ಕಲಬುರಗಿ: 73ನೇ ಸ್ವಾತಂತ್ರ್ಶ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು 8 ಗಂಟೆಗೆ ವಿಶ್ವವಿದ್ಶಾಲಯದ ಆವರಣದಲ್ಲಿ 109 ಅಡಿ ಉದ್ದವಿರುವ ಧ್ವಜಯಾತ್ರೆ ಕಾರ್ಯಕ್ರಮ ನಡೆಯಲಿದೆ ಎಂದು ವಿವಿಯ ಸಂಶೋಧನಾ ವಿದ್ಶಾರ್ಥಿಗಳ ಒಕ್ಕೂಟದ ಅಧ್ಶಕ್ಷ ಮಿಲಿಂದಕುಮಾರ್ ಸುಳ್ಳದ ಹೇಳಿದರು.
ವಿದ್ಶಾರ್ಥಿಗಳಲ್ಲಿ ರಾಷ್ರ್ಟಭಕ್ತಿˌ ದೇಶಪ್ರೇಮದ ಕುರಿತು ಜಾಗ್ರತಿ ಮೂಡಿಸಲು ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶ್ವವಿದ್ಶಾಲಯದ ಪ್ರಾಥಮಿಕ ಶಾಲೆಯಿಂದ ಆಡಳಿತ ಕಛೇರಿಯವರೆಗೆ ಧ್ವಜದ ಮೆರವಣಿಗೆ ನಡೆಯಲಿದೆ. ಅದ್ದೂರಿ ಕಾರ್ಯಕ್ರಮಕ್ಕೆ ಡೊಳ್ಳುˌ ಡ್ರೋಣ ಕ್ಶಾಮೆರಾˌ ತ್ರಿವರ್ಣ ಧ್ವಜದ ಟೋಪಿಗಳು ˌ ರಿಬ್ಬನ್ ಸೇರಿದಂತೆ ದೇಶ ಪ್ರೇಮದ ಹಾಡುಗಳು ಸಾಕ್ಷಿಯಾಗಲಿವೆ.
ಕಾರ್ಯಕ್ರಮಕ್ಕೆ ವಿಶ್ವವಿದ್ಶಾಲಯದ ಹಂಗಾಮಿ ಕುಲಪತಿ ಪ್ರೊ.ಎಸ್.ಪಿ.ಮೇಲ್ಕೇರಿ ಚಾಲನೆ ನೀಡುವರು. ಕುಲಸಚಿವ ಪ್ರೊ.ಸಿ. ಸೋಮಶೇಖರ್ˌ ಮೌಲ್ಶಮಾಪನ ಕುಲಸಚಿವ ಪ್ರೊ.ಡಿ.ಎಮ್.ಮದರಿ ಮುಖ್ಶ ಅತಿಥಿಗಳಾಗಿ ಭಾಗವಹಿಸುವರು. ವಿಶ್ವವಿದ್ಶಾಲಯದ ಬೋದಕ ಮತ್ತು ಬೋದಕೇತರ ಸಿಬ್ಬಂದಿಗಳುˌ ಸಂಶೋಧನಾರ್ಥಿಗಳುˌ ವಿದ್ಶಾರ್ಥಿಗಳು ಹೆಚ್ಚಿನ ಸಂಖ್ಶೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಉಪಾಧ್ಶಕ್ಷ ಮಲ್ಲಿಕಾರ್ಜುನ ಮ್ಶಾಗೇರಿˌ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ್ ದೊಡ್ಮನಿ ಕೋರಿದ್ದಾರೆ.