘ಮತ್ತೆ ಕಲ್ಯಾಣ’ ವಿಷಯ ಕುರಿತು ಸಾಕ್ಷಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಎಲ್ಲ ಜಾತಿ, ಧರ್ಮಗಳ ಸ್ತ್ರೀ ಪುರುಷರ ನಡುವೆ ಸಮಭಾವ ಮೂಡದೆ ಯಾವ ಪೂಜೆಯೂ ಫಲ ನೀಡದು. ಮನದೊಳಗೆ ಅರಿವಿನ ಜ್ಯೋತಿ ಬೆಳಗಿ ಅದು ಸಮಾಜದ ವಿಶಾಲ ಬೆಳಕಿನೊಳಗೆ ಲೀನವಾಗದಿದ್ದರೆ ಭಕ್ತಿಯ ಸಂಕೇತಗಳು ಆರ್ಥಹೀನ. ಜಡತ್ವಕ್ಕೆ ಸಂದ ಮನಸ್ಸುಗಳನ್ನು ಬಡಿದೆಚ್ಚರಿಸಿ ಬದುಕಿನ ಸಾರ್ಥಕತೆಯ ಮಾರ್ಗ ತೋರಿಸಿದ್ದು 12 ನೇ ಶತಮಾನದ ಶರಣ ಚಳವಳಿ ಎಂದು ತಿಳಿಸಿದರು.

ಶರಣರು ಮಾನವ ಕಲ್ಯಾಣ ಮಾತ್ರವಲ್ಲ ಸಕಲ ಜೀವಾತ್ಮರಿಗೆ ಲೇಸು ಬಯಸಿದವರು. ಆ ಅರಿವಿನ ಮಾರ್ಗ ಮತ್ತೆ ಕಂಡು ಕೊಳ್ಳುವ ಪ್ರಯತ್ನವೇ ‘ ಮತ್ತೆ ಕಲ್ಯಾಣ’ ಆಂದೋಲನ ಎಂದರು. ಹೊಸ ಬೆಳಕು ನೀಡುವ ಅರಿವಿನ ಪರಂಪರೆ ನಮ್ಮೊಳಗೆ ಇದೆ. ಬಸವಾದಿ ಶಿವಶರಣರ ಚಿಂತನೆ ಮತ್ತು ಕ್ರಿಯೆಯಲ್ಲಿ ಇಂದಿನ ತಲ್ಲಣದ ಬದುಕಿಗೆ ದಾರಿದೀಒವಾಗಬಲ್ಲ ತತ್ವಗಳಿವೆ. ಇಂದು ಯಾವುದೇ ಹೊಸ ಚಿಂತನಗೆ, ತಂತ್ರಜ್ಞಾನ ಹಾಗೂ ಪ್ರಯೋಗಗಳಿಗಾಗಿ ಹೊರ ದೇಶಗಳತ್ತ ನೋಡುವ ಪರಾವಲಂಬಿಗಳಾಗಿದ್ದು, ಜೀವಪ್ರೀತಿ ಸಾರುವ ಬೌದ್ಧಧರ್ಮ, ಕಾಯಕ-ದಾಸೋಹದಂತಹ ಹೊಚ್ಚ ಹೊಸ ಮಾತುಗಳನ್ನು ಕಲಿಸಿದ ವಚನ ಸಾಹಿತ್ಯದೆಡೆಗೆ ಹೊರಳಿ ನೋಡುವುದು ಈ ಕಾಲದ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಸಾಣೆಹಳ್ಳಿ ಡಾ. ಪಂಡಿತಾರಾಧ್ಯರ ಕರ್ಣ ಧಾರತ್ವದಲ್ಲಿ ಆ.1 ರಿಂದ ತರಿಕೇರಿಯಿಂದ ಹೊರಟಿರುವ ಈ ನಡಿಗೆ ಸಮಕಾಲೀನ ಸಂದರ್ಭಕ್ಕೆ ಬೆಳಕು ನೀಡುವ ವಿಶ್ವಾದವಿದೆ. ಕೆಡುವುದು ಸುಲಭ. ಕಟ್ಟುವುದು ಕಷ್ಟ ಮುಂದಿನ ಪೀಳಿಗೆಗೆ ಮಾನವೀಯತೆಯ ಭದ್ರ ಬುನಾದಿಗೆ ಮುನ್ನುಡಿ ಒದಗಿಸಲಿದೆ ಎಂದರು. ಕನ್ನಡದ ಅಸ್ಮಿತೆಯೊಂದಿಗೆ ಹೆಣೆದುಕೊಂಡಿರುವ ‘ ಮತ್ತೆ ಕಲ್ಯಾ’ ವೆಂಬ ಹೆಸರು ಸಂಕೇತವಷ್ಟೇ.

ಅಧ್ಯಕ್ಷತೆ ವಹಿಸಿದ್ದ  ಪದವಿ ಕಾಲೇಜಿನ ಪ್ರಾಚಾರ್ಯರಾದ ಕವಿತಾ ಜಿ. ಪಾಟೀಲ ಮಾತನಾಡಿ, ಬದುಕಿಗೆ ಹೊಸ ಬೆಳಕು ನೀಡುವ ವಚನ ಸಾಹಿತ್ಯದ ತಳಹದಿಯ ಮೇಲೆ ಕಲ್ಯಾಣ ರಾಜ್ಯ ಸ್ಥಾಪಿಸುವುದು ಅವಶ್ಯಕ ಎಂದು ತಿಳಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿ, ಸಮಾಜಕ್ಕೆ ದುಡಿದ ಮಹನೀಯರ ಸ್ಮರಣೆಯಲ್ಲಿ ಮಾನವೀಯ ಮೌಲ್ಯ ಬಿತ್ತುವ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ ಕೈ ಜೋಡಿಸಿದಂತೆ ಕಲಬುರಗಿಗೆ ಆ. 29ರಂದು ಅಗಮಿಸಲಿರುವ ‘ಮತ್ತೆ ಕಲ್ಯಾಣ’ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಶ್ರೀಕಾಂತಗೌಡ ಪಾಟೀಲ ತಿಳಗೂಳ, ಸತೀಶ ಸಜ್ಜನ, ಮರಪಳ್ಳಿ , ಶಿವಾನಂದ ಮಠಪತಿ ಇತರರಿದ್ದರು. ಬಸವತತ್ವ ಆಚರಣಾ ಸಂಸ್ಥೆಯ ಉದಯಕುಮಾರ ಸಾಲಿ, ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ವೇದಿಕೆಯಲ್ಲಿದ್ದರು. ನಾಗವೇಣಿ ಎಸ್. ಹಿರೇಮಠ ನಿರೂಪಿಸಿದರು. ಶಿವರಾಜ ಅಂಡಗಿ ಸ್ವಾಗತಿಸಿದರು. ರವೀಂದ್ರ ಭಂಟನಳ್ಳಿ ಶರಣು ಸಮರ್ಪಿಸಿದರು.

ಶ್ರೀಕಾಂತಗೌಡ ಪಾಟೀಲ ತಿಳಗೂಳ, ಸತೀಶ ಸಜ್ಜನ್, ಜಗದೀಶ ಮರಪಳ್ಳಿ, ಶಿವಾನಂದ ಮಠಪತಿ ಡಾ. ಗೀತಾ ಪಾಟೀಲ, ಶರಣಗೌಡ ಪಾಟೀಲ ಪಾಳಾ, ಮಹಾಂತೇಶ ಕಲ್ಬುರ್ಗಿ ಇತರರು ಭಾಗವಹಿಸಿದ್ದರು. ನಂತರ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ, ಶ್ರೀಧರ ಹೊಸಮನಿ ಇತರರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here