ಕಲಬುರಗಿ: ಇದೇ ಫೆಬ್ರವರಿ 24 ರಿಂದ 26ರ ವರೆಗೆ ಜರುಗುವ ಮೂರು ದಿನಗಳ “ಕಲ್ಯಾಣ ಕರ್ನಾಟಕ ಉತ್ಸವ”ದಲ್ಲಿ ಪ್ರದೇಶದ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕಲಾವಿದರ ಆಯ್ಕೆ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿಗಳು ಝೂಮ್ ಮೀಟ್ ಮೂಲಕ ಏಳು ಜಿಲ್ಲೆಗಳ ಡಿ.ಸಿ., ಜಲ್ಲಾ ಪಂಚಾಯತ್ ಸಿ.ಇ.ಓ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕಲಾವಿದರ ಆಯ್ಕೆ ಕುರಿತಂತೆ ಒಮ್ಮತದ ನಿರ್ಧಾರ ತೆಗೆದುಕೊಂಡರು.
ಮುಖ್ಯ ವೇದಿಕೆಯಲ್ಲದೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಿಂದೂಸ್ತಾನಿ ಮತ್ತು ಶಾಸ್ತ್ರೀಯ ಸಂಗೀತ, ಬಯಲು ರಂಗಮಂದಿರದಲ್ಲಿ ವಚನ ಗಾಯನ, ಜಾನಪದ ಹಾಗೂ ಸುಗಮ ಸಂಗೀತ, ಕಲಬುರಗಿ ರಂಗಾಯಣದಲ್ಲಿ ನಾಟಕ ಹಾಗೂ ವಿ.ವಿ.ಯ ಗಾಂಧಿ ಸಭಾಂಗಣದಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲು ಮತ್ತು ಎಲ್ಲಾ ವೇದಿಕೆಯಲ್ಲಿಯೂ ಸ್ಥಳೀಯರಿಗೆ ಆದ್ಯತೆ ನೀಡಲು ನಿರ್ಧರಿಸಿದೆ.
7 ಜಿಲ್ಲೆಗಳಿಂದ ಸ್ಥಬ್ದಚಿತ್ರ: ಫೆಬ್ರವರಿ 24 ರಂದು ಕಲಬುರಗಿ ನಗರದಿಂದ ಗುಲಬರ್ಗಾ ವಿ.ವಿ. ವರೆಗೆ ಭವ್ಯ ಮೆರವಣಿಗೆಯಲ್ಲಿ ಪ್ರದೇಶದ ಜಿಲ್ಲೆಗಳಿಂದ ಆಯಾ ಜಿಲ್ಲೆಯ ಕಲೆ, ಸಾಹಿತ್ಯ, ಸಾಸಮ್ಕøತಿಕ ಹಿರಿಮೆ ಹಾಗೂ ಅಭಿವೃದ್ಧಿ ಬಿಂಬಿಸುವ ಸ್ಥಬ್ದಚಿತ್ರ ಪ್ರದರ್ಶನವಾಗಬೇಕು. ಪ್ರತಿ ಜಿಲ್ಲೆಯಿಂದ ಟ್ಯಾಬ್ಲೋ ತಯ್ಯಾರಿ ಮಾಡಬೇಕು ಎಂದು ಅನಿರುದ್ಧ ಶ್ರವಣ ಪಿ. ಅವರು ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿ.ಇ.ಓಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಕಲಬುರಗಿ ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಅ. ನಾಸಿ, ಕೆ.ಕೆ.ಆರ್.ಡಿ.ಬಿ. ಮಂಡಳಿಯ ಜಂಟಿ ಕಾರ್ಯದರ್ಶಿ ಪ್ರವೀಣ ಪ್ರಿಯಾ, ಹಣಕಾಸು ನಿಯಂತ್ರಕಿ ಅಕ್ಕಮಹಾದೇವಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ(ಗ್ರಾ.ಕೈ) ಉಪನಿರ್ದೇಶಕ ಅಬ್ದುಲ್ ಅಜೀಮ್, ಯುವ ಸಬಲೀಕರಣ ಮತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಇದ್ದರು.