ಶಾಂತಿ. ನ್ಯಾಯಯುತ ಚುನಾವಣೆ ನಡೆಸಲು ಅಧಿಕಾರಿಗಳು ಕಾರ್ಯತತ್ಪರರಾಗಿ

0
17

ಕಲಬುರಗಿ: ಮುಕ್ತವಾಗಿ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಮೂಲ ಸೌಕರ್ಯ ಒದಗಿಸಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದರು.

ಶುಕ್ರವಾರದಂದು ಕಲಬುರಗಿಯ ಡಾ. ಎಸ್.ಎಂ.ಪಂಡಿತ ರಂಗಮಂದಿರಲ್ಲಿ ಸೆಕ್ಟರ್ ಅಧಿಕಾರಿಗಳ ತರಬೇತಿಯಲ್ಲಿ ಮಾತನಾಡಿ, ಸೆಕ್ಟರ್ ಅಧಿಕಾರಿಗಳು ತಮ್ಮ ಕರ್ತವ್ಯ ಪಾಲನೆ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಪೆÇೀಲಿಂಗ್ ಸ್ಟೇಶನ್‍ಗಳಲ್ಲಿ ವಿದ್ಯುಚ್ಚಕ್ತಿ, ಸಮಸ್ಯೆ ಹಾಗೂ ಕಟ್ಟಡ ದುರಸ್ತಿ ಏನಾದರೂ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು. ತಮಗೆ ನಿರ್ವಹಿಸಿದ ಕಾರ್ಯವನ್ನು ಈಗಿನಿಂದಲ್ಲೇ ಅಲ್ಲಿನ ಸಮಸ್ಯೆಗಳು ಅರಿತುಕೊಳ್ಳಬೇಕೆಂದು ಹೇಳಿದರು. ತಮಗೆ ನೀಡಲಿರುವ ತರಬೇತಿಯನ್ನು ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.

Contact Your\'s Advertisement; 9902492681

ಸಹಾಯಕ ಪ್ರಾಧ್ಯಾಪಕರು ಹಾಗೂ ರಾಷ್ಟ್ರಮಟ್ಟದ ತರಬೇತಿದಾರರಾದ ಡಾ.ಶಶಿಶೇಖರರೆಡ್ಡಿ ತರಬೇತಿದಾರರಾಗಿ ಮಾತನಾಡಿ, ಮತಗಟ್ಟೆ ಅಧಿಕಾರಿಗಳು, ಮಾರ್ಗಾಧಿಕಾರಿಗಳು ಬಿಎಲ್‍ಓಗಳು ಹಾಗೂ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಇಆರ್‍ಓ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸಿ ಜಿಲ್ಲಾಧಿಕಾರಿಯವರಿಗೆ ಕಾಲಕಾಲಕ್ಕೆ ವರದಿ ನೀಡಬೇಕೆಂದರು.

ಚುನಾವಣೆಯ ಸಂದರ್ಭದಲ್ಲಿ 10 ರಿಂದ 12 ಮತಗಟ್ಟೆಗಳ ಜವಾಬ್ದಾರಿಯನ್ನು ಸೆಕ್ಟರ್ ಅಧಿಕಾರಿಗಳು ಹೊಂದಿರುತ್ತಾರೆ. ರಾಜ್ಯ ಮತ್ತು ಕೇಂದ್ರದ ಕೆಲವು ಇಲಾಖೆಗಳ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಸೆಕ್ಟರ್ ಅಧಿಕಾರಿ ಎಂದು ನೇಮಕ ಮಾಡುತ್ತಾರೆ ಸೆಕ್ಟರ್ ಗುರಿ ಮತ್ತು ಉದ್ದೇಶಗಳು ಎಂದರೆ ಚುನಾವಣೆಯ ನಿರ್ವಹಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಮಾದರಿ ನೀತಿ ಸಂಹಿತೆ, ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆ, ಇವಿಎಂ ಗಳ ಕಾರ್ಯನಿರ್ವಹಣೆ, ಎಲ್ಲಾ ಅಧಿಕಾರಿಗಳು ಮಧ್ಯೆ ಸಮನ್ವಯತೆ ಸಾಧಿಸುವುದರ ಬಗ್ಗೆ ತಿಳಿಸಿದರು.

ಚುನಾವಣೆ ಘೋಷಣೆಯಾದ ದಿನ ಅಥವಾ ಅದಕ್ಕೂ ಮೊದಲಿನಿಂದ ಪ್ರಾರಂಭವಾಗಿ ಫಲಿತಾಂಶ ಘೋಷಣೆಯಾಗುವವರೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು. ಮತಗಟ್ಟೆಗಳು ಎಲ್ಲೆಲ್ಲಿ ಇವೆ ಮತ್ತು ಯಾವ ಮಾರ್ಗದಿಂದ ಕ್ರಮವಾಗಿ ಕ್ಷಿಪ್ರವಾಗಿ ಸಂಚರಿಸಬಹುದು ಎಂಬುದನ್ನು ಗುರುತಿಸಬೇಕೆಂದರು.

ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು, ಮತಯಂತ್ರಗಳ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡುವುದು, ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ಹೊಸದಾಗಿ ಸ್ಥಾಪಿಸಲ್ಪಟ್ಟ ಮತಗಟ್ಟೆಗಳಿದ್ದರೆ ಮತದಾರರಿಗೆ ಅವುಗಳ ಬಗ್ಗೆ ಸಾಕಷ್ಟು ಮೊದಲೇ ಮಾಹಿತಿ ನೀಡುವುದು.

ಮತದಾನಕ್ಕೆ 7 ದಿನಗಳ ಮೊದಲೇ ಸೆಕ್ಟರ್ ಅಧಿಕಾರಿಗೆ ವಲಯ ಮ್ಯಾಜಿಸ್ಟ್ರೇಯಲ್ ಅಧಿಕಾರಗಳನ್ನು ನೀಡಲಾಗುತ್ತದೆ, ಸಿಆರ್‍ಪಿಸಿ ಅನುಚ್ಚೇದ 144 ರ ಪ್ರಕಾರ, ತುರ್ತು ಸನ್ನಿವೇಶಗಳು ಉಂಟಾದರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ತಕ್ಷಣ ಆದೇಶಗಳನ್ನು ಹೊರಡಿಸಬಹುದು.

ಮತಗಟ್ಟೆಗಳಿಗೆ ತಲುಪಲು ಇರುವ ವಿವಿಧ ಮಾರ್ಗಗಳನ್ನು ಗುರುತಿಸಬೇಕು, ಪರ್ಯಾಯ ಮಾರ್ಗಗಳನ್ನು ಗುರುತಿಸಬೇಕು, ಶೀಘ್ರ ಮತ್ತು ಸುರಕ್ಷತವಾಗಿ ತಲುಪುವ ಮಾರ್ಗಗಳನ್ನು ಅಂತಿಮಗೊಳಿಸಬೇಕು. ರಸ್ತೆ, ಸೇತುವೆ, ನಾಲೆಗಳ ಸ್ಥಿತಿಗತಿ ತಿಳಿದುಕೊಳ್ಳಬೇಕೆಂದು ತರಬೇತಿಯಲ್ಲಿ ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ನೀಡಿದರು.

ವೇದಿಕೆ ಮೇಲೆ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಡಿ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸೇರಿದಂತೆ, ಎ.ಸಿ.ಪಿ. ದೀಪನ್, ಸಹಾಯಕ ಆಯುಕ್ತ ಮಮತಾ ಕುಮಾರಿ ಕಲಬುರಗಿ ಗ್ರೇಡ್-1 ತಹಶೀಲ್ದಾರ ಮಾಧುರಾಜ ಸೇರಿದಂತೆ ಪೆÇೀಲಿಸ ಇಲಾಖೆ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here