ಕಲಬುರಗಿ: ನಗರದ ಪ್ರಗತಿ ಕಾಲೂನಿ ಬಾಲಮಂದಿರದ ಹತ್ತಿರ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ನೂತನವಾಗಿ ಸ್ಥಾಪನೆಗೊಂಡ ಸ್ತ್ರೀ ಶಕ್ತಿ ಮಹಿಳಾ ಅಬಿವೃದ್ದಿ ಪತ್ತಿನ ಸಹಕಾರ ಸಂಘವನ್ನು ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಅವರು ಜೋತಿ ಬೇಳಗಿಸುವದರ ಮೂಲಕ ಉದ್ಘಟಿಸಿದರು.
ಮಾತನಾಡಿ ಕಲಬುರಗಿ ಜಿಲ್ಲೆಯಲ್ಲಿ ಮಹಿಳೆಯರ ಅಬ್ಯುದಯದ ಜೋತೆಗೆ ಸರ್ವತೊಮುಖ ಅಬಿವೃದ್ದಿ ಗಾಗಿ ಮಹಿಳೆಯರು ಸ್ವಂತ ಉದ್ಯೋಗದಲ್ಲಿ ತೊಡಗಿ ಸ್ವಾವಲಂಬಿ ಜೀವನ ಮತ್ತು ಬದುಕುವ ಸಾಗಿಸಲು ಸದರಿ ಪತ್ತನ ಸಹಕಾರ ಸಂಘ ಉಪಯುಕ್ತವಾಗಿದ್ದು ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು ವಿವಿದ ಕಸಬಿನಲ್ಲಿ ತೊಡಗಿಸಿಕೊಳ್ಳಲು ಅನೂಕುಲವಾಗಲು ಮಹಿಳೆಯರಿಗಾಗಿಯೆ ಸ್ಥಾಪನಯಾದ ಈ ಸಂಘ ಮುಂದಿನ ದಿನಗಳಲ್ಲಿ ಸಾಕಷ್ಟು ಅಬಿವೃದ್ದಿ ಸಾದಿಸುವದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಮಹಿಳೆಯರ ಕಲ್ಯಾಣಕ್ಕಾಗಿ ಸ್ವ ಸಾಹಾಯ ಸಂಘಗಳ ಮೂಲಕ ಹಲವಾರ ಯೋಜನೆಗಳು ಜಾರಿಗೆ ತಂದು ಸಾಕಷ್ಟು ಅನುದಾನ ನಿಡುತ್ತಿದ್ದು ಅದರ ಸದುಪಯೊಗ ಪಡೆಯಲು ಕರೆ ನಿಡಿದರು.
ಸಮಾರಂಭದಲ್ಲಿ ನವಿಕರಸಬುಹುದಾದ ಇಂದನ ಅಭಿವೃದ್ದಿ ಪ್ರದಿಕಾರ ಅಧ್ಯಕ್ಷರಾದ ಚಂದು ಪಾಟೀಲ, ವಿದಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಜಿಲ್ಲಾ ಸಹಕಾರ ಬ್ಯಾಂಕ ಉಪ ನಿಬಂದಕರಾದ ಶರಣಬಸ್ಸಪ್ಪ ಬೆಣ್ಣುರ್, ಭಾರತ ಸೇವಾದಳ ರಾಷ್ಟ್ರೀಯ ಸಂಚಾಲಕರು ವಕೀಲರಾದ ಲಕ್ಷ್ಮಣ ಆವುಂಟಿ ರವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಮಲ್ಲಮ್ಮ ಕಡ್ಲಾ ವಹಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷರಾದ ನರಸಮ್ಮ ಲಕ್ಷ್ಮಣ ಆವುಂಟಿ, ಸ್ಥಳಿಯ ಮಾಹಾನಗರ ಪಾಲಿಕೆ ಸದಸ್ಯರಾದ ವೆಂಕಮ್ಮ ಜಿ ಆರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸುವರ್ಣ ನಿಲಂಠ ರೆಡ್ಡಿ ಸ್ವಾಗತಿಸಿದರು. ಖಜಾಂಚಿ ಸ್ವೇತಾ ಲಿಂಗರಾಜ್ ವಂದಿಸಿದರು. ಶಿವರಾಜ್ ಅಂಡಗಿ ಕಾರ್ಯಕ್ರಮ ನಿರುಪಿಸಿದರು.ಸಂಘದ ನಿರ್ದೇಶಕರು, ಸೇರುದಾರರು ವಿವಿದ ತಾಲೂಕಿನಿಂದ ಸಂಘದ ಸದಸ್ಯರು, ಸ್ವ ಸಾಹಾಯ ಸಂಘದ ಮಹಿಳೆಯರು ಭಾಗವಹಿಸಿದರು.