ಸುರಪುರ: ಭಾರತ ದೇಶಕ್ಕೆ ಅದರದ್ದೆ ಆದ ಇತಿಹಾಸ ಮತ್ತು ಸಂಸ್ಕೃತಿ ಇದೆ.ಇಂತಹ ದೇಶದಲ್ಲಿ ಈಗಲೂ ಬುಡಕಟ್ಟು ಜನರು ಸೌಲಭ್ಯ ವಂಚಿತರಾಗಿರುವುದು ಬೇಸರದ ಸಂಗತಿಯಾಗಿದೆ.ಆದ್ದರಿಂದ ಬುಡಕಟ್ಟು ಜನರಿಗೆ ಸಹಕಾರ ನೀಡುವುದು ಎಲ್ಲರ ಜವಬ್ದಾರಿಯಾಗಲಿ ಎಂದು ಕೆಂಭಾವಿ ಹಿರೇಮಠದ ಚೆನ್ನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ತಾಲ್ಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಶ್ರೀಗುರು ಸೇವಾ ಸಂಸ್ತೆಯಿಂದ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಬುಡಕಟ್ಟು ದಿನಕ್ಕೆ ತನ್ನದೆ ಆದ ಇತಿಹಾಸವಿದೆ.ಇಂಗ್ಲೆಂಡಿನ ಚಿಂತಕ ವೆರಿಯರ್ ಎಲ್ವಿನ್ ಎಂಬುವವರು ಭಾರತದಲ್ಲಿ ವಾಸಿಸುವಾಗ,ಇಲ್ಲಿನ ಬುಡಕಟ್ಟು ಸಮುದಾಯಗಳ ಬಗ್ಗೆ ಅಭ್ಯಾಸ ನಡೆಸಿ, ಅವರ ಅಭೀವೃಧ್ಧಿಗೆ ಮೊದಲು ಆದ್ಯತೆ ನೀಡಿದವರು.ಇವರ ನೆನಹಿನಲ್ಲಿ ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ೧೯೦೪ರ ಆಗಸ್ಟ್ ೦೯ ರಂದು ವಿಶ್ವ ಬುಡಕಟ್ಟು ದಿನವನ್ನು ಆಚರಿಸಲಾಯಿತು. ಅಂದಿನಿಂದ ನಿರಂತರವಾಗಿ ಆದಿವಾಸಿಗಳು ಮತ್ತು ಅಡವಿಗಳಲ್ಲಿ ವಾಸಿಸುವ ಅಲೆಮಾರಿ ಬುಡಕಟ್ಟು ಜನರ ಅಭೀವೃಧ್ಧಿಗಾಗಿ ಯೋಜನೆಗಳನ್ನು ರೂಪಿಸುತ್ತಾ ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ ಮಾತನಾಡಿ,ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳಾದರೂ ಇಂದಿಗೂ ನಮ್ಮ ರಾಜ್ಯ ಸೇರಿದಂತೆ ಅನೇಕ ಕಡೆಗಳಲ್ಲಿ ಆದಿವಾಸಿಗಳು ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ.ಅವರ ಅಭೀವೃಧ್ಧಿಗೆ ಸರಕಾರಗಳು ಗಂಭೀರವಾಗಿ ಚಿಂತನೆ ನಡೆಸಿ ಅವರ ಸಮಸ್ಯೆಗಳ ಪರಿಹರಿಸಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯತಿ ಸದಸ್ಯ ದೊಡ್ಡ ಕೊತಲೆಪ್ಪ ಹಾವಿನ್,ದಂಡಪ್ಪ,ಮಡಿವಾಳ,ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ ವೇದಿಕೆ ಮೇಲಿದ್ದರು.