ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ

0
34

ಕಲಬುರಗಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗ ಕಲಬುರಗಿಯಲ್ಲಿ ಸುಮಾರು 20 ವರ್ಷದಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸುತ್ತಿರುವ ಸಣ್ಣ ನೀರಾವರಿ ಮತ್ತು ಅಂತರ್ಜಾಲ ಅಭಿವೃದ್ಧಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ ಎಮ್. ನರೇಂದ್ರ ಕುಮಾರ ಇವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಎಮ್. ನರೇಂದ್ರಕುಮಾರ ಇವರು 20 ವರ್ಷದಿಂದ ಸಣ್ಣ ನೀರಾವರಿ ಉಪವಿಭಾಗ ಕಲುರಗಿಯಲ್ಲಿ ಜೆ.ಇ., ಎ.ಇ.ಇ ಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಕಳೆದ ಒಂದು ವರ್ಷದಿಂದ ಪ್ರಭಾರ ಕಾರ್ಯನಿರ್ವಾಹಕ ಅಭಿಯಂತರರು ಆಗಿ ಕಾರ್ಯನಿರ್ವಹಿಸುತ್ತಿದ್ದು, ಗುತ್ತಿಗೆ ಕಾಮಗಾರಿಗಳಲ್ಲಿ ಗುತ್ತಿಗೆ ನಿಯಮ ಪಾಲನೆ ಮಾಡದೆ ತಮಗೆ ಬೇಕಾದವರಿಗೆ ಕಾಮಗಾರಿಗಳನ್ನು ಅನುಮೋದನೆ ನೀಡುತ್ತಿದ್ದಾರೆ.

Contact Your\'s Advertisement; 9902492681

ಟೆಂಡರ ನಿಯಮ ಗಾಳಿಗೆ ತೂರಿ ಕಲಬುರಗಿ ಜಿಲ್ಲೆಯ ಗುತ್ತೇದಾರರಿಗೆ ವಂಚಿಸಿ ಅವರ ತಮ್ಮನಾದ ಮಹೀಂದ್ರರಾಜ ಮಧುರಾ ಕನ್ಸಟ್ರಕ್ಷನ್ ಬೆಂಗಳೂರು ಇವರ ಹೆಸರಿಗೆ ಕೋಟ್ಯಾಂತರ ರೂಪಾಯಿ ಗುತ್ತಿಗೆ ನೀಡಿ ಆಕ್ರಮವೆಸಗಿರುತ್ತಾರೆ. ಅದೇ ರೀತಿ ಹಾಸನ ಜಿಲ್ಲೆಯ ಗುತ್ತಿಗೆದಾರನಾದ ಹೆಮಂತ್ ಕುಮಾರ ಬಿ.ಟಿ, ಇವರಿಗೆ ಫ್ಲ್‍ಡ್ ಡ್ಯಾಮೇಜ್ ಯೋಜನೆ ಅಡಿಯಲ್ಲಿ ಸೈಯದ ಚಿಂಚೋಳಿ, ಯಳವಂತಗಿ ಟ್ಯಾಂಕ್, ಕುಮಸಿ ಕಾಮಗಾರಿಗಳನ್ನು ಟೆಂಡರ ನಿಯಮ ಉಲ್ಲಂಘಿಸಿ ಕಾಮಗಾರಿಗಳನ್ನು ಅನುಮೋದನೆ ನೀಡಿರುತ್ತಾರೆ.

ಎಲ್1 ಎಲ್.2 ಗುತ್ತೇದಾರನ ಹೊರತು ಪಡಿಸಿ ತಮಗೆ ಇಷ್ಟ ಬಂದ ಹಾಗೆ ಟೆಂಡರ ಕಾಮಗಾರಿಗಳಲ್ಲಿ ಅಕ್ರಮವೆಸಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಹಣ ವಂಚಿಸಿರುತ್ತಾರೆ. ಎಮ್. ನರೇಂದ್ರಕುಮಾರ ಇವರು ಸಣ್ಣ ನೀರಾವರಿ ವಿಭಾಗ ಕಲಬುರಗಿಯಲ್ಲಿ, ಈಗ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ಕಾರ್ಯನಿರ್ವಾಹಕ ಅಭಿಯಂತರರಾಗಿ ಪ್ರಭಾರ ವಹಿಸಿರುವುದರಿಂದ ಸಹಾಯಕ ಅಭಿಯಂತರರು. ಕಾಮಗಾರಿ ವೀಕ್ಷಿಸಿ ಗುಣಮಟ್ಟವನ್ನು ಪರೀಕ್ಷಿಸುವದಾಗಿರುತ್ತದೆ. ಕಾರ್ಯನಿರ್ವಾಹಕ ಅಭಿಯಂತರರದು ಚೆಕ್ ಮೇಜರ್ ಮೆಂಟ್ ಆಗಿರುತ್ತದೆ. ಆದ್ದರಿಂದ ಈ ಎರಡು ಹುದ್ದೆಗಳನ್ನು ನರೇಂದ್ರಕುಮಾರ ಒಬ್ಬರಿಗೆ ವಹಿಸಿರುವುದರಿಂದ ಬಹಳಷ್ಟು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ.

ಆದಕಾರಣ ತಕ್ಷಣವೇ ಇವರನ್ನು ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆಯಿಂದ ಬಿಡುಗಡೆಗೊಳಿಸಿ, ಇವರ ಮೂಲ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆಗೊಳಿಸಬೇಕು ಮತ್ತು ಇಲ್ಲಿಯವರೆಗೆ ಇವರ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳು ಮತ್ತು ಟೆಂಡರ ಅನುಮೋದನೆಯಲ್ಲಿ ಆಗಿರುವ ಆವ್ಯವಹಾರವನ್ನು ಸೂಕ್ತ ಕಾನೂನು ರೀತಿ ಸಮಗ್ರವಾಗಿ ತನಿಖೆ ನಡೆಸಿ ನರೇಂದ್ರಕುಮಾರ ಪ್ರಭಾರ ಕಾರ್ಯನಿರ್ವಾಹಕ ಅಭಿಯಂತರರು ಇವರ ಮೇಲೆ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಎಂ. ಬಡಿಗೇರ, ರಾಜ್ಯ ಕಾರ್ಯದರ್ಶಿ ಜಿ. ಶಿವಶಂಕರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೆರಮಗಿ, ತಾಲೂಕಾ ಅಧ್ಯಕ್ಷ ಜಗದೀಶ ಅಷ್ಟಗಿ, ಮೌನೇಶ ಸಾಥೈಖೇಡ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here