ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 160 ನೇ ಜನ್ನದಿನದ ಅಂಗವಾಗಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಯುವ ದಿನಾಚರಣೆ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕರಾದ ಎಸ್.ಎಲ್.ಪಾಟೀಲರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು ದೇಶದಲ್ಲಿ ಇಂದು ಜಾತಿ, ಧರ್ಮದ, ಹೆಸರಿನಲ್ಲಿ ಜನರನ್ನು ವಿಭಜಿಸಲಾಗುತ್ತಿದೆ,ಈ ಹಿನ್ನಲೆಯಲ್ಲಿ ಯುವಕರು ಮುಂದೆ ಬಂದು ಜನರನ್ನು ಒಂದೂ ಗೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು, ನಮ್ಮ ದೇಶದಲ್ಲಿ ಬಲಪಂಥೀಯರು ಹಾಗೂ ಎಡಪಂಥೀಯರಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದರು.
ಧರ್ಮವೆಂದರೆ ತನ್ನನ್ನು ತಾನು ಅರೀತುಕೊಳ್ಳುವದು ಎಂದು ವಿವೇಕಾನಂದರ ಹೇಳಿಕೆಯನ್ನು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿಕೊಂಡಿದ್ದರು.ಓSS ಅಧಿಕಾರಿಗಳಾದ ಡಾ.ಶಾಂತಾ ಮಠ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ಇನ್ನೋರ್ವ ಅಧಿಕಾರಿ ಡಾ.ಮಹೇಶ ಗಂವ್ಹಾರ, ಉಮಾ ಪಾಟೀಲ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ವಿಜಯಕುಮಾರ ಪರುತೆ,ಡಾ.ನಾಗೇಂದ್ರ ಮಸೂತೆ,ಡಾ.ರೇಣಕಾ ಹೆಚ್,ಡಾ.ರೇಣುಕಾ ಪಾಟೀಲ, ಪ್ರೊ.ಶಿವಲೀಲಾ ಧೋತ್ರೆ ಹಾಗೂ ಬೊಧಕ -ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಕುಮಾರಿ ಅಂಜಲಿ ನಿರ್ವಹಿಸಿದರು,ಕುಮಾರಿ ತ್ರಿವೇಣಿ ಹಾಗೂ ಮಹೇಶ್ವರಿ ಪ್ರಾರ್ಥಿಸಿದರು ಕೊನೆಯಲ್ಲಿ ಕುಮಾರಿ ಜಸ್ಮೀತಾ ವಾಲಿಯಾ ವಂದಿಸಿದರ.