ವೇಮನ ಅವರು ಸಾಮಾಜಿಕ, ಧಾರ್ಮಿಕ ವಿಚಾರಗಳನ್ನು ಸಮಾಜಕ್ಕೆ ನೀಡಿದ್ದಾರೆ

0
14

ಕಲಬುರಗಿ: ಸಾಮಾಜಿಕ ಆರ್ಥಿಕ ಧಾರ್ಮಿಕ ವಿಚಾರಗಳನ್ನು ಸಮಾಜಕ್ಕೆ ಮಹಾಯೋಗಿ ವೇಮನ ನೀಡಿದ್ದಾರೆ ಎಂದು ಕನ್ನಡ ಅಧ್ಯಯನ ಪೀಠ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರೋ.ಬಿ.ಬಿ. ಪೂಜಾರ ಹೇಳಿದರು.

ಅವರು ಗುರುವಾರದಂದು ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್, ಮಹಾಯೋಗಿ ವೇಮನ ಜಯಂತ್ಯೋತ್ಸವ ಸಮಿತಿ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

Contact Your\'s Advertisement; 9902492681

ವೇಮನ ತೆಲುಗು ಭಾಷೆಯ ಸಂತ ಕವಿಯಾಗಿದ್ದರು ಇವರು 2500 ಪದಗಳನ್ನು ನಾಲ್ಕು ನಾಲ್ಕು ಸಾಲುಗಳಲ್ಲಿ ಬರೆದರು ಎಂದರು.

ಯೌವ್ವನ ಆರಂಭದ ದಿನಗಳಲ್ಲಿ ಸ್ವೇಚ್ಪಾಜೀವನ ನಡೆಸುತ್ತಿದ್ದ ವೇಮನರ ಜ್ಞಾನೋದಯ ಪಡೆದು ದಾರ್ಶನಿಕ ಕವಿಯೂ ಅನುಭಾವಿಯೂ ಆಗಿ ರೂಪುಗೊಂಡಿದ್ದು, ಐತಿಹಾಸಿಕ ಸತ್ಯ ಯೋಗಿ ವೇಮನರು ವಚನಗಳ ಮೂಲಕ ಸತ್ಯವನ್ನು ಪ್ರತಿಪಾದಿಸಿದ್ದರು. ದೇವರು ಎಲ್ಲರಲ್ಲೂ ಇದ್ದಾನೆ ಹಿಂಸೆ ಮಾಡಬಾರದು ಸರಳ ಜೀವನ ಉನ್ನತ ವಿಚಾರ ಅವರ ಆದರ್ಶವಾಗಿತ್ತು ಎಂದು ಹೇಳಿದರು.

ರೆಡ್ಡಿ ಸಮಾಜ ಜಿಲ್ಲಾ ಅಧ್ಯಕ್ಷರಾದ ಚೆÀನ್ನಾರೆಡ್ಡಿ ಪಾಟೀಲ ಅವರು ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಅವರು ಮಹಾಯೋಗಿ ವೇಮನರನ್ನು ಒಳ್ಳೆಯ ರೀತಿಯಲ್ಲಿ ಸಾಕಿ ಸಲುಹಿ ಬೆಳೆಸಿದರು. ಇವರು ಕಷ್ಟ ಮಾರ್ಗದಿಂದ ಜೀವನ ಸಾಗಿಸಿ ದ್ವೇಷ ಅಸೂಯ ಮರೆತು ಒಳ್ಳಯೆ ಮಾರ್ಗದಲ್ಲಿ ನಡೆಯುತ್ತಿದ್ದರು ಅವರು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೇಮನರ ಭಾವ ಚಿತ್ರಕ್ಕೆ ಗಣ್ಯರು ಪುಪ್ಷಾರ್ಚನೆ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ರೆಡ್ಡಿ ಸಮಾಜದ 5 ಜನ ಗಣ್ಯರಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರು, ಜಿಲ್ಲಾಧಿಕಾರಿಗಳ ಕಚೇರಿ ಶಿಷ್ಠಾಚಾರದ ತಹಶೀಲ್ದಾರ ನಿಸಾರ ಅಹ್ಮದ್, ರೆಡ್ಡಿ ಸಮಾಜದ ಕಾರ್ಯದರ್ಶಿ ಸಿದ್ರರಾಮ ರೆಡ್ಡಿ ವಿಶಾಲಾಕ್ಷಿ, ಸೂರ್ಯಕಾಂತ ರೆಡ್ಡಿ,ಸುನಿಲ್ ರೆಡ್ಡಿ, ಶ್ರೀಧರ ರೆಡ್ಡಿ, ಸಂತೋಷಕುಮಾರ ರೆಡ್ಡಿ ಹಳ್ಳದಮನಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here