ಲಕ್ಷ್ಮೀಪುರ ಶ್ರೀಗಿರಿ ಮಠಕ್ಕೆ ಕಾಶಿ ಪೀಠದ ಕಿರಿಯ ಜಗದ್ಗುರು ಆಗಮನ

0
14

ಸುರಪುರ: ತಾಲೂಕಿನ ಲಕ್ಷ್ಮೀಪುರ ಬಿಜಾಸಪುರ ಮಾರ್ಗ ಮಧ್ಯದ ಶ್ರೀಗಿರಿ ಮಠಕ್ಕೆ ಕಾಶಿ ಪೀಠದ ಕಿರಿಯ ಜಗದ್ಗುರು ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಆಗಮಿಸಿದರು.ಶ್ರೀಮಠಕ್ಕೆ ಆಗಮನಕ್ಕೂ ಮುನ್ನ ಜಗದ್ಗುರುಗಳನ್ನು ಸ್ವಾಗತ ಕಮಾನಿನಿಂದ ಶ್ರೀಮಠದ ವರೆಗೆ ಕುದುರೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು.

ನಂತರ ಸಂಜೆ ನಡೆದ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿದರು.ಧರ್ಮ ಕಾರ್ಯ ಮತ್ತು ಭಕ್ತಿ ಸೇವೆ ಎನ್ನುವುದು ಈ ದೇಶದ ಪರಂಪರೆಯಾಗಿದೆ.ಅಂತಹ ಧಾರ್ಮಿಕ ಕಾರ್ಯವನ್ನು ಮರಡಿ ಮಲ್ಲಿಕಾರ್ಜುನ ದೇವರ ಸನ್ನಿಧಾನದಲ್ಲಿ ಶ್ರೀಗಿರಿ ಮಠವು ಮಾಡುತ್ತಿರುವುದು,ಇಂತಹ ಕಾರ್ಯಕ್ಕೆ ತಾವೆಲ್ಲ ಭಕ್ತರು ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ಪ್ರತಿಯೊಬ್ಬ ಮನುಷ್ಯನಿಗೆ ಹಣ ಗಳಿಕೆಯಿಂದ ಕ್ಷಣಿಕ ನೆಮ್ಮದಿ ದೊರೆಯಬಹುದು ಆದರೆ ಮಾನಸಿಕ ನೆಮ್ಮದಿ ಎನ್ನುವುದು ಸಿಗಬೇಕಾದರೆ ಇಂತಹ ಕಾಶಿ ಪೀಠದ ಜಗದ್ಗುರುಗಳು ಇಂದು ಆಗಮಿಸಿ ಆಶಿರ್ವಧಿಸುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ.ಶ್ರೀಗಳು ಬೇರೆ ಯಾರೂ ಅಲ್ಲ ನಮ್ಮದೇ ತಾಲೂಕಿನ ತಳವಾರಗೇರಾದ ಪೂಜ್ಯರು ಇಂದು ಕಾಶಿ ಪೀಠದ ಜಗದ್ಗುರುಗಳಾಗಿರುವುದರಿಂದ ಇಡೀ ನಮ್ಮ ತಾಲೂಕಿಗೆ ಪುಣ್ಯ ಲಭಿಸಿದೆ ಎಂದರು.

ಯುವ ಹೋರಾಟಗಾರ ಶಿವರಾಜ ಕಲಕೇರಿ ಮಾತನಾಡಿ,ಶ್ರೀಗಿರಿ ಮಠದ ಪೂಜ್ಯರಾದ ಡಾ:ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ಕಾರ್ಯ ಅಮೋಘವಾಗಿದೆ.ಶ್ರೀಮಠದಲ್ಲಿ ಗೋಶಾಲೆ,5008 ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನೇಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಎಲ್ಲ ಗಣ್ಯರು ಮರಡಿ ಬೆಟ್ಟದ ಕಲ್ಪವೃಕ್ಷ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.ಕಾರ್ಯಕ್ರಮದಲ್ಲಿ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ,ಮುಖಂಡರಾದ ರಾಜಾ ಸಂತೋಷ ಕುಮಾರ ನಾಯಕ,ಬಾಬುಗೌಡ ಪಾಟೀಲ್ ಅಗತೀರ್ಥ,ಸೂಗುರೇಶ ವಾರದ್,ಶರಣುನಾಯಕ ಬೈರಿಮಡ್ಡಿ,ಭಂಡಾರೆಪ್ಪ ನಾಟೆಕಾರ್,ಚನ್ನಪ್ಪ ಆನೆಗುಂದಿ, ಮೌನೇಶ ಹಳಿಸಗರ,ವಿರೇಶ ಪಂಚಾಂಗಮಠ,ಶರಣಪ್ಪ ಕಲಕೇರಿ,ವಾಸುದೇವ ನಾಯಕ,ಆಕಾಶ ಕಟ್ಟಿಮನಿ ಸೇರಿದಂತೆ ಅನೇಕ ಪೂಜ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here