ಕಲಬುರಗಿ: ಕೂಡಲಸಂಗಮದೇವಾ ಎಂದು ಬಸವಣ್ಣನವರು ಆಗಲೇ ಕಾನೂನಿನ ಬಗ್ಗೆ ಜನಜಾಗೃತಿ ಮೂಡಿಸಿದ್ದಾರೆ ಎಂದು ನ್ಯಾಯವಾದಿ ಗಣಪತರಾವ ಅಂಕಲಗಿ ಹೇಳಿದರು.
ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 141ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ “ಜನಸಾಮಾನ್ಯರಿಗಾಗಿ ಕಾನೂನು ಅರಿವು” ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಹಾಗೂ ಭ್ರೂಣ ಹತ್ಯೆ, ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಶರಣರು ಅರಿವು ಮೂಡಿಸುವ ಮೂಲ ಕ ಜನಜಾಗೃತಿ ಮಾಡಿದ್ದಾರೆ.
ಶರಣರು ತಮ್ಮ ವಚನದಲ್ಲಿ ಎಲ್ಲಾ ಕಾನೂನುಗಳು ಅಳವಡಿಸಿ ಉತ್ತಮ ಸಮಾಜ ನಿರ್ಮಿಸಲು ಪ್ರಯತ್ನಿಸಿದ್ದಾರೆ. ಅಂತಹ ವಚನಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮೃದ್ಧ, ಶಾಂತಿಯ ಸಮಾಜ ನಿರ್ಮಿಸೋಣ ಎಂದು ಮಾರ್ಮಿಕವಾಗಿ ನುಡಿದರು. ಇದೆ ಸಂದರ್ಭದಲ್ಲಿ ಜನಪದ ಕಲಾವಿದ ರಾಜು ಹೆಬ್ಬಾಳ ಜನಪದ ಗೀತೆಗಳಾದ ಸೋಬಾನ ಪದ, ಬೀಸುವ, ಕುಟ್ಟುವ, ಹಂತಿ ಪದವನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು. ಪ್ರಾಸ್ತಾವಿಕವಾಗಿ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ
ಕಬ್ಬಿಣ ಎಷ್ಟೇ ಬಿರುಸು ಹಾಗೂ ಗಟ್ಟಿಯಾಗಿದ್ದರೂ ತನ್ನ ತುಕ್ಕಿನಿಂದಲೇ ದುರ್ಬಲವಾಗುತ್ತದೆ. ನಾವು ಎಷ್ಟೇ ಸಧೃಡರಾಗಿದ್ದರೂ ನಮ್ಮ ದೌರ್ಬಲ್ಯಗಳಿಂದ ದುರ್ಬಲರಾಗುತ್ತೇವೆ. ನಮ್ಮ ಬಲಹೀನತೆಗಳನ್ನು ಗೆಲ್ಲಬೇಕು, ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳಿದರು.
ಗುರುರಾಜ ಹಸರಗುಂಡಿಗಿ, ಮಲ್ಲಿಕಾರ್ಜುನ ಹುಮನಾಬಾದ, ವೀರಯ್ಯಸ್ವಾಮಿ, ಮಾಣಿಕ ಗುತ್ತೇದಾರ, ತೇಜಸ್ವಿನಿ ಘನಾತೆ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.