ನಾಳೆ ಕಲಬುರಗಿ ಸ್ಮಾರ್ಟ್ ಸಿಟಿ ಕ್ಲಬ್‍ನ 3ನೇ ವಾರ್ಷಿಕೋತ್ಸವ ಸಂಭ್ರಮ

0
36

ಕಲಬುರಗಿ: ನಗರದ ಸುವರ್ಣ ಸೌಧ,ಕನ್ನಡ ಭವನದಲ್ಲಿ ಜನವರಿ 17ರಂದು ಸಂಜೆ 6 ಗಂಟೆಗೆ ಕಲಬುರ್ಗಿ ಸ್ಮಾರ್ಟ್ ಸಿಟಿ ಕಬ್ಲ್‍ನ 3ನೇ ವಾರ್ಷಿಕೋತ್ಸವ ಹಾಗೂ ಪ್ರಾಧಿಕಾರಿಗಳ ಹಿರಿಯ ಅಧಿಕಾರಿಗಳಿಗೆ ಸನ್ಮಾನ ಸಮಾರಂಭ ಜರುಗಲಿದೆ ಎಂದು ಕ್ಲಬ್‍ನ ಕಾರ್ಯದರ್ಶಿ ಎಸ್.ವಿ. ನಿಂಗಪ್ಪ ಮತ್ತು ಸದಸ್ಯ ಸಂಜೀವಕುಮಾರ್ ಡೊಂಗರಗಾಂವ್ ಅವರು ತಿಳಿಸಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಶಕ್ತಿ ನಗರದ ಮುಖ್ಯ ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕ್ಲಬ್ ಸಭಾಂಗಣದಲ್ಲಿ ಕರೆದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಕ್ಲಬ್ ನಗರದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ 500ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಸಮಾಜ ಸೇವಾ ಕಾರ್ಯಕರ್ತರನ್ನೊಳಗೊಂಡು ನಿರಂತರವಾಗಿ ನಗರದ ಅನೇಕ ಬಡಾವಣೆಗಳಲ್ಲಿ ಸ್ವಚ್ಛ ಪರಿಸರ ನಿರ್ಮಾಣ, ರಸ್ತೆ ಮೇಲಿನ ತಗ್ಗು ದಿನ್ನೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳ ಗಮನಕ್ಕೆ ತರುವುದು, ಉದ್ಯಾನವನದಲ್ಲಿನ ಸೌಂದರ್ಯಿಕರಣ ಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಮಾಡಿಸಿದ ಹೆಮ್ಮೆ ಇದೆ ಎಂದರು.

Contact Your\'s Advertisement; 9902492681

ಬಡಾವಣೆಯಲ್ಲಿನ ಬೀದಿ ದೀಪಗಳ ಇಲ್ಲದ ಹೊತ್ತಿನಲ್ಲಿ ಅಳವಡಿಕೆಗೆ ಸಂಬಂಧಿತರ ಗಮನಕ್ಕೆ ಮಾಡಿಸಿದ್ದು, ಒಳಚರಂಡಿಗಳ ನೂನ್ಯತೆಗಳು ಸರಿಪಡಿಸಲು ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಕಾರ್ಯ, ಬೀದಿ ನಾಯಿ, ಹಂದಿಗಳ ಉಪದ್ರವವನ್ನು ನಾಗರಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಆಯಾ ಪ್ರಾಧಿಕಾರದ ಅಧಿಕಾರಿಗಳ ತಿಳಿಸಿ ಕ್ರಮಕೈಗೊಳ್ಳಲು ಸ್ಮಾರ್ಟ್ ಸಿಟಿ ಕ್ಲಬ್ ಯಶಸ್ವಿಯಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ಬಹು ಮುಖ್ಯವಾಗಿ ಬಡಾವಣೆಗಳ ಸಾರ್ವಜನಿಕ ಸಮಸ್ಯೆಗಳನ್ನು ಆಯಾ ಪ್ರಾಧಿಕಾರದ ಮುಖ್ಯ ಅಧಿಕಾರಿಗಳ ಹಾಗೂ ಕ್ಲಬ್‍ನ ಸದಸ್ಯರು ಒಳಗೊಂಡ ವಾಟ್ಸಪ್ ಗ್ರೂಪನ್ನು ರಚಿಸಿಕೊಂಡು ಸಾರ್ವಜನಿಕರ ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಸೇತುವೆಯಾಗಿ ಸಮಸ್ಯೆ ನಿವಾರಣೆಗಳ ಕ್ಲಬ್ ನಿರಂತರವಾಗಿ ಕಾರ್ಯನಿರ್ವಹಿಸಿದ ಫಲವಾಗಿ ಸಮಾಜ ಸೇವಾರ್ಥವಾಗಿ ಶ್ರಮಿಸುತ್ತಿರುವ ಕ್ಲಬ್ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಈ ಫಲವಾಗಿ ಜನವರಿ 17ರಂದು ಕ್ಲಬ್‍ನ 3ನೇ ವಾರ್ಷಿಕೋತ್ಸವ ಮತ್ತು ಜನರ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಇದಕ್ಕೆ ಸಭೆಯಲ್ಲಿ ಸರ್ವರು ಸಹಮತ ಸೂಚಿಸಿದರು.

ಅಂದು ಸಮಾರಂಭವನ್ನು ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಡಿ. ಪಾಟೀಲ್ (ಐಎಎಸ್) ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಕಾರ್ಮಿಕ ಸಚಿವ ಎಸ್. ಕೆ. ಕಾಂತಾ, ಜೆಸ್ಕಾಂ ಮುಖ್ಯ ಇಂಜಿನಿಯರ್ ಚಂದ್ರಶೇಖರ್, ಸಾಮಾಜಿಕ ಕಾರ್ಯಕರ್ತೆ ಮಾಲಾ ಡೊಣ್ಣೂರ್ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಸ್ಮಾರ್ಟ್ ಸಿಟಿ ಕ್ಲಬ್ ಅಧ್ಯಕ್ಷ ಪಿ.ಎಸ್. ಮಹಾಗಾಂವಕರ್ ಅವರು ವಹಿಸುವರು ಎಂದು ಅವರು ಹೇಳಿದರು.

ನಗರದ ಬಡಾವಣೆಯಲ್ಲಿ ಹಸಿರು, ಸ್ವಚ್ಛ ಮತ್ತು ಸುಂದರ ನಗರಕ್ಕಾಗಿ ಶ್ರಮಿಸಿದ ಇಲಾಖೆಗಳ ಅಧಿಕಾರಿಗಳಾದ ಪಾಲಿಕೆಯ ಉಪ ಆಯುಕ್ತ ಆರ್.ಪಿ. ಜಾಧವ್, ಯುಜಿಡಿ ಎಇಇ ನರಸಿಂಹ ರೆಡ್ಡಿ, ನೀರು ಸರಬರಾಜು ಎಇಇ ಶಿವುಕುಮಾರ್ ಪಾಟೀಲ್, ಜೆಸ್ಕಾಂ ಇಇ ವೀರಭದ್ರ, ಎಲ್&ಟಿ ವ್ಯವಸ್ಥಾಪಕ ಸಂಜೀವಕುಮಾರ್ ಸೇರಿದಂತೆ 11 ಪ್ರಮುಖ ಇಲಾಖೆಯವಿವಿಧ ಇಲಾಖೆಯ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ನಗರದ ಸಾರ್ವಜನಿಕರು ಮತ್ತು ಕ್ಲಬ್‍ನ ಸರ್ವ ಸದಸ್ಯರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಪ್ರಮುಖರಾದ ನಳನಿ ಪಿ. ಮಹಾಗಾಂವಕರ್, ಯಶ್ವಂತ್ ಸಿಂಧೆ, ಎಸ್.ವಿ. ನಿಂಗಪ್ಪ, ಶಿವಶರಣಪ್ಪ ಚಿಗ್ಗೋಣಿ, ಎಂ.ಎಂ.ಎಲ್ ಅಲಂಕಾರ್, ಸಂಜೀವಕುಮಾರ್ ಡೊಂಗರಗಾಂವ್, ಮಲ್ಲಿಕಾರ್ಜುನ್ ಮೂಲಗೆ, ರವಿ ಸಜ್ಜನ್, ಅಶ್ವಿನಿ, ರಾಜು ಗಲಗಲಿ, ಎಂ.ಎಸ್. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here