ಕಲಬುರಗಿ; ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 851ನೇ ಜಯಂತಿ ಉತ್ಸವದ ಬ್ಯಾನರನ್ನು 2022 ಎಂದು ಹಾಕಲಾಗಿದ್ದು ಮತ್ತು ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಆಗಲಿ ಮತ್ತು ಸಹಾಯಕ ಆಯುಕ್ತರು ಆಗಿರಬಹುದು ಇನ್ನಿತರ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಯಾರು ಬಂರದಿರುವುದನ್ನು ಖಂಡಿಸಿ, ಕಾರ್ಯಕ್ರಮದ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಇವರು ಆಮಂತ್ರಣ ಪತ್ರಿಕೆ ನೀಡಿರುವ ವಿರೋಧಿಸಿ ಉದ್ದೇಶ ಪೂರಕವಾಗಿ ನಮ್ಮ ಭೋವಿ ಸಮಾಜವನ್ನು ಕಡೆಗಣಿಸಲಾಗಿದೆ ಆದಕಾರಣ ಕೂಡಲೇ ಇವರನ್ನು ಅಮಾನತ್ತು ಮಾಡಬೇಕೆಂದು ಸಮಾಜದ ಮುಖಂಡರು ಎಸ್.ಎಂ.ಪಂಡಿತ ರಂಗ ಮಂದಿರ ಆವರನದಲ್ಲಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಜಿ ಶಿವಶಂಕರ, ಕೃಷ್ಣ ಕುಶಾಳಕರ, ನಾಗೇಶ ಗೊಬ್ಬರ, ರಾಜು ಗುತ್ತಿಗೆದಾರ, ಶುರೇಶ ಕುಶಾಳಕರ, ಅರ್ಜುನ ಬೇಲೂರ ಸೇರಿದಂತೆ ಸಮಾಜದ ಮುಖಂಡರು ಇದ್ದರು.