ಕಮಲಾಪೂರ: ತಾಲೂಕಿಗೆ ಪ್ರತ್ಯೇಕ ಬಸ್ ಡಿಪೋ ಹಾಗೂ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವ್ಯವಸ್ಥಾಪಕರಿಗೆ ರೈತ ಕಾರ್ಮಿಕ ಮುಖಂಡರಾದ ಸುನೀಲ ಮಾರುತಿ ಮಾನ್ಪಡೆ ನೇತೃತ್ವದ ನಿಯೋಗದ ಮನವಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಸರ್ಕಾರ ಹಲವಾರು ಜನಪ್ರೀಯ ಯೋಜನೆಗಳು ಜಾರಿಗೆ ತಂದು ಗ್ರಾಮೀಣ ಪ್ರದೇಶ ಮಕ್ಕಳು ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹ ನೀಡುತ್ತದೆ. ಆದರೆ ಸ್ಥಳಿಯ ಅಧಿಕಾರಿಗಳು ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳು ನೀಡದೆ ಅನ್ಯಾಯವೆಸಗುತ್ತಿದ್ದಾರೆ.
ಕಮಲಾಪೂರ ತಾಲೂಕ ರಚನೆಯಾಗಿ ಹಲವು ವರ್ಷಗಳು ಕಳೆದರು ತಾಲೂಕಿನ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಕೂಡಾ ಸಿಗದೇ ಇರುವುದು ದುರದುಷ್ಟಕರ ತಾಲೂಕಿನ 4 ಪಂಚಾಯತ ವ್ಯಾಪ್ತಿಯಲ್ಲಿ 30 ಹಳ್ಳಿಗಳು 20 ಕ್ಕೂ ಹೆಚ್ಚು ತಾಂಡಾಗಳು ಇದ್ದು ಅವುಗಳಿಗೆ ಯಾವುದೇ ರೀತಿಯ ಒಂದು ಬಸ್ಸಿನ ಸೌಕರ್ಯ ನಿಡದೇ ಇರುವುದು ಖಂಡನೀಯವಾಗಿದೆ. ಬಿ.ಕೆ ಸಲಗರ ಹೋಬಳಿ ವ್ಯಾಪ್ತಿಯಲ್ಲಿ 3 ಪಂಚಾಯತಿಗಳಾದ ಮುದ್ದದ ಲೇಂಗಟಿ, ಲಾಡಮುಗಳಿ, ಅಂಬಲ, ಮಡಕಿ ತಾಂಡಾ, ಅಂಬಲಗ ತಾಂಡಾ, ಜೀವಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 4 ಹಳ್ಳಿಗಳು 2 ತಾಂಡಾಗಳು ಕಲಮೂಢ ಪಂಚಾಯತಿ ವ್ಯಾಪ್ತಿಯಲ್ಲಿ 6 ಹಳ್ಳಿಗಳು 9 ತಾಂಡಾಗಳು ಇದ್ದು ಕೋವಿಚ್-19 ಕ್ಕಿಂತ ಹಿಂದೆ ಈ ಹಳ್ಳಿಗಳಿಗೆ ಬಸ್ಸಿನ ಸೌಕರ್ಯಗಳು ಇದ್ದಿರುತ್ತವೆ. ನಂತರ ದಿನಗಳಲ್ಲಿ ಯಾವುದೇ ಹಳ್ಳಿಗಳಿಗೆ ಒಂದೆ ಒಂದು ಬಸ್ಸು ಮುಂದುವರಿಸಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆಯಿಂದ ಗ್ರಾಮೀಣ ಜನರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಬಡ ಮಕ್ಕಳಿಗೆ ಬಸ್ಸಿನ ಸೌಕರ್ಯ ನೀಡದೆ ಇರುವುದರಿಂದ ಪ್ರತಿನಿತ್ಯ ಶಾಲಾ-ಕಾಲೇಜು ತಪ್ಪಿಸುವಂತಾಗಿದೆ. ಅದರ ಜೊತೆಗೆ ರೈತ ಕಾರ್ಮಿಕರಿಗೂ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಬೆಳ್ಳಗೆ ಹೋದ ಬಸ್ಸುಗಳು ಸಾಯಂಕಾಲ 7:00 ಗಂಟೆಗೆ ಮಾತ್ರ ಹಳ್ಳಿಗಳಿಗೆ ಬರುತ್ತವೆ. ಇದರಿಂದಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಬಸ್ ಪಾಸ ಇದ್ದರು ಸಹ ಖಾಸಗಿ ವಾಹನಗಳಿಗೆ ಹಣ ನೀಡಿ ಶಾಲಾ-ಕಾಲೇಜುಗಳಿಗೆ ಹೋಗುವಂತಾಗಿದೆ ಎಂದರು.
ಅದರ ಜೊತೆಗೆ ಸಾರ್ವಜನಿಕರು ಮಹಿಳೆಯರು ಸಹ ಸರ್ಕಾರಿ ಬಸ್ಸುಗಳು ಸರಿಯಾದ ಸಮಯಕ್ಕೆ ಇಲ್ಲದೇ ಇರುವ ಕಾರಣಕ್ಕಾಗಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಡಕಿ ತಾಂಡಾ ಹತ್ತಿರ, ಖಾಸಗಿ ಟೆಂಪೂ ಅಪಘಾತ ಆಗಿರುವುದರಿಂದ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು 12 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡು ಖಾಸಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿನಿತ್ಯ ಖಾಸಗಿ ವಾಹನಗಳ ಮೇಲೆ ಕುಳಿತು ಜೀವ ಕೈಯಲ್ಲಿ ಹಿಡಿದು ಅಲೆಯುವಂತಾಗಿದೆ. ಈ ಸಂಬಂಧ ಹಲವು ಭಾರಿ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರು ಉಡಾಫೆಯ ಉತ್ತರಗಳನ್ನು ನೀಡಿ ಜನರಿಗೆ ಜನ ಸ್ನೇಹಿಯಾಗಬೇಕಾದ ಇಲಾಖೆ ಇವತ್ತು ಜನರ ಜೀವಕ್ಕೆ ತೊಂದರೆಕೊಡುತಿದೆ. ಆದ್ದರಿಂದ ಮಾನ್ಯರು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕಮಲಾಪೂರ ತಾಲೂಕಿಗೆ ಬಸ್ಸು ಡಿಜೋ ಮತ್ತು ಸಮರ್ಪಕವಾದ ಬಸ್ಸಿನ ಸೌಕರ್ಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಬೇಡಿಕೆಗಳಿಗೆ ಸ್ಪಂದಿಸದೆ ಇದ್ದರೆ ಪ್ರಜಾ ಪ್ರಭುತ್ವ ಹಕ್ಕುಗಳ ಅಡಿ ತಮ್ಮ ಕಛೇರಿ ಮುಂದೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಿರಣ ಬಣಗಾರ್ ಅಧ್ಯಕ್ಷರು. ಮಾರುತಿ ಮಾನವಡರವರ ಸೇವಾ ಸಂಘ ಅಂಬಲಗಾ, ಸೋಮಶೇಖರ ಶಿಂಗೆ ತಾಲೂಕ ಕಾರ್ಯದರ್ಶಿಗಳು ಪ್ರಾಂತ ರೈತ ಸಂಘ ನಾರಯಣ ರಂಗದಾಳ. ಅನಿಲ ಮಂಗಾ. ಸಂಗಮೇಶ ಮುಗಳಿ ಇತರರು ಹಾಜರಿದ್ದರು.