ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಚಿತ್ರಕಲೆ ಸ್ಪರ್ಧೆ

0
19

ಕಲಬುರಗಿ: ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ “ಪರೀಕ್ಷಾ ಪೇ ಚರ್ಚಾ” ಕಾರ್ಯಕ್ರಮವನ್ನು ರಾಜ್ಯ ಸಹ ಸಂಚಾಲಕರಾದ ಡಾ. ಸುಧಾ ಆರ್. ಹಾಲಕಾಯಿ ಅವರ ನೇತೃತ್ವದಲ್ಲಿ ನಗರದ ಶರಣಬಸೇಶ್ವರ ರೆಸಿಡೆನ್ಸಿಯಲ್ ಸ್ಕೂಲ್‍ನಲ್ಲಿ ಎಕ್ಸಾಮ್ ವಾರಿಯರಸ್ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತು.

ಈ ಸ್ಪರ್ಧೆಯಲ್ಲಿ ವಟ್ಟು ನಾಲ್ಕು ಶಾಲಾ ಕಾಲೇಜುಗಳ ಸುಮಾರು 500ಕು ಹೆಚ್ಚು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದರು. ಶರಣಬಸವೇಶ್ವರ ರೆಸಿಡೆನ್ಸಿಯಲ್ ಸ್ಕೂಲ್, ಮುಕ್ತಂಬಿಕಾ ಕಾಲೇಜ್, ಅಪ್ಪಾ ಪಬ್ಲಿಕ್ ಸ್ಕೂಲ್ ಹಾಗೂ ದೊಡಪ್ಪ ಅಪ್ಪ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲಗೊಂಡರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಅಯೋಧ್ಯ್ ಶ್ರೀ ರಾಮ್ ಮೂರ್ತಿಯ ಸಲಹಾ ಸಮಿತಿಯ ಸದಸ್ಯರಾದ ಮಾನಯ್ಯ ಬಡಿಗೇರ, ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಶಂಕರಗೌಡ, ಶ್ರೀಶೈಲ ಹೋಗದೆ, ಡಾ.ಎಂ. ಆರ್. ಹುಗ್ಗಿ ಅವರು ಸ್ಪರ್ಧೆಯ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.

ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಈ ಪರಿಕಲ್ಪನೆಯ ಆಧಾರದ ಮೇಲೆ ಮಕ್ಕಳ ಪರೀಕ್ಷಾ ಯೋಧರಿಗಾಗಿ ಪುಸ್ತಕ ಬರೆದಿದ್ದಾರೆ. ಡ್ರಾಯಿಂಗ್ ಸ್ಪರ್ಧೆಯ ವಿಷಯವನ್ನು ಏರ್ಪಡಿಸಲಾಗಿದೆ. ಈ ಪುಸ್ತಕಗಳಲ್ಲಿ ಮಕ್ಕಳಿಗೆ 28 ಮಂತ್ರಗಳು ಮತ್ತು ಪೆÇೀಷಕರಿಗೆ 6 ಮಂತ್ರಗಳು ಇರುತ್ತವೆ, ಇದು ಪರೀಕ್ಷೆಯ ಭಯವನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಮತ್ತು ವೋರ್ರಿಯರ್ಸ್ ಬದಲಿಗೆ ಅವರು ಪರೀಕ್ಷೆಯ ಯೋಧರು. ಜನವರಿ 27 ರಂದು ಗೌರವಾನ್ವಿತ ಪ್ರಧಾನಿ ಈ ವಿಷಯದಲ್ಲಿ ವಿದ್ಯಾರ್ಥಿಗಳು ಮತ್ತು ಪೆÇೀಷಕರನ್ನು ಬೆಳಿಗ್ಗೆ 11:00 ಗಂಟೆಗೆ ಸಂಬೋಧಿಸಲಿದ್ದಾರೆ. 9 ರಿಂದ 12ರ ತರಗತಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಆಕಾಂಕ್ಷಿಗಳು ಆಗಿದ್ದಾರೆ. ಈ ಸಂದರ್ಭದಲ್ಲಿ ಆಲೂರಿ ವೇಂಕಠ, ಹರ್ಷ ದೇಶಪಾಂಡೆ, ಅನೀಲ ಸಿನೂರಕರ್ ಹಾಗೂ ಕಲಬುರಗಿ ಜಿಲ್ಲೆಯ ಪರೀಕ್ಷಾ ಪೇ ಚರ್ಚಾನ ಸಂಚಾಲಕರು, ಸಹ ಸಂಚಾಲಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here