ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೆರದಾಳ ಗ್ರಾಮದಮದರ ಸಾಯೇ ದಾರುಲ್ ಉಲ್ ಉಲುಮ್ ನಲ್ಲಿ ನೆರೆ ಸಂತ್ರಸ್ತರಿಗೆ ವಾಶಿಸಲು ಅನುಕೂಲ ಮಾಡಿಕೂಡುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದೆ.
ದಾರುಲ್ ಉಲುಮ್ ನಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳನ್ನು ಇರಿಸಲಾಗಿದ್ದು ಅವರಿಗೆ ಊಟದ ವ್ಯವಸ್ಥೆಯು ಮಾಡಲಾಗಿದೆ ಎಂದು ಮುಸ್ಲಿಂ ಯಂಗ್ ಕಮೀಟಿ ತೇರದಾಳ ಕಾರ್ಯಕರ್ತರು ಈ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಪೂರ್ಣ ಬೆಂಬಲ ನೀಡಿದ್ದಾರೆಂದು ಕಮಿಟಿಯ ಸಲಿಮ್ ತಾಂಬೋಳಿ ಅವರು ತೀಳಿಸಿದ್ದಾರೆ.
ಅಲ್ಲದೇ ನಾಳೆ ಈದ್ ಪ್ರಯುಕ್ತ ಎಲ್ಲಾ ಮುಸ್ಲಿಂ ಬಾಂಧವರು ಈ ಮದರಸಾದಲ್ಲೆ ನಮಾಜ್ ನಿರ್ವಹಿಸಿ ನೆರೆ ಸಂತ್ರಸ್ತರ ರಕ್ಷಣೆಗೆ ದುವಾ ಮಾಡಲಾಗುವುದೆಂದು ಕಮಿಟಿ ತಿಳಿಸಿದೆ,
ಈ ಸಂದರ್ಭದಲ್ಲಿ ಆಸಿಫ್ ಕಲಿಪಾ, ಮೆಹಬೂಬ್ ಜಮದಾರ್, ಅಲ್ತಾಫ್ ತಾಂಬೋಳಿ, ಮೋಶಿನ್ ಮೂಮಿನ್, ಚಾಂದ್ ಜಮದಾರ್, ಕಮಿಟಿಯ ಸದಸ್ಯರ ನೆರೆ ಸಂತ್ರಸ್ತರ ಸಹಾಯಕ್ಕೆ ಕೈ ಜೊಡಿಸಿದ್ದಾರೆ.