ಕೃತಕ ಬುದ್ಧಿಮತ್ತೆಯ ವಿಶ್ವಾತ್ಮಕತೆ

0
18

ಕಲಬುರಗಿ : ದಿನೆ ದಿನೆ ತಂತ್ರಜ್ಞಾನ ಬೆಳೆದಂತೆ ಕೃತಿಕ ಬುದ್ಧಿಮತ್ತೆಯಿಂದ ಎಲ್ಲ ಕ್ಷೇತ್ರಗಳು ಬೆಳೆಯುತ್ತಿದೆ ಎಂದು ಶ್ರೀ ಮಾಧವರಾವ ಪಾಟೀಲ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸಂಧ್ಯಾ ಸುಧಾಕರ ಡಾಂಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡ ಆರ್ಟಿಫೀಸಿಯಲ್ ಇಂಟಲಿಜೆನ್ಸ್ ಮತ್ತು ಗ್ಲೋಬಲ್ ರಿಸ್ಕ್ ಮತ್ತು ಕಂಪ್ಯೂಟರ್ ವಿಜನ್ ಮತ್ತು ಪರ್ಸೆಪ್ಷನ್ ಎಂಬ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಕೃತಕ ಬುದ್ಧಿಮತ್ತೆಯು ಗ್ರಹಿಕೆ, ಸಂಶ್ಲೇಷಣೆ ಮತ್ತು ಮಾಹಿತಿಯನ್ನು ಒದಗಿಸುವುದು, ಮಾನವರು ಪ್ರದರ್ಶಿಸುವ ಬುದ್ಧಿಮತ್ತೆಗೆ ವಿರುದ್ಧವಾಗಿ ಯಂತ್ರಗಳಿಂದ ಪ್ರದರ್ಶಿಸಲಾಗುತ್ತದೆ. ಇದನ್ನು ಪ್ರತಿಯೊಂದು ವಿಭಾಗಗಳಲ್ಲಿ ಬಳಸಲಾಗುತ್ತಿದೆ. ಆಧುನಿಕತೆ ಬೆಳೆದಂತೆ ಕೃತಕತೆ ಹೆಚ್ಚಾಗುತ್ತಿದೆ. ತಾಂತ್ರಿಕವಾಗಿ ಜನರು ಬೆಳೆಯುತ್ತಿದ್ದಾರೆ. ಆದರೆ ಇದರಿಂದ ಬಹಳ ಪರಿಣಾಮಗಳು ಎದುರಿಸುವ ಕಾಲ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಗೌರವ ಅತಿಥಿ ಶರಣಬಸವೇಶ್ವರ ದೇವಸ್ಥಾನದ ಆವರಣದ ಶಾಲಾ-ಕಾಲೇಜುಗಳ ಆಡಳಿತಧಿಕಾರಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ವಿಜ್ಞಾನ ಬೆಳೆವಣಿಗೆಯಿಂದ ಪ್ರತಿಹಂತದಲ್ಲೂ ಆಧುನಿಕತೆ ಬೆಳೆಯುತ್ತಿದೆ. ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು, ವೈಜ್ಞಾನಿಕವಾಗಿ ಬೆಳೆಯಲು ನಿರಂತರವಾಗಿ ಸಹಕಾರ ನೀಡುತ್ತಾರೆ ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕನಸ್ಸಿನಂತೆ ಡಿಜಿಟಲ್ ಇಂಡಿಯ, ಮೇಕ್ ಇನ್ ಇಂಡಿಯಾ ಆ ದಿಶೆಯಲ್ಲಿ ನಾವು ಸಾಗಬೇಕಾಗಿದೆ. ಇಂತಹ ವಿಚಾರಸಂಕಿರಣಗಳಿಂದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ ಮಾಹಿತಿ ಒದಗಿಸಲು ಸಾಧ್ಯವಿದೆ ಎಂದರು.

ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ.ಶರಣಬಸವಪ್ಪ ಮೈಸಲಗಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು, ಡಾ.ಸೀಮಾ ಪಾಟೀಲ ಪ್ರಾರ್ಥಿಸಿದರು. ಬಾಬುರಾವ ಮಡಿವಾಳ ನಿರೂಪಿಸಿ, ವಂದಿಸಿದರು.

ವೇದಿಕೆ ಮೇಲೆ ಮಹಾವಿದ್ಯಾಲಯ ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ ಇದ್ದರು. ವಿವಿಧ ವಿಶ್ವವಿದ್ಯಾಲಯಗಳಿಂದ ಅನೇಕ ಪ್ರಾಧ್ಯಾಪಕರು ಮತ್ತು ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಎರಡು ಗೋಷ್ಠಿಗಳು ನಡೆಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here