ಸಿಯುಕೆ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಸಭೆ

0
11

ಕಲಬುರಗಿ: “ಹಳೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ದೊಡ್ಡ ಆಸ್ತಿ. ಉದ್ಯೋಗಾವಕಾಶ, ಇಂಟರ್ನ್‍ಶಿಪ್, ಕೈಗಾರಿಕಾ ಭೇಟಿ, ಪಠ್ಯಕ್ರಮದ ಪರಿಶೀಲನೆ ಮತ್ತು ತರಗತಿಳಿಗೆ ಕೈಗಾರಿಕಾ ಅನುಭವವನ್ನು ತರುವಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಹಮ್ಮದ್ ಜೊಹೇರ್ ಹೇಳಿದರು.

ಜನವರಿ 28 ಮತ್ತು 29 ರಂದು ಬೆಂಗಳೂರಿನ ಅಕ್ಷಯ ಔರಾ ಹೋಟೆಲ್‍ನಲ್ಲಿ ನಡೆದ ವ್ಯವಹಾರ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಮುಂದುವರೆದು “ನಿರ್ವಹಣಾ ಸಂಸ್ಥೆಯ ಯಶಸ್ಸನ್ನು ಅದರ ವಿದ್ಯಾರ್ಥಿಗಳು ಪಡೆಯುವ ಉದ್ಯೋಗಾವಕಾಶದ ಆಧಾರದ ಮೇಲೆ ಅಳೆಯಲಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ನಾವು ನಮ್ಮ ವಿದ್ಯಾರ್ಥಿಗಳು ಉತ್ತಮ ಉದ್ಯೋಗಾವಕಾಶÀಗಳನ್ನು ಪಡೆಯುವಂತೆ ಮಾಡಿದ್ದೇವೆ. ಇಂದು ನಮ್ಮ ಹಳೆಯ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿದ್ದು ನೇಮಕಾತಿಯ ಉಸ್ತುವಾರಿಯನ್ನು ಹೊಂದಿದ್ದಾರೆ.

Contact Your\'s Advertisement; 9902492681

ಹೀಗಾಗಿ ಅವರು ತಮ್ಮ ಕಿರಿಯರಿಗೆ ಇಳ್ಳೆಯ ಉದ್ಯೋಗ ಪಡೆಯಲು ಸಹಾಯ ಮಾಡಬಹುದಾಗಿದೆ. ಪ್ರಸ್ತುತ ಬ್ಯಾಚ್‍ನ 9 ವಿದ್ಯಾರ್ಥಿಗಳು ಈಗಾಗಲೇ ಕ್ಯಾಂಪಸ್ ಪ್ಲೇಸ್‍ಮೆಂಟ್‍ನಲ್ಲಿ ಉದ್ಯೋಗ ಪಡೆದಿರುವುದು ನಮಗೆ ತುಂಬಾ ಹೆಮ್ಮೆ ತಂದಿದೆ. ಆದರೆ ನಮ್ಮ ಎಲ್ಲಾ ವಿದ್ಯಾರ್ಥಿಗಳು ಎಮ್. ಬಿ. ಎ. ಪೂರ್ಣಗೊಳಿಸುವ ಮೊದಲೇ ಇಳ್ಳೆಯ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗವಕಾಶಗಳನ್ನು ಪಡೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ” ಎಂದರು.

ಸಿಯುಕೆ ಡಿಬಿಎಸ್ ಅಲುಮ್ನಿ ಅಸೋಸಿಯೇಷನ್‍ನ ಅಧ್ಯಕ್ಷೆ ಮತ್ತು ಐ ಐ ಎಮ್ ನಾಗಪುರದ ಸಹಾಯಕ ಪ್ರಾಧ್ಯಾಪಕಿ ಡಾ. ರಂಜಿತಾ ಜಿ ಪಿ ಅವರು ‘ಎಮ್ ಬಿ ಎ ನಂತರ ವೃತ್ತಿ ಅವಕಾಶಗಳು’ ಕುರಿತು ಮಾತನಾಡಿ “ಹಲವು ವಿದ್ಯಾರ್ಥಿಗಳು ಉದ್ಯಮಕ್ಕೆ ಪ್ರವೇಶಿಸಲು ಬಯಸುತ್ತಾರೆ, ಕೆಲವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಲು ಬಯಸುತ್ತಾರೆ, ಕೆಲವರು ಸಂಶೋಧನೆ ಮತ್ತು ಶೈಕ್ಷಣಿಕ ವೃತ್ತಿಯನ್ನು ಆಯ್ಕೆ ಮಾಡುತ್ತಾರೆ, ಕೆಲವೇ ಕೆಲವು ಜನರು ಉದ್ಯಮಶಿಲರಾಗುತ್ತಾರೆ. ಆದರೆ ಸಮಸ್ಯೆಯೆಂದರೆ ನಾವು ಸರಿಯಾದ ಆಯ್ಕೆಯನ್ನು ಆರಿಸುವಲ್ಲಿ ವಿಫಲರಾಗಿದ್ದೇವೆ ಮತ್ತು ಪ್ರಯೋಗ ಮತ್ತು ದೋಷದಲ್ಲಿ ಕೊನೆಗೊಳ್ಳುತ್ತೇವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯಗಳ ವಿಶ್ಲೇಷಣೆ ಮಾಡಬೇಕು ಮತ್ತು ಅದಕ್ಕೆ ಅಉಗುಣವಾಗಿ ಸರಿಯಾದ ಆಯ್ಕೆಯನ್ನು ಆರಿಸಿಕೊಳ್ಳಬೇಕು.

ಹುಡುಗಿಯರಿಗೆ ಮಾರ್ಕೆಟಿಂಗ್ ಸೂಕ್ತವಲ್ಲ ಎಂಬ ತಪ್ಪು ಕಲ್ಪನೆಯಿದೆ. ಆದರೆ ಅದು ಹಾಗಲ್ಲ. ನಾನು ಎಮ್ ಬಿ ಎ ನಲ್ಲಿ ಮಾರ್ಕೆಟಿಂಗ್‍ನಲ್ಲಿ ಆಯ್ಕೆ ಮಾಡಿದ ಮೊದಲ ಹುಡುಗಿ ಮತ್ತು ಐಐಎಮ್ ಕೋಜಿಕೋಡ್‍ನಿಂದ ಮಾರ್ಕೆಟಿಂಗ್‍ನಲ್ಲಿ ಪಿಹೆಚ್ ಡಿ (ಎಫ್ ಪಿ ಎಮ್) ಪಡೆದ ಮೊದಲ ಹುಡುಗಿ ಯಾಗಿದ್ದೇನೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಹುಡುಗಿಯರಿಗೆ ಸಾಕಷ್ಟು ಅವಕಾಶಗಳಿವೆ. ಮಾರ್ಕೆಟಿಂಗ್ ಎಂದರೆ ಮಾರಾಟ ಮತ್ತು ನಗರದಿಂದ ನಗರಕ್ಕೆ ಮತ್ತು ಮನೆ ಮನೆಗೆ ತಿರುಗುವುದμÉ್ಟ ಅಲ್ಲ. ಬೋಧನೆ, ಜಾಹೀರಾತು, ಸಂಶೋಧನೆ, ಕನ್ಸಲ್ಟೆನ್ಸಿ ಇತ್ಯಾದಿ ಹಲವು ಕ್ಷೇತ್ರಗಳಿವೆ” ಎಂದು ಹೇಳಿದರು.

ಮತ್ತೊಬ್ಬ ಹಳೆಯ ವಿದ್ಯಾರ್ಥಿ ಡಾ.ವಾಸಿಂ ಅಕ್ರಮ್ ಬಿನ್ನಾಲ್, (ಪಿಎಚ್‍ಡಿ ಐಐಎಸ್‍ಸಿ, ಬೆಂಗಳೂರು), ಹಿರಿಯ ವ್ಯವಸ್ಥಾಪಕ ಡಾಟಾ ಸೈನ್ಸ್, ಒರಾಕಲ್, ಬೆಂಗಳೂರು ಅವರು ‘ಕಾಪೆರ್Çರೇಟ್‍ನಲ್ಲಿ ಅನಾಲಿಟಿಕ್ಸ್- ಡೇಟಾ ಸೈನ್ಸ್’ ಕುರಿತು ಮಾತನಾಡಿ “ಇಂದು ವಿಶ್ಲೇಷಣೆಯು (ಅನಾಲಿಟಿಕ್ಸ್) ಪ್ರತಿಯೊಂದು ನಿರ್ವಹಣಾ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಆದ್ದರಿಂದ ನಿರ್ವಹಣಾ ವಿದ್ಯಾರ್ಥಿಗಳು ದತ್ತಾಂಶ ವಿಶ್ಲೇಷಣೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಶ್ಲೇಷಣೆಯ (ಅನಾಲಿಟಿಕ್ಸ್) ಬಳಕೆಯ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಆದ್ದರಿಂದ ನಿರ್ವಹಣಾ ಶಾಸ್ತ್ರದ ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ಹಣಕಾಸು ಮತ್ತು ಇತರ ವಿಷಯಗಳ ಪಠ್ಯಕ್ರಮದಲ್ಲಿ ವಿಶ್ಲೇಷಣೆಗೆ (ಅನಾಲಿಟಿಕ್ಸ್) ಒತ್ತು ನೀಡಬೇಕು. ಇದು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.

ಸಹಾಯಕ ಪ್ರಾದ್ಯಾಪಕಿ ಡಾ.ಸಫಿಯಾ ಪರ್ವೀನ್ ಮಾತನಾಡಿ “ನಮ್ಮ ಹೆಚ್ಚಿನ ಹಳೆಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಅನುಕೂಲವಾಗುವಂತೆ ಈ ಸಭೆಯನ್ನು ಇಲ್ಲಿ ಆಯೋಜಿಸಲಾಗಿದೆ. ಈ ಸಭೆಯು ಪ್ರಸ್ತುತ ಬ್ಯಾಚ್ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ನಡುವೆ ಸೇತುವೆಯನ್ನು ನಿರ್ಮಿಸಲಿದೆ, ಇದು ಇಂಟರ್ನ್‍ಶಿಪ್ ಮತ್ತು ಪ್ಲೇಸ್‍ಮೆಂಟ್ ಅವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತದೆ” ಎಂದರು.

ಐಕ್ಯೂಎಸಿ ಸಂಯೋಜಕಿ, ವ್ಯವಹಾರ ಅಧ್ಯಯನ ವಿಭಾಗ, ಡಾ. ಶುμÁ್ಮ ಹೆಚ್ ಅವರು “ವಿದ್ಯಾರ್ಥಿಗಳನ್ನು ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ಸಿದ್ಧಗೊಳಿಸಲು ನಮ್ಮ ಎಂಬಿಎ ಪಠ್ಯಕ್ರಮವನ್ನು ಪರಿಶೀಲಿಸಲು ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ” ಎಂದರು.

ಹಳೆಯ ವಿದ್ಯಾರ್ಥಿಗಳ ಸಭೆಯ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ್ ಮಾತನಾಡಿ, “ನಮ್ಮ ಭವಿಷ್ಯದ ವ್ಯವಸ್ಥಾಪಕರು ಮತ್ತು ನಾಯಕರು ಸಾಮಾಜಿಕ ಕಾಳಜಿಯನ್ನು ಹೊಂದಿರಬೇಕು ಮತ್ತು ಕಾಪೆರ್Çರೇಟ್ ಆಡಳಿತದಲ್ಲಿ ಉನ್ನತ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳಬೇಕು. ಇದನ್ನು ಸಾಧಿಸಲು ನಮ್ಮ ದೃಷ್ಟಿಕೋನವನ್ನು ಪಾಶ್ಚಿಮಾತ್ಯದಿಂದ ಭಾರತೀಯ ಮೌಲ್ಯ ಆಧಾರಿತ ನಿರ್ವಹಣೆಗೆ ಬದಲಾಯಿಸುವ ಅವಶ್ಯಕತೆಯಿದೆ” ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಡಾ.ರಂಜಿತಾ ಜಿ.ಪಿ, ಉಪಾಧ್ಯಕ್ಷೆ ಸನಾ ಸೈಮಾ, ಕಾರ್ಯದರ್ಶಿಯಾಗಿ ರಾಘವೇಂದ್ರ ಐನಾಪುರ, ಜಂಟಿ ಕಾರ್ಯದರ್ಶಿಯಾಗಿ ಹುಚ್ಚರೆಡ್ಡಿ ಚಕೋಟಿ, ಖಜಾಂಚಿಯಾಗಿ ಸÀಂದೆಶ್ ಅಮ್ಮನ್ ಆಯ್ಕೆಯಾದರೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ವಾಶೀಂ ಅಕ್ರಮ್ ಬಿನ್ನಾಲ್, ರಾಜಕುಮಾರ್, ವಿಕಾಸ್ ಸಿಂಗ್, ರಾಜೀವ್, ಸಾಗರ್ ಜಾಧವ್, ನಿತೀಶ್ ಕುಮಾರ್ ಆಯ್ಕೆಯಾದರು.

2012-2022 ನೇ ಬ್ಯಾಚ್ನ ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here