ಕಾಳಗಿ: ಸರಕಾರ ಸಾವಿರಾರು ಕೋಟಿ ಹಣವನ್ನು ಜನರ ಮೂಲ ಸೌಕರ್ಯಕ್ಕೆ ವಿನಿಯೋಗ ಮಾಡುತ್ತದೆ. ಅಧಿಕಾರ ಶಾಶ್ವತವಲ್ಲ, ಶಾಸಕರಿಲ್ಲದೆ ಹೊದರು ಕಾಮಗಾರಿಯ ಅಡಿಗಲ್ಲು ಅಧಿಕಾರಿದ ಹೆಸರು ಹೇಳುತ್ತದೆ, ಯಾವುದೇ ಅಭಿವೃದ್ಧಿಯಾದರೂ ಗುಣಮಟ್ಟದಿಂದ ಕೂಡಿರಬೇಕು, ಕಳಪೆಯಾಗಿದ್ದರೆ ಮೂಲಾಜಿಲ್ಲದೆ ಇಲಾಖೆಗೆ ದೂರು ನೀಡಬೇಕು ಎಂದು ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.
ಕಾಳಗಿ ತಾಲ್ಲೂಕಿನ ಟೆಂಗಳಿ ಗ್ರಾಮದಲ್ಲಿ, ಲೋಕೋಪಯೋಗಿ ಇಲಾಖೆ, 2022-23 ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ 1.20 ಕೋಟಿ ಮೌಲ್ಯದ 1 ಕಿಮೀ ರಸ್ತೆ ಅಡಿಗಲ್ಲು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಮಹಿಳಾ ಮಾಜಿ ಅಧ್ಯಕ್ಷ ಶಶಿಕಲಾ ಟೆಂಗಳಿ, ಪ್ರಥಮ ದರ್ಜೆ ಗುತ್ತೇದಾರ ಶರಣಪ್ಪ ತೇಲ್ಕೂರ, ಜಿಡಬ್ಲ್ಯೂಡಿ ಎಇಇ ಸಿದ್ರಾಮ ದಂಡಗುಲಕರ್, ಎಇ ರಾಜೇಂದ್ರ ದೇಶಪಾಂಡೆ, ವಿಜಯಕುಮಾರ ಚೇಂಗಟಿ, ಮಲ್ಲಿನಾಥ ಪಾಟೀಲ ಕಾಳಗಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಸವರಾಜ, ಟೆಂಗಳಿ ಶಕ್ತಿ ಕೇಂದ್ರ ಅಧ್ಯಕ್ಷ ಬಸವರಾಜ ಬಸ್ತೆ, ಕಾಳಗಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ ಕದಂ, ಸಂತೋಷ ಪಾಟೀಲ, ಶರಣು ಭಂಕಲಗಿ, ಆನಂದ ಕೇಶ್ವರ, ರಮೇಶ ಕಿಟ್ಟದ, ನಾರಾಯಣ ನಾಟೀಕರ, ವಿಜಯಕುಮಾರ ತುಪ್ಪದ, ಮಂಜುನಾಥ ಭೈರನ, ನಾಗರಾಜ ಕೇಶ್ವರ ಸೇರಿ ಇತರರಿದ್ದರು.