ಕಲಬುರಗಿ: ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲುನಾಡು ಪ್ರಕಾಶನ ಕಲಬುರಗಿ ವತಿಯಿಂದ ಹೋರಾಟಗಾರ ಲಿಂಗರಾಜ ಸಿರಗಾಪೂರ ಇವರ ಸಮಾಜಮುಖಿ ಕೆಲಸ, ಹೋರಾಟದಲ್ಲಿ ಗಣನೀಯ ಸೇವೆ ಸಲ್ಲಿಕೆಗೆ ಇಂದು ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಶ್ರೇಷ್ಟ ಸೇವಾ ಸನ್ಮಾನ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು.
ಬೆಲ್ದಾಣ ಶರಣರು, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ದೇವಯ್ಯ ಗುತ್ತೇದಾರ, ಸಂಸ್ಥೆಯ ಅಧ್ಯಕ್ಷ ಪ್ರಭುಲಿಂಗ ನಿಲೂರೆ,ಡಾ.ಹೆಚ್.ಟಿ.ಪೋತಿ, ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸತೀಶ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.