ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮುಸ್ಲಿಂ ಯುನೈಟೆಡ್ ಫ್ರೆಂಟ್ ಸ್ಪರ್ಧೆ

0
138

ಕಲಬುರಗಿ: ಮುಂಬರುವ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮುಸ್ಲಿಂ ಯುನೈಟೆಡ್ ಫ್ರೆಂಟ್ ಸ್ಪರ್ಧಿಸಲಿದೆ ಎಂದು ಸಂಚಾಲಕ ಅಬ್ದುಲ್ ಅಲೀಮ್ ಅವರು ಇಲ್ಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಸಿಯಲ್ ಡೆಮಾಕ್ರೆಟಿಕ್ ಆಫ್ ಇಂಡಿಯಾ, ಎಐಎಂಐಎಮ್, ಮುಸ್ಲಿಂ ಲೀಗ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ, ಗುಲಬರ್ಗಾ ಡೆವಲಪ್‌ಮೆಂಟ್ ಪಾರ್ಟಿ ಮುಂತಾದವು ಸೇರಿ ಫ್ರೆಂಟ್ ರಚಿಸಲಾಗಿದೆ ಎಂದರು.

Contact Your\'s Advertisement; 9902492681

ಮಹಾನಗರ ಪಾಲಿಕೆಯಲ್ಲಿ ಇಲ್ಲಿಯವರೆಗೆ ಆಡಳಿತ ನಡೆಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜಾತ್ಯಾತೀತ ಜನತಾದಳ ಪಕ್ಷಗಳು ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಗರದಲ್ಲಿ ಮುಂಬರುವ ಮಹಾನಗರ ಪಾಲಿಕೆಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಐದು ರಾಜಕೀಯ ಪಕ್ಷಗಳು ಸೇರಿ ರಂಗವನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.

ಪ್ರಾಮಾಣಿಕ ಹಾಗೂ ಜನಪರ ಕೆಲಸಗಳನ್ನು ಮಾಡುವ ನಾಯಕರನ್ನು ಮುನ್ನಡೆಗೆ ತರುವುದು ಹಾಗೂ ಸ್ಥಳೀಯವಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಸ್ತಿತ್ವ ಉಳಿಸುವುದು. ಈ ಹಿಂದೆ ಚುನಾಯಿಸಲ್ಪಟ್ಟ ರಾಷ್ಟ್ರೀಯ ಪಕ್ಷಗಳ ನಾಯಕರು ನಗರದ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆಗಳು, ಚರಂಡಿ, ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನೂ ಸಹ ಒದಗಿಸಿಲ್ಲ. ಆದ್ದರಿಂದ ರಂಗವು ನಗರವನ್ನು ದೇಶ ಹಾಗೂ ರಾಜ್ಯದಲ್ಲಿ ಮಾದರಿಯಾಗಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.

ಫ್ರೆಂಟ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಎಲ್ಲ 55 ವಾರ್ಡ್‌ಗಳಿಗೂ ಸ್ಪರ್ಧಿಸಲಿದೆ. ಎಲ್ಲ ದಲಿತ, ದಮನಿತರ ಹಾಗೂ ಹಿಂದುಳಿದವರೊಂದಿಗೆ ಅವರ ಪಕ್ಷಗಳೊಂದಿಗೆ ಸೇರಿ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕರಾದ ಮುಬಿನ್ ರಿಯಾಜ್, ಮೌಲಾನಾ ನೂಹ್, ಎಸ್‌ಡಿಪಿಐನ ಅಬ್ದುಲ್ ರಹೀಮ್ ಪಟೇಲ್, ಡಬ್ಲುಪಿಐನ ಅಬ್ದುಲ್ ಬಾರಿ, ಜಿಡಿಪಿಯ ನದೀಮ್ ಬಾಬಾ ಹುಸೇನಿ, ಎಐಎಂಐಎಂನ ಅಬ್ದುಲ್ ರಹೀಮ್ ಮಿರ್ಚಿ, ಹೈದರ್ ಅಲಿ, ಸೈಯದ್ ಪಾಶಾ ಖಾದ್ರಿ, ಮುಬೀನ್ ಅಹ್ಮದ್, ಶಹಾವಾಜ್, ಖಾಜಾ ಸದ್ರುದ್ದೀನ್, ಯುನುಸ್ ಖಾನ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here