ನೀರು ಸರಬರಾಜು ಹೊರಗುತ್ತಿಗೆ ನೌಕರಿಂದ ಪ್ರತಿಭಟನೆ

0
14

ಕಲಬುರಗಿ: ನೀರು ಸರಬರಾಜು ಹೊರಗುತ್ತಿಗೆ ನೌಕರನ ಮೇಲೆ ಸುಳ್ಳು ದೂರನ್ನು ವಾಪsf, . ಗ್ರಾಚುಟಿ ನೌಕರರಿಗೆ ಗುರುತಿನ ಚೀಟಿ (ಐ.ಡಿ ಕಾರ್ಡ) ನೌಕರ ಮರಣ ಹೊಂದಿದ್ದರೆ ಅವರ ಕುಟುಂಬ ಅವಲಂಬಿತರಿಗೆ ನೌಕರಿ ಹಾಗೂ 18 ತಿಂಗಳ ಬೇಹದ ಪರಿಹಾರ, ಕಾರ್ಮಿಕ ಇಲಾಖೆ ಆದೇಶ ಪ್ರಕಾರ ಕನಿಷ್ಠ ವೇತನ ಜಾರಿ ಹಾಗೂ ವೇತನ ಸಹಿತ ರಜೆ, ಮಹಿಳಾ ಹೊರಗುತ್ತಿಗೆ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ, ಹೊರಗುತ್ತಿಗೆ ನೌಕರರು ಕೆಲಸದ ಸಂದರ್ಭದಲ್ಲಿ ಮರಣ ಹೊಂದಿದ್ದರೆ ಅವಲಂಬಿತರ ಕುಟುಂಬಕ್ಕೆ ರೂ.10.00 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಗುತ್ತಿಗೆ ಪದ್ದತ್ತಿ ಆಗ್ರಹಿಸಿ ಕಲಬುರ್ಗಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘ ವತಿಯಿಂದ ನಗರದ ಜಿಲ್ಲಾ ಅಧಿಕಾರಿ ಮೂಲಕ ಸರ್ಕಾರ ಮನವಿ ಸಲ್ಲಿಸಿದರು ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಈ ಹಿಂದೆ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಮೂಲಕ ನೀರು ಸರಬರಾಜು ಮತ್ತು ನಿರ್ವಹಣೆ ಜವಾಬ್ದಾರಿ ಹೊಂದಿತ್ತು. ಆದರೆ ಕಳೆದ 15 ತಿಂಗಳಿಂದ ಈಗಿನ ಸರ್ಕಾರದ ಖಾಸಗೀಕರಣ ನೀತಿಯಿಂದಾಗಿ ಸುಮಾರು 10-15 ವರ್ಷಗಳಿಂದ ಸೇವೆ ಸಲ್ಲಿಸಿದ ನೀರು ಸರಬರಾಜು ಮತ್ತು ನಿರ್ವಹಣೆ ಹೊರಗುತ್ತಿಗೆ ನೌಕರರನ್ನು ಸೇವಾ ಭದ್ರತೆ ಒದಗಿಸದ ಸರ್ಕಾರವು ಏಕಾ ಏಕಿ ಎಲ್‍ಆಂಡ್‍ಟಿ ಕಂಪನಿಗೆ ಹಸ್ತಾಂತರಿಸುವುದು ಸಾವಿರಾರು ಹೊರಹುತ್ತಿಗೆ ನೌಕರರಿಗೆ ಅವರ ಕುಟುಂಬಗಳಿಗೆ ಭಾರಿ ತೊಂದರೆ ಉಂಟು ಮಾಡಿದೆ. ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಜನರಿಗೆ ನೀರು ಸರಬರಾಜು ಮಾಡುವ ಕಾಯಕದಲ್ಲಿ ತೊಡಗಿರುವ ನೌಕರರಿಗೆ ಸರ್ಕಾರ ಇಂದಿಲ್ಲ ನಾಳೆ ದುಡಿಮೆಗೆ ತಕ್ಕ ಮೌಲ್ಯ ನೀಡಿ ನೇರ ಪಾವತಿ, ತಾಯಂ ಮಾಡುತ್ತದೆ ಎಂದು ನಂಬಿದ ನೌಕರರಿಗೆ ಸರಕಾರ ದ್ರೋಹ ಬಗೆಯುತ್ತಿದೆ.

Contact Your\'s Advertisement; 9902492681

ಹಿಂದಿನ ಸರ್ಕಾರ ಕರ್ನಾಟಕ ರಾಜ್ಯ ಪತ್ರದಲ್ಲಿ ಸರ್ಕರದ ಆದೇಶ ಸಂಖ್ಯೆ:ಕಾಇ/275/ಎಲ್.ಡಬ್ಲ್ಯೂ ಎ/2ನೇ ನವೆಂಬರ 2006, 1970ರ ಗುತ್ತಿಗೆ ಕಾರ್ಮಿಕ ನಿಯಂತ್ರಣ ಮತ್ತು ರದ್ದತ್ತಿ ಕಾಯ್ದೆ ಕಲಂ 10ರ ಅಡಿ ಪ್ರದತ್ತವಾದ ಅಧಿಕಾರವನ್ನು ಸರ್ಕಾರ ಚಲಾಯಿಸಿ, ಮಂಗಳೂರು, ಗುಲಬರ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಮಹಾನಗರ ಪಾಲಿಕೆಗಳಲ್ಲಿನ ನೀರು ಸರಬರಾಜು ವಿಭಾಗಗಳಲ್ಲಿನ ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶ ನೀಡಿದೆ.

ಈ ಆದೇಶವನ್ನು ಜಾರಿ ಮಾಡದೇ ಸರಕಾರ ನೌಕರರಿಗೆ ಅನ್ಯಾಯ ಮಾಡಿರುವುದು ಸ್ಪಷ್ಟವಾಗಿರುತ್ತದೆ. ನೀರು ಸರಬರಾಜು ಹೊರಗುತ್ತಿಗೆ ನೌಕರರ ವೇತನವು ಸ್ಥಳೀಯ ಸಂಪನ್ಮೂಲವಾದ ನೀರಿನ ಕರವಸೂಲಿ ಮೂಲಕ ಸಂಗ್ರಹಿಸಿದ ಹಣದಿಂದ ವೇತನ ನೀಡುತ್ತಿದ್ದು, ಇದರಿಂದ ಸರ್ಕಾರದ ಖಜಾನೆಗೆ ಯಾವುದೇ ಹೊರೆಯಾಗುವುದಿಲ್ಲ ಮತ್ತು ಇದರಿಂದ ಮದ್ಯವರ್ತಿ ಗುತ್ತೇದಾರರಿಗೆ ನೀಡುವ, ಕಮೀಷನ ಸರ್ಕಾರಕ್ಕೆ ಉಳಿತಾಯವಾಗುತ್ತದೆ.

ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆ ನೀರು ನಿರ್ವಹಣೆ ಮತ್ತು ಸಿಬ್ಬಂದಿಗಳನ್ನು ಎಲ್ ಎನ್ ಟಿ ಕಂಪನಿಗೆ ಹಸ್ತಾಂತರ ಮಾಡಿದ ನೌಕರರಿಗೆ ಪ್ರತಿ ತಿಂಗಳು ಸರಿಯಾದ ವೇತನ ಸಿಗುತ್ತಿಲ್ಲ. ಕಳೆದ ಮೇ ನಿಂದ ಇ.ಎಸ್.ಐ & ಪಿ.ಎಫ್ ತುಟ್ಟಿ ಭತ್ಯೆ ನೀಡದೇ ತೊಂದರೆ ನೀಡುತ್ತಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ 8 ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಓಟಿ ನೀಡದೆ ದಿನಕ್ಕೆ 15 ರಿಂದ 16 ಗಂಟೆ ದುಡಿಸಿಕೊಳ್ಳುತ್ತಾರೆ. ಮನೆಯಲ್ಲಿ ಸತ್ತರೂ, ಏನೇ ಕಷ್ಟ ಇದ್ದರೂ ಕೂಡ ಕೆಲಸಕ್ಕೆ ಬರಬೇಕೆಂಬ ಒತ್ತಡ ಹೇರುತ್ತಾರೆ ಹಿಂದಿ ಭಾಷೆಯಲ್ಲಿ ಅತ್ಯಂತ ಕೀಳು ಮಟ್ಟದ ಬೈಗುಳಗಳಿಂದ ನಿಂದಿಸುತ್ತಾರೆ.

ಮಹಿಳೆಯರ ಬಗ್ಗೆ ಅಗೌರವ-ಅಸಭ್ಯ ವರ್ತನೆ, ಏಕ ವಚನದ ಪದ ಬಳಕೆ ನಿಂದನೆ ನಿರಂತರವಾಗಿದೆ. ಕಳೆದ 2 ತಿಂಗಳ ಹಿಂದೆ ಕಲಬುರಗಿಯಲ್ಲಿ ಬಾಕಿ ವೇತನ, ಕಡಿಮೆ ವೇತನ ನೀಡಿರುವ ಹಾಗೂ ಇ.ಎಸ್.ಐ & ಪಿ.ಎಫ್ ತುಟ್ಟಿ ಭತ್ಯೆ ನೀಡದೇ ಇರುವ ಕುರಿತು ಅಧಿಕಾರಿಗಳಿಗೆ ಕೇಳಲು ಹೋದರೆ ನೌಕರರ ಮೇಲೆ ಸುಳ್ಳು ಕೇಸು ದಾಖಲು ಮಾಡಿದ್ದಾರೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಎಲ್ ಆಂಡ್ ಟಿ ಕಂಪನಿಯವರ ದುರಾಡಳಿತ ಮತ್ತು ಆನಾವಶ್ಯಕ ಹಲವು ವರ್ಷಗಳಿಂದ ಉತ್ತಮ ಕೆಲಸ ಮಾಡಿರುವ ಪರಿಣಿತ ನೌಕರರನ್ನು ಕೆಲಸದಿಂದ ತೆಗೆದ ಪರಿಣಾಮವಾಗಿ ನೀರು ನಿರ್ವಹಣೆಯಲ್ಲಿ ಭಾರಿ ತೊಂದರೆಯಾಗಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಬೆಂಬಲದಿಂದ ಹಾಗೂ ನೌಕರರ ಹೋರಾಟದಿಂದ ಎಲ್&ಟಿ ಕಂಪನಿಯಿಂದ ಮತ್ತೆ ಸರ್ಕಾರಕ್ಕೆ ನೀರು ನಿರ್ವಹಣೆ ಜವಾಬ್ದಾರಿ ವಹಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಆದರಿಂದ ಸಾವಿರಾರು, ನೌಕರರ ಕುಟುಂಬಗಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ ಆಂಡ್ ಟಿ ಕಂಪನಿಗೆ ಹಸ್ತಾಂತರ ಮಾಡಿರುವ ಧೋರಣೆಯನ್ನು ಹಿಂಪಡೆದು ನೀರು ಸರಬರಾಜು ನೌಕರರನ್ನು ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡುವಂತೆ ಮುಂಬರುವ ಅಧಿವೇಶನದಲ್ಲಿ ನಿರ್ಣಯ ಮಾಡಬೇಕು . ನೀರು ಸರಬರಾಜು ಹೊರುಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ಕೂಡಲೇ ನೇರ ಪಾವತಿಗೆ ಪರಿಗಣಿಸಬೇಕು.

ಪ್ರಧಾನ ಕಾರ್ಯದರ್ಶಿ ನಾಗರಾಜ ಗೋಗಿ, ಉಪಾಧ್ಯಕ್ಷ ನಾರಾಯಣ ರಂಗದಾಳ, ಸಹ ಕಾರ್ಯದರ್ಶಿ ಜ್ಯೋತಿ ಸಿಂಗ,  ಸಂಘಟನಾ ಕಾರ್ಯದರ್ಶಿ ಅನೀಲ ಮಂಗಾ,  ಕಾರ್ಯದರ್ಶಿ ಯುನುಸ ಹಜಾರೆ, ವಲಯ ಅಧ್ಯಕ್ಷ ಸುನೀಲ್ ಮಾರುತಿ ಮಾನಪಡೆ, ಸಹ ಕಾರ್ಯದರ್ಶಿ ಸಮೀರ ಬಾಲಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here