ಕಾಳಗಿ: ತಾಲ್ಲೂಕು ಸಮೀಪದ ಕೊಡದೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ನಿ) ಸಂಘಕ್ಕೆ ಶರಣಬಸಪ್ಪ ಶಿವರಾಯ ಯಡಗಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಂಗೀತ ಸೇಡಂ ಹೇಳಿದ್ದಾರೆ.
11ಜನರ ಸಂಖ್ಯೆ ಬಲಹೊಂದಿದ ರೈತ ಸಂಘಕ್ಕೆ, ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿದ್ದು, ಅವಿಶ್ವಾಸವಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಕೇವಲ ಒಂದು ನಾಮ ಪತ್ರ ಸಲ್ಲಿಸಲಾಯಿತು. 11 ಜನ ಸದಸ್ಯರ ಸಂಖ್ಯೆ ಬಲದಲ್ಲಿ 7 ಜನರ ಮತವನ್ನು ಪಡೆದು ಅವಿರೋಧವಾಗಿ ಆಯ್ಕೆಯಾದರು ಎಂದರು.
ನಂತರ ಮಾತನಾಡಿದ ಅಧ್ಯಕ್ಷ ಶರಣಬಸಪ್ಪ, ನಾನೊಬ್ಬ ಸಣ್ಣ ರೈತ, ನನ್ನನ್ನು ಗುರುತಿಸಿ ಅಧ್ಯಕ್ಷ ಮಾಡಿದ ಗ್ರಾಮದ ರೈತ ಸಂಘಕ್ಕೆ, ಸಮಸ್ತ ಜನತೆಗೆ ಅಭಾರಿಯಾಗಿರುತ್ತೇನೆ. ನನಗುಳಿದ ಅಧಿಕಾರದ ಅವದಿಯಲ್ಲಿ ಸದಸ್ಯರ ನಿರ್ಣಾಯದಂತೆ, ಹಿಂದೆನು ನನಗೆ ತಿಳಿಯದು, ಅಭಿವೃದ್ಧಿ ನನ್ನ ಮೂಲ ಮಂತ್ರ ಮೊದಲು ಮಾಡಿಕೊಂಡು, ರೈತರಿಗೆ ಒಳಿತಾಗುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ವಿಎಸ್ಎಸ್‌ಎನ್ ಉಪಾಧ್ಯಕ್ಷೆ ಮಂಜುಳ ಮಲ್ಲಪ್ಪ ದಿಗ್ಗಾಂವ, ಸಿಇಒ ಕಿಶನರಾವ ಕುಲಕರ್ಣಿ, ಚುನಾವಣಾ ಸಮೀತಿ ಸದಸ್ಯ ಹಣಮಂತ ದಸಪಳ್ಳಿ, ಸದಸ್ಯರಾದ, ಚಂದ್ರಕಾಂತ ಹಾಳಕಾಯಿ, ಮಡಿವಾಳಪ್ಪ ಗುಂಡಗುರ್ತಿ, ರಾಜಶೇಖರ ಪಾಟೀಲ ಮಳಗಿ, ಶ್ರೀಮಂತ ಚಂದಾ, ಲಚ್ಚಪ್ಪ ಚವ್ಹಾಣ, ಕಾಂಗ್ರೆಸ್ ಪ್ರಚಾರ ಸಮೀತಿ ಅಧ್ಯಕ್ಷ ಗಣಪತಿ ಹಾಳಕಾಯಿ, ಮಾಜಿ ತಾಪಂ ಸದಸ್ಯ ಪ್ರಶಾಂತ ರಾಜಾಪೂರ, ಮಲ್ಲಪ್ಪ ಮಾಸ್ಟ್ರ ದಿಗ್ಗಾಂವ, ವೀರಣ್ಣ ಲಿಂಗದಳ್ಳಿ, ವಿಷ್ಣುಕಾಂತ ಮೇಲ್ಕೇರಿ, ಪ್ರಕಾಶ ಮೆಲ್ಕೇರಿ, ನೀಲಕಂಠ ಪೋಲಿಸ ಪಾಟೀಲ, ಸಿದ್ದು ಸ್ವಾಮಿ ಕುಕ್ಕುಂದಿ, ಆನಂದ ಮಂಗೊಂಡ, ಬಂಡು ಗದ್ದಿ, ಸದ್ಧಾಂ ಹುಸೇನ್ ಗುಡುಬಾಯಿ, ಬಂಡಪ್ಪ ಬಾಬಗೋಳ, ನಾಗಲಿಂಗ ಪಂಚಾಳ ಸೇರಿ ಅನೇಕರಿದ್ದರು.