ಸುರಪುರ: ಇದುವರೆಗೆ ಬೇಸಿಗೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿಲ್ಲದ ಕಾರಣದಿಂದ ಸುರಪುರ ನಗರದ ಜನತೆಗೆ ಕುಡಿಯುವ ನೀರಿಗೆ ತೊಂದರೆಯುಂಟಾಗಿ ನೀರನ ಅಭಾವ ಹೆದರಿಸಿದ್ದರು.ಈಗ ಕೃಷ್ಣಾ ನದಿಗೆ 2.5 ಲಕ್ಷ ಕ್ಯೂಸೆಕ್ ನೀರು ಹರಿ ಬಿಟ್ಟಿರುವುದರಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಶೆಳ್ಳಿಗಿ ಬಳಿಯಲ್ಲಿ ನಿರ್ಮಿಸಲಾದ ಜಾಕ್‌ವೆಲ್ ಬಳಿಯ ಪಂಪ್ ಹೌಸಿಗೆ ನೀರು ಸುತ್ತುವರೆದಿದ್ದು, ಇದರಿಂದ ನೀರು ಸರಬರಾಜು ಮಾಡುವುದು ಸಾಧ್ಯವಾಗದೆ ಮಳೆಗಾಲದಲ್ಲೂ ಜನರು ಕುಡಿಯುವ ನೀರಿನ ಬರ ಹೆದರಿಸಬೇಕಾಗಿದೆ.
ಈ ಕುರಿತು ಮಾಹಿತಿ ನೀಡಿರುವ ನಗರಸಭೆ ಆಯುಕ್ತ ಬಸವರಾಜ ಶಿವಪೂಜೆ ಮಾಹಿತಿ ನೀಡಿ,ಶೆಳ್ಳಿಗೆ ಪಂಪ್ ಹೌಸ್ ಬಳಿ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದಾಗಿ ನೀರು ಸರಬರಾಜು ಕಷ್ಟದಾಯಕವಾಗಿದೆ.ಆದ್ದರಿಂದ ನೀರಿನ ಮಟ್ಟ ಕಡಿಮೆಯಾಗುವವರೆಗೂ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಕಷ್ಟಕರವಾಗಿದ್ದು,ಜನರು ಸಹಕರಿಸುವಂತೆ ಮನವಿ ಮಾಡಿದ್ದಾರೆ.