ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಸ್ವಾಮಿ ವಿವೇಕಾನಂದ ರವರ ಪತ್ರಿಮೆಯನ್ನು ಸ್ಥಾಪಿಸಬೇಕೆಂದು ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷರಾದ ಮಂಜುನಾಥ ನಾಲವಾರಕರ್ ಆಗ್ರಹಿಸಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷರಾದ ಅವಿನಾಶ ಕುಲಕರ್ಣಿ ರೇವೂರ ಅವರನ್ನು ಭೇಟಿ ಮಾಡಿದ ಕರವೇ ನಿಯೋಗ ಸುಮಾರು ದಿನಗಳಿಂದ ಇರುವ ತಮ್ಮ ಬೇಡಿಕೆಗೆ ಸ್ಪಂದಿಸಿದಿದ್ದರೇ ಹೋರಾಟ ಅನಿವಾರ್ಯ ಎಂದು ತಿಳಿಸಿದ್ದಾರೆ, ಈ ಮೊದಲು ಜೇವರ್ಗಿ ರಸ್ತೆಯಲ್ಲಿ ರಾಷ್ಟ್ರಪತಿ ವೃತ್ತಿದಲ್ಲಿ ಸ್ಪಾಪಿಸಬೇಕಾದ ಸ್ವಾಮಿ ವಿವೇಕಾನಂದ ರವರ ಪತ್ರಿಮೆಯನ್ನು ಇನ್ನೂ ಸ್ಥಾಪಿಸದೆ ಇರುವುದು ಕಳವಳಕಾರಿಯ ವಿಷಯ ಕಾನೂನಿನ ಕಾರಣವನ್ನು ಹೇಳಿ ಪ್ರತಿಮೆ ಸ್ಥಾಪನೆವು ಅಧಿಕಾರಿಗಳು ಮುಂದುಡುತ್ತಾ ಬರುತ್ತಿದ್ದಾರೆ.
ಕರವೇ ನಿಯೋಗದ ಮನವಿ ಸ್ಪಂದಿಸಿದ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅವಿನಾಶ ಕುಲಕರ್ಣಿ ರವರು, ಜ-12 ರಿಂದ ರಾಷ್ಟ್ರೀಯ ಯುವ ಸಪ್ತಾಹ ಪ್ರಯಕ್ತ ಜ-18 ಒಳಗಾಗಿ ಸ್ವಾಮಿ ವಿವೇಕಾನಂದ ರವರ ಪ್ರತಿಮೆ ಸ್ಥಾಪನೆಗೆ ಅಧಿಕಾರಿಗಳ ಮತ್ತು ಜನಪತ್ರಿನಿದಿಗಳ ಸಭೆ ನಡೆಸಲಾಗಿದೆ ಪತ್ರಿಮೆ ಸ್ಥಾಪನೆಗೆ ಕುರಿತಾದ ಮನವಿಗೆ ಅವರ ಸ್ಪಂದಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಸುರೇಶ ಬಡಿಗೇರ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಚರಣರಾಜ ರಾಠೋಡ,ಮುಖಂಡರಾದ ಅರವಿಂದ ನಾಟೀಕಾರ,ಗಣೇಶ ಕೋಡಕಲ್ ಇನ್ನಿತರು ಉಪಸ್ಥಿತರದ್ದರು.